ಕುಂದಾಪುರ ಸಹಾಯಕ ಧರ್ಮಗುರು ರೋಯ್ ಲೋಬೊಗೆ ಬಿಳ್ಕೊಡುಗೆ: ಫಾ|ರೋಯ್ ಲೋಬೊ ಅತ್ಯಂತ ಪ್ರತಿಭೆಯುಳ್ಳವರು- ಫಾ ಸ್ಟ್ಯಾನಿ ತಾವ್ರೊ

ಕುಂದಾಪುರ ಸಹಾಯಕ ಧರ್ಮಗುರು ರೋಯ್ ಲೋಬೊಗೆ ಬಿಳ್ಕೊಡುಗೆ: ಫಾ|ರೋಯ್ ಲೋಬೊ ಅತ್ಯಂತ ಪ್ರತಿಭೆಯುಳ್ಳವರು- ಫಾ ಸ್ಟ್ಯಾನಿ ತಾವ್ರೊ


ಕುಂದಾಪುರ,ಮೆ: ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಒಂದು ವರ್ಷದಿಂದ ಸೇವೆಗೈಯುತ್ತಿರುವ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಇವರಿಗೆ ಕಾರ್ಕಳ ಅತ್ತೂರಿನ ಮೈನರ್ ಬಾಸಿಲಿಕಾಗೆ ಸಹಾಯಕ ಯಾಜಕರಾಗಿ ವರ್ಗಾವಣೆಗೊಂಡ ಪ್ರಯುಕ್ತ ಅವರಿಗೆ ‘ಕುಂದಾಪುರ ದೇವ ಪ್ರಜೆಗಳಿಂದ ಬಿಳ್ಕೊಡುಗೆ ಸಮಾರಂಭ ನೆಡೆಯಿತು.
ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ’ಫಾ|ರೋಯ್ ಲೋಬೊ ನಾನು ಕಂಡ ಸಹಾಯಕ ಧರ್ಮಗುರುಗಳಲ್ಲಿ ಅತ್ಯಂತ ಪ್ರತಿಭೆಯುಳ್ಳವರು, ಅವರು ಎಲ್ಲಾ ಜವಾಬ್ದಾರಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತಿದ್ದರು, ಧಾರ್ಮಿಕ ಕ್ರಿಯೆಗಳಲ್ಲಿ, ಸಂಘ ಚತುವಟಿಕೆಯಲ್ಲಿ, ಗಾಯನ ಮಂಡಳಿಯ ನಿರ್ವಹಣೆ, ಆಯೋಗಗಳ ಚಟುವಟಿಕೆಯಲ್ಲಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ, ಹಾಗೆ ಅವರು ಬಹಳ ಶಿಸ್ತಿನವರಾಗಿದ್ದು, ಮಕ್ಕಳಲ್ಲಿ ಶಿಸ್ತು ಭಕ್ತಿ ಹೆಚ್ಚಿಸುವಲ್ಲಿ ಶ್ರಮಿಸಿದ್ದಾರೆ’ ಎಂದು ಅವರು ಫಾ. ರೋಯ್ ಬಗ್ಗೆ ಅಭಿಮಾನದಿಂದ ಹೇಳಿ ಮುಂದಿನ ಧಾರ್ಮಿಕ ಜೀವನಕ್ಕೆ ಶುಭ ಕೋರಿದರು.
ಫಾ|ರೋಯ್ ಲೋಬೊ ತಮ್ಮ ಅನಿಸಿಕೆಯನ್ನು ವ್ಯಕ್ತ ಮಾಡಿ ‘ನಾನು ಇಲ್ಲಿ ಧಾರ್ಮಿಕ ಸೇವೆ ನೀಡುವಾಗ ಪ್ರಧಾನ ಧರ್ಮಗುರುಗಳು ಉತ್ತಮವಾದ ಸಹಕಾರ, ಉತ್ತಮ ಸಲಹೆಗಳನ್ನು ನೀಡಿದ್ದಾರೆ, ಇಲ್ಲಿ ನಾನು ಉತ್ತಮ ಸೇವೆ ನೀಡಲು ಪ್ರಯತ್ನಿಸಿದ್ದೆನೆ, ನನ್ನ ಮುಂದಿನ ಧಾರ್ಮಿಕ ಜೀವನ ಉತ್ತಮ ರೀತಿಯಲ್ಲಿ ನೆಡೆಸಿಕೊಂಡು ಹೋಗಲು ನಿಮ್ಮ ಪ್ರಾರ್ಥನೆ ಅಗತ್ಯ’ಎಂದು ಅವರು ಕ್ರತಜ್ನತೆ ಸಲ್ಲಿಸಿದರು.
ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಫಾ|ರೋಯ್ ಲೋಬೊರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ. ಇನ್ನೊಮ್ಮೆ ನಿಮ್ಮ ಸೇವೆ ನಮ್ಮ ಚರ್ಚಿಗೆ ಸಿಗಲೆಂದು ಹಾರೈಸಿದರು. ಸಂತ ವಿಶೆಂತ್ ಪಾವ್ಲ್ ಸಭೆಯ ಅಧ್ಯಕ್ಷ ಸನ್ಮಾನ ಪತ್ರವನ್ನು ವಾಚಿಸಿದರು, ಧರ್ಮಗುರುಗಳು ಅತಿಥಿಗಳು ಸನ್ಮಾನ ಪತ್ರ, ಫಲ ಪುಷ್ಪಗಳನ್ನು ನೀಡಿ ಗೌರವಿಸಿದರು. ಚರ್ಚ್ ಗಾಯನ ಮಂಡಳಿಯ ಪರವಾಗಿ ಪಾಸ್ಕಲ್ ಡಿಸೋಜಾ ಮತ್ತು ಪಂಗಡ ಬೀಳ್ಕೋಡುಗೆ ಗೀತೆ ಹಾಡಿ ಗೌರವಿಸಿದರು. ವೇದಿಕೆಯಲ್ಲಿ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್, ನೂತನ ಗುರು ದೀಕ್ಷೆ ಪಡೆದ ಫಾ|ಜೊವೆಲ್ ಒಲಿವೆರಾ, ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ವಾಯ್ಲೆಟ್ ತಾವ್ರೊ ಉಪಸ್ಥಿತರಿದ್ದರು. ಕುಂದಾಪುರ ಚರ್ಚಿನ ಭಕ್ತರೆಲ್ಲರೂ ಅವರನ್ನು ಪುಸ್ಪ, ಹೂಗುಚ್ಚ ನೀಡಿ ಶುಭ ಕೋರಿದರು. ಸಂತ ಜುಜೆ ವಾಜ್ ವಾಳೆಯ ಗುರಿಕಾರ, ಕುಂದಾಪುರ ಕಥೊಲಿಕ್ ಸಭೆಯ ನೀಯೊಜಿತ ಅಧ್ಯಕ್ಷ  ಬರ್ನಾಡ್ ಡಿಕೋಸ್ತಾ  ವಂದಿಸಿದರು. ಕಿರು ಸಮುದಾಯದ ಸಂಯೋಜಕಿ ಎಲಿಜಾಬೆತ್ ಡಿಸೋಜಾ ಕಾರ್ಯಕ್ರನವನ್ನು ನಿರ್ವಹಿಸಿದರು