JANANUDI NETWORK
ಕುಂದಾಪುರ: ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣೆ
ಕುಂದಾಪುರ, ಜೂ.18: ಇಲ್ಲಿನ ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ, ಶಾಲೆಯ ಆಡಳಿತ ಮಂಡಳಿ ವತಿಯಿಂದ 2019-20 ರ ಸಾಲಿನ ಉಚಿತ ಸಮವಸ್ತ್ರ, ಬ್ಯಾಗ್ ನೋಟ್ ಪುಸ್ತಕಗಳನ್ನು ಜೂನ್ 17 ರಂದು ವಿತರಿಸಲಾಯಿತು. ಸಮವಸ್ತ್ರ ವಿತರಿಸಿದ ಸಂತ ಜೋಸೆಫ್ ವಸತಿ ನಿಲಯದ ಮೇಲ್ವಿಚಾರಕಿ ಸಿಸ್ಟರ್ ಆಶಾರವರು ಹಿತ ನುಡಿಗಳನ್ನಾಡಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಪುರಸಭೆಯ ಚರ್ಚ್ ರಸ್ತೆ ವಾರ್ಡಿನ ಪ್ರತಿನಿಧಿ ಶ್ವೆತಾ ಸರಕಾರ ಒದಗಿಸಿದ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಿ ಶುಭ ಕೋರಿದರು. ಜೊತೆಗೆ ಆಡಳಿತ ಮಂಡಳಿ ಮತ್ತು ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಶಾಲಾ ಬ್ಯಾಗಳನ್ನು ವಿತರಿಸಲಾಯಿತು. ಪ್ರೌಢ ಶಾಲಾ ಮುಖ್ಯೋಪಧ್ಯಾಯಿನಿ ಸಿಸ್ಟರ್ ವಾಯ್ಲೆಟ್ ತಾವ್ರೊ ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನೆಡೆಸಿಕೊಟ್ಟರು. ದೈಹಿಕ ಶಿಕ್ಷಕ ಮೈಕಲ್ ಪುರ್ಟಾರ್ಡೊ ವಂದಿಸಿದರು.