JANNNUDI.COM NETWORK
ಕುಂದಾಪುರ ಸರಾಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಕ್ಷುಲಕ ಕಾರಣಗಳಿಂದ ಅಮಾನತುಗೊಳಿಸಿದಕ್ಕೆ K.E.T ಯಿಂದ ತಡೆಯಾಜ್ಞೆ –ಡಾ|ರೋಬರ್ಟ್ ಪುನರಾಧಿಕಾರ ಸ್ವೀಕಾರ
ಕುಂದಾಪುರ, ಡಿ.10: ಕ್ಷುಲಕ ಕಾರಾಣಗಳಿಂದಾಗಿ ಮೌಖಿಕ ದೂರುಗಳಿಂದಾಗಿ ಕುಂದಾಪುರ ಆಡಳಿತ ವೈದ್ಯಧಿಕಾರಿ ಡಾ|ರೋಬರ್ಟ್ ರೆಬೆಲ್ಲೊ ಇವರನ್ನು ಅಮಾನತು ಗೊಳಿಸಿದ ಸರಕಾರದ ಅದೇಶವನ್ನು ಕರ್ನಾಟಕ ಎಡ್ಮಿಸ್ಟ್ರೇಷನ್ ಜ್ಯೂಡಿಸಿಯಲ್ (K.E.T.) ತಡೆ ಆಜ್ಞೆಯನ್ನು ನೀಡಿದೆ. ತಡೆಯಾಜ್ಞೆಯ ಪ್ರಕಾರ ಅವರು ಇಂದು ಅವರು ಕುಂದಾಪುರ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿಯಾಗಿ ಪುನರಾಧಿಕಾರ ಸ್ವೀಕಾರ ಮಾಡಿದರು.
‘ನನ್ನ ಮೇಲೆ ಕ್ಷುಲಲ ಕಾರಣಕ್ಕೆ ಅದೂ ಸೂಕ್ತವಲ್ಲದ ಕಾರಣ ಮೌಖಿಕವಾಗಿ ಆರೋಪಿಸಿ ಅಮಾನತು ಗೊಳಿಸಿದ್ದರು, ನನ್ನ ಮೇಲೆ ಆರೋಪ ಎನೆಂದರೆ ನಾನು ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ನಂದಿಕೇಶ್ವರ ದೇವಾಲಯದ ಲೆಕ್ಕಾಚಾರವನ್ನು ನೀಡಿಲ್ಲವೆಂದು, ಅದೂ ದಾಖಲೆಯ ರೂಪದಲ್ಲಿ ಅಲ್ಲಾ, ಮೌಖಿಕವಾಗಿ ಆರೋಪಿಸಿದ್ದರು. ಆದರೆ ಈ ಲೆಕ್ಕಾಚಾರ ನನ್ನ ಅವಧಿಯದಲ್ಲಾ, ಅನ್ಯ ಧರ್ಮಿಯರು ನಂದಿಕೇಶ್ವರ ದೇವಳ ಸಮಿತಿಯ ಅಧ್ಯಕ್ಷರಾಗಬಾರದು ಗ್ರಾಮಾ ಪಂಚಾಯತ್ ಸಭೆಯಲ್ಲಿ ಮಾತು ಬಂದಾಗ ನಾನು ಹಲವು ತಿಂಗಳ ಹಿಂದೆಯೆ ಈ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದೆನೆ. ಲೆಕ್ಕಾಚಾರ ನೀಡಬೇಕಾದದ್ದು ಬೇರೆಯೆ ವೈದ್ಯಾಧಿಕಾರಿಯಾಗಿದ್ದಾರೆ. ಆದರೆ ನಾನು ಈ ಆಸ್ಪತ್ರೆಯಲ್ಲಿ ಶಿಸ್ತು ಬದ್ದವಾಗಿ ಆಡಳಿತ ನಡೆಸುವುದು ಕೆಲವರಿಗೆ ತೊಂದರೆಯಾಗುತಿದ್ದ ಕಾರಣ ನನ್ನನ್ನು ಕ್ಷುಲಕ್ಕ ಕಾರಣಕ್ಕೆ ಅಮಾನತುಗೊಳಿಸುವ ಪ್ರಯತ್ನ ನಡೆದಿದೆ’ ಎಂದು ಡಾ|ರೊಬರ್ಟ್ ಪತ್ರಕರ್ತರಿಗೆ ತಿಳಿಸಿದರು.
‘ಕುಂದಾಪುರ ಆಸ್ಪತ್ರೆಯಲ್ಲಿ 10 ಜನ ಸ್ಪೆಷಲಿಶ್ಟ್ ವೈದ್ಯರಿದ್ದಾರೆ ಅವರಲ್ಲಿ ಕೆಲವರು ಸರಿಯಾದ ವೇಳೆಗೆ ಸೇವೆಗೆ ಬರುವುದಿಲ್ಲಾ. ಸರಕಾರಿ ಆಸ್ಪತ್ರೆ ಇರುವುದು ಬಡವರ ಸೇವೆಗಾಗಿ, ಬಡವರಿಗೆ ಅಗತ್ಯವಾಗಿ ಸಂದರ್ಭಾನುಸಾರ ವೇಳೆ ವೇಳೆಯಲ್ಲಿ ಸೇವೆ ಸಿಗಬೇಕು. ಕೆಲವು ವೈದ್ಯರು ಕುಂದಾಪುರ ತಾಲೂಕಿನಿಂದ ಹೊರಗೆ ತಮ್ಮ ಕ್ಲಿನಿಕಗಳನ್ನು ತೆರೆದಿದ್ದಾರೆ. ಕಾನುನೂ ಪ್ರಕಾರ ನಮ್ಮ ಆಸ್ಪತ್ರೆಯಿಂದ 8 ಕಿ,ಮಿ ದೂರ ಉಳಿಯುವಂತಿಲ್ಲಾ. ಅವರು ಸರಕಾರ ಕೊಡುವ ವಸತಿ ಸೌಕರ್ಯದಲ್ಲಿ ಉಳಿಯಬೇಕು, ಕೆಲವರು ಉಳಿಯುವುದಿಲ್ಲಾ. ಜನೆರಿಕ್ ಔಷಧಿಗಳನ್ನು ಬರೆದುಕೊಡದೆ ಹೊರಗಿನ ಔಷಧಿಗಳನ್ನು ಬರೆದು ಕೊಡುತ್ತಾರೆ ಅದನ್ನು ವಿಚಾರಿಸಿದಕ್ಕೆ ನನ್ನ ಮೇಲೆಯೆ ಕುತಂತ್ರಗಳನ್ನು ಮಾಡುತಿದ್ದಾರೆ.ನನ್ನ ಅವಧಿಯಲ್ಲಿ ಈ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಒಳ್ಳೆಯ ಸೇವೆ ನೀಡಬೇಕುಂಬುದು ನನ್ನ ಉದ್ದೇಶ. ಈ ಸರಾಕಾರಿ ಆಸ್ಪತೆಯಿಂದ ಎಲ್ಲರಿಗೂ ಕ್ಲಪ್ತ ಸಮಯದಲ್ಲಿ ಸೇವೆ ಸೂಕ್ತ ಸೇವೆ ಸಲ್ಲಿಸಬೇಕು’ ಎಂಬುದು ನಮ್ಮ ಉದ್ದೇಶ. ಎಂದು ಅವರು ಹೇಳಿದರು.
ಡಾ|ರೋಬರ್ಟ್ ಪತ್ರಕರ್ತ ಸಮ್ಮುಖದಲ್ಲೆ ತಡವಾಗಿ ಆಗಮಿಸಿದ ವೈದ್ಯೆಯನ್ನು ತರಾಟೆಗೆ ತೆಗೆದುಕೊಂಡರು. ಅದೇ ವೇಳೆಯಲ್ಲಿ ಸಮಾಜ ಸೇವಕಿ ರಾಧದಾಸ್ ಕೆಲವು ಕಾರ್ಯಗಳಿಂದ ಸರಕಾರಿ ಆಸ್ಪತ್ರೆಯಿಂದ ತೊಡಕಾಗಿದ್ದಕ್ಕೆ ಆ ಮಹಿಳಾ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಕಥೊಲಿಕ್ ಸಭೆಯ ಕುಂದಾಪುರ ವಲಯದ ಅಧ್ಯಕ್ಷ ಎರಿಕ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಲೀನಾ ತಾವ್ರೊ, ಕುಂದಾಪುರ ಕಥೊಲಿಕ್ ಸಭೆಯ ಅಧ್ಯಕ್ಷ ವಾಲ್ಡರ್ ಜೆ. ಡಿಸೋಜಾ, ಕಾರ್ಯದರ್ಶಿ ವಿಲ್ಸನ್ ಡಿಆಲ್ಮೇಡಾ, ನಿಯೋಜಿತ್ ಅಧ್ಯಕ್ಷ ಬರ್ನಾಡ್ ಜೆ. ಕೋಸ್ತಾ, ಮುತಾಂದ ಹಲವಾರು ಮುಖಂಡರು, ರಾಜಕಾರಣಿ ಜಾಕೋಬ್ ಸಂತಾನ್ ಡಿಸೋಜಾ, ದೇವಕಿ ಸಣ್ಣಯ್ಯ ಮತ್ತು ಇನ್ನಿತರ ಹಲವಾರು ಮುಖಂಡರು ಉಪಸ್ಥಿತರಿದ್ದರು.