ಕುಂದಾಪುರ ಸಂತ ವಿನ್ಸೆಂಟ್ ಪಾವ್ಲ್ ಸಭಾದ ಅಧ್ಯಕ್ಷೆಯಾಗಿ ಸೆರಾಫಿನ್ ಡಿಸಿಲ್ವಾ –ವಲಯ ಅಧ್ಯಕ್ಷರಾಗಿ ಅಂತೋನಿ ಡಿಸೋಜಾ

ಕುಂದಾಪುರ,ಡಿ.13: ಕುಂದಾಪುರ ಚರ್ಚ್ ಘಟಕದ ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸೆರಾಫಿನ್ ಡಿಸಿಲ್ವಾ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಲೇರಿಯನ್ ಡಿಸೋಜಾ ಮತ್ತು ವಿಕ್ಟರ್ ಡಿಸೋಜಾ, ಹಾಗೇ ಕಾರ್ಯದರ್ಶಿಯಾಗಿ ಒಸ್ವಲ್ಡ್ ಕರ್ವಾಲ್ಲೊ,

ಸಹಕಾರ್ಯದರ್ಶಿಯಾಗಿ ಫಾತಿಮಾ ವಾಜ್, ಮಹಿಳಾ ಪ್ರತಿನಿಧಿಯಾಗಿ ಡಾ|ಸೋನಿ ಡಿಕೋಸ್ತಾ ಇವರುಗಳು ಆಯ್ಕೆಯಾಗಿದ್ದಾರೆ.
ಹಾಗೇಯೆ ಕುಂದಾಪುರ ಘಟಕದ ಅಂತೋನಿ ಡಿಸೋಜಾ ಕುಂದಾಪುರ ವಲಯದ ಸಂತ ವಿನ್ಸೆಂಟ್ ಪಾವ್ಲ್ ಸಭಾದ ಅಧ್ಯಕ್ಷರಾಗಿ ಜೊತೆಗೆ ಉಡುಪಿ ಧರ್ಮಪ್ರಾಂತ್ಯ ಕೇಂದ್ರದ ವಿನ್ಸೆಂಟ್ ಪಾವ್ಲ್ ಸಭಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
