ಕುಂದಾಪುರ ಸಂತ ಮೇರಿಸ್ ಹಿ.ಪ್ರಾರ್ಥಮಿಕ ಮತ್ತು ಸಂತ ಮೇರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ

JANANUDI.COM NETWORK

 

ಕುಂದಾಪುರ ಸಂತ ಮೇರಿಸ್ ಹಿ.ಪ್ರಾರ್ಥಮಿಕ ಮತ್ತು ಸಂತ ಮೇರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ -ನಿಮ್ಮ ಮಕ್ಕಳಿಗೆ ಉತ್ತಮವಾದ ಗಿಫ್ಟ್ ಆಗಿದ್ದರೆ ಅದು ಶಿಕ್ಷಣ :ಡಾ|ಪ್ರಸಾದ್ ಎನ್. ಶೆಟ್ಟಿ

 

 

ಕುಂದಾಪುರ, ಡಿ.7: ‘ನಿಮ್ಮ ಮಕ್ಕಳಿಗೆ ಉತ್ತಮವಾದ ಗಿಫ್ಟ್ ಆಗಿದ್ದರೆ ಅದು ಶಿಕ್ಷಣ, ಹಾಗಾಗಿ ಹೆತ್ತವರು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು, ಮಕ್ಕಳೂ ಕೂಡ ಶಿಕ್ಷಣದ ದಾಹವನ್ನು ಹೆಚ್ಚಿಸಿಕೊಳ್ಳಬೇಕು, ಶಿಕ್ಷಣವನ್ನು ಎಂದೂ ನಿಲ್ಲಿಸಬಾರದು’ ಎಂದು ಮಣಿಪಾಲ ಕೆ.ಎಂ.ಸಿ. ಯ ಹ್ರದಯರೋಗ ತಜ್ಞರಾದ ಡಾ|ಪ್ರಸಾದ್ ಎನ್. ಶೆಟ್ಟಿಯವರು ಹೇಳಿದರು.
ಅವರು ಕುಂದಾಪುರ ಸಂತ ಮೇರಿಸ್ ಹಿ.ಪ್ರಾರ್ಥಮಿಕ ಮತ್ತು ಸಂತ ಮೇರಿಸ್ ಪ್ರೌಢ ಶಾಲೆಗಳು ಜಂಟಿಯಾಗಿ ಆಚರಿಸಿದ ವಾರ್ಷಿಕೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ‘ನನಗೆ ಈ ಶಿಕ್ಷಣ ಸಂಸ್ಥೆಯಲ್ಲಿ ಶಿಸ್ತು ಕಲಿಸಿ, ಶಿಕ್ಷಣದಲ್ಲಿ ಆದ್ಯತೆ ನೀಡಿ ಈ ಪ್ರಾರ್ಥಮಿಕ ಮತ್ತು ಪ್ರೌಢಶಾಲೆಗಳು ನನ್ನ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು, ವೈದ್ಯನಾಗುವ ಕನಸು ಇದೇ ಶಾಲೆಯಲ್ಲಿ ಕಂಡೆ, ಮುಂದೆ ಜೀವನದಲ್ಲಿ ಕಷ್ಟ ಬಂದರೂ,ಹಿಂದಕ್ಕೆ ಸರಿಯದೆ ಹೆಚ್ಚಿನ ಪದವಿಗಳನ್ನು ಗಳಿಸಿ ಈಗ ಯಶಸ್ವಿಯಾಗಿ ದಡ ಸೇರಿದ್ದೆನೆ. ಹಾಗೇ ಇಂದಿನ ವಿದ್ಯಾರ್ಥಿಗಳು ಕಲಿಕೆಯ ಸಮಯದಲ್ಲಿ ಕಲಿಕೆಕೆ ಆದ್ಯತೆಕೊಟ್ಟು, ಶಿಕ್ಷಣವಂತರಾಗಿ ಜೀವನದಲ್ಲಿ ಯಶಸ್ವಿಯಾಗಬೇಕು’ ಎಂದು ಸಂದೇಶ ನೀಡಿದರು.
ಮತ್ತೊರ್ವ ಅತಿಥಿ ಉಡುಪಿ ಪ್ರದೇಶ್ ಕಥೊಲಿಕ್ ಸಭಾ ಅಧ್ಯಕ್ಷರು ಶುಭ ನುಡಿಗಳನ್ನಾಡಿದರು. ಅಧ್ಯಕ್ಷತೆಯನ್ನು ವಹಿಸಿಕೊಂಡ ಉಡುಪಿ ವಲಯ ಕಥೊಲಿಕ್ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮಾತಾಡಿ ‘ಈಗಿನ ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಕೆ ಮಾಡುವರು ಕಡಿಮೆಯಾಗುತಿದ್ದಾರೆ, ಆದರೆ ನಮ್ಮ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತಿದ್ದಾರೆ, ಎಲ್ಲಾ ಮಕ್ಕಳಿಗೆ ಶಿಕ್ಷರು ಆದ್ಯತೆ ನೀಡಬೇಕೆನ್ನುವ ಉದ್ದೇಶದಿಂದ ನಾನೇ ಕಡಿಮೆ ಮಕ್ಕಳಿಗೆ ಸೇರಿಸಿಕೊಳ್ಳಿ ಎಂದು ಹೇಳುತ್ತೇನೆ, ಹೀಗೆ ಎಲ್ಲಾ ವಿದ್ಯಾರ್ಥಿಗಳಿಗೂ ಶಿಕ್ಷಕರು ಆದ್ಯತೆ ಕೊಟ್ಟು ಇವತ್ತಿನ ಅತಿಥಿಯಂತೆ ಡಾ|ಪ್ರಸಾದರಂತೆ ಅವರೆಲ್ಲಾ ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಗಳಿಸಿ ಸಮಾಜಕ್ಕೆ ಉಪಕಾರಿಯಾಗುವ ಹಾಗೇ ಮಾಡಬೇಕು’ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಥೊಲಿಕ್ ಶಿಕ್ಷಣ ಸಂಸ್ಥೆಯ ಪ್ರಾರ್ಥಮಿಕ ಶಾಲೆಯಲ್ಲಿ ಜಿಲ್ಲೆಯ ಇತರ ಕಡೆ ನಿರಂತರ 39 ವರ್ಷ ಸೇವೆ ನೀಡಿ ಅವರ ಸೇವೆಯ ಕೊನೆಯ ಅವಧಿಯಲ್ಲಿ ಕುಂದಾಪುರ ಸಂತ ಮೇರಿಸ್ ಹಿ.ಪ್ರಾರ್ಥಮಿಕ ಶಾಲೆಯಲ್ಲಿ ಸೇವೆ ನೀಡಿ ನಿವ್ರತ್ತಿ ಹೊಂದಿದ ಶಿಕ್ಷಕಿ ರೋಹಿಣಿ ಅವರನ್ನು ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕಕ್ಕೆ ಪ್ರಶಸ್ತಿ ಪಡೆದ ಶಾಲಾ ಶಿಕ್ಷಕಿ ಜ್ಯೋತಿ ಮಂಜರಪಲ್ಕೆ, ಮತ್ತು ಇತರರನ್ನು ಸಮ್ಮಾನಿಸಲಾಯಿತು.
ಪೂರ್ವಾನ್ಹ ಧ್ವಜಾರೋಹಣ ಮತ್ತು ಆಟಗಳಲ್ಲಿ ಗೆದ್ದವರಿಗೆ ಬಹುಮಾನ ನೀಡುವ ಕಾರ್ಯಕ್ರಮವನ್ನು ಪುರಸಭಾ ಸದಸ್ಯ ಪ್ರಭಾಕರ ಮತ್ತು ಶಂಕರ ಶೆಟ್ಟಿ ನಡೆಸಿಕೊಟ್ಟರು. ಸಂಜೆ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ಸಾಧನೆ ಮಾಡಿದ ಮತ್ತು ಆಟಗಳಲ್ಲಿ ಛಾಂಪಿಯೆನ್ ಶಿಪ್ ಪಡೆದುಕೊಂಡವರಿಗೆ ಬಹುಮಾನ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಪ್ರಾಂಶುಅಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಮತ್ತು ಕಥೊಲಿಕ್ ಶಿಕ್ಷಣ ಸಂಸ್ಥೆಗಳ ಎಲ್ಲಾ ಮುಖ್ಯೋಪಾಧ್ಯಾನಿಯರು ಉಪಸ್ಥಿತರಿದ್ದರು. ಕುಂದಾಪುರ ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂತಾ ಲೋಬೊ ಸ್ವಾಗತಿಸಿದರು. ಪವರ್ ಪೆÇಂಯ್ಟ್ ಮೂಲಕ ಎರಡು ಶಾಲೆಗಳ ವರದಿಯನ್ನು ಸಲ್ಲಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು, ಶಿಕ್ಷಕರಾದ ಚಂದ್ರಶೇಖರ ಬೀಜಾಡಿ, ಸ್ಮಿತಾ ಡಿಸೋಜಾ, ಪ್ರೀತಿ ಪಾಯ್ಸ್, ಶಾಂತಿರಾಣಿ ಬಾರೆಟ್ಟೊ ಮುಂತಾದವರು ಕಾರ್ಯಕ್ರಮಗಳನ್ನು ನಿರೂಪಿಸಿದರು. ಸಂತ ಮೇರಿಸ್ ಹಿ.ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಸುವಾರಿಸ್ ವಂದಿಸಿದರು.