ಕುಂದಾಪುರ ಸಂಗಮ್ ಜಂಕ್ಷನಲ್ಲಿ ಮೀನು ಖರೀದಿದಾರರ ನೂಕು ನುಗ್ಗಲು ಅಂತರಕ್ಕೆ ಪೆÇಲೀಸರಿಂದ ಹರ ಸಾಹಸ: ಅಂತರ ವಿಫಲವಾದರೆ ಸಂತೆಯಂತ್ತೆ ಇದು ಸ್ಥಳಾಂತರದ ಎಚ್ಚರಿಕೆ

JANANUDI.COM NETWORK

 

 

ಕುಂದಾಪುರ ಸಂಗಮ್ ಜಂಕ್ಷನಲ್ಲಿ ಮೀನು ಖರೀದಿದಾರರ ನೂಕು ನುಗ್ಗಲು ಅಂತರಕ್ಕೆ ಪೊಲೀಸರಿಂದ ಹರ ಸಾಹಸ: ಅಂತರ ವಿಫಲವಾದರೆ ಸಂತೆಯಂತ್ತೆ ಇದು ಸ್ಥಳಾಂತರದ ಎಚ್ಚರಿಕೆ

 

 

ಕುಂದಾಪುರ, ಎ.19: ಕುಂದಾಪುರದಲ್ಲಿ ಲಾಕ್ ಡೌನ್ ನಿಂದ ಸ್ವಲ್ಪ ರಿಯಾಯ್ತಿ ನೀಡಿ ಮತ್ಸ್ಯ ಉದ್ಯಮ ಆರಂಬಿಸಲು ಪರವಣಿಗೆ ಕೊಟ್ಟಿದ್ದರೆಂದ ಮೀನು ಪ್ರೀಯರಿಗೆ ಮೀನು ಸಿಗುವಂತಾಗಿದೆ. ಅದಕ್ಕಾಗಿ ಮೀನು ವ್ಯಾಪರ ಮಾಡಲು ಬೆಳಿಗ್ಗೆ 7 ರಿಂದ 11 ರ ವರೆಗೆ ಆಸ್ಪದವನ್ನು ನೀಡಲಾಗಿದೆ.
ಆದರೆ ಸ್ಥಳಿಯ ಮೀನು ಮಾರ್ಕೆಟನಲ್ಲಿ ಅಂತರ ಕಾಯ್ದುಕೊಳ್ಳಲು ಅಸಾಧ್ಯವಾದರಿಂದ ಸಂಗಮ್ ಜಂಕ್ಷನನಲ್ಲಿ ಮೀನು ವ್ಯಾಪರಕ್ಕೆ ಪರವಣಿಗೆ ಕೊಡಲಾಯಿತು. ಆದರೆ ಅಲ್ಲಿ ಜನ ನಾ ಮುಂದು ತಾ ಮುಂದು ಎಂದು ಅಂತರ ಕಾಯ್ದುಗೊಳ್ಳದೆ ಮುಗಿ ಬಿದ್ದಿದ್ದರಿಂದ, ಹಿಂದೆ ಕೆಲವರಿಗೆ ಪೊಲೀಸ್ ಬೆತ್ತದ ರುಚಿ ಸಿಕ್ಕಿತು. ಆದರೂ ಜನ ಮುಗಿ ಬೀಳುತಿದ್ದರಿಂದ ಈಗ ಪೆÇಲೀಸ್ ಇಲಾಖೆ, ಚೌಕಗಳನ್ನು ಹಾಕಿದ್ದು ಮಾತ್ರವಲ್ಲಾ, ಸೆಫ್ಟಿ ರೀಬ್ಬನನ್ನು ಹಾಕಿ ಜನ ಅಂತರ ಕಾಯ್ದುಕೊಳ್ಳಲಿಕ್ಕಾಗಿ ನಿನ್ನೆ ರಾತ್ರಿ ಸ್ವತ ಪೆÇಲೀಸರು ಕಾರ್ಮಿಕರ ಜೊತೆ ಶ್ರಮಿಸಿ ಸಜ್ಜು ಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಸಹಾಯಕ ಕಮಿಶನರ್ ಕೆ. ರಾಜು, ಪೆÇಲೀಸ್ ಸಬ್ ಇನ್ಸಪೆಕ್ಟರ್ ಹರೀಶ್ ಉಪಸ್ಥಿತರಿದ್ದರು
ಇನ್ನೂ ಕೂಡ ಜನ ಅರ್ಥ ಮಾಡಿಕೊಳ್ಳದೆ ಅಂತರ ಕಾಯ್ದುಕೊಳ್ಳದೆ ಅಂತರ ಕಾಯ್ದುಕೊಳ್ಳಲು ಮೀತಿ ಮಿರಿದರೆ, ಎ.ಪಿ.ಎಂ.ಸಿ. ಮಾರ್ಕೆಟ್, ಅಂದರೆ ಸಂತೆ ಸ್ಥಳಾಂತರ ಮಾಡಿದಂತೆ, ಇಲ್ಲಿಯ ಮೀನು ಮಾರ್ಕೆಟನ್ನು ಇನ್ನೂ ದೂರ ಸ್ಥಳಾಂತರ ಮಾಡುವುದೆಂದು ಅಸಿಸ್ಟೆಂಟ್ ಸುಪಿರಿಡೆಂಟ್ ಆಫ್ ಪೊಲೀಸ್ ಹರಿರಾಮ್ ಶಂಕರ್ ಮಾಧ್ಯಮದ ಮೂಲಕ ಜನರಿಗೆ ಎಚ್ಚರಿಸಿದ್ದಾರೆ.
ಶನಿವಾರದ ಸಂತೆ ಕುಂದಾಪುರ ನಗರದಿಂದ ಸ್ಥಳಾಂತರಗೊಂಡು ಸಂತೆಯ ಪ್ರಾಂಗಣ ಖಾಲಿ ಖಾಲಿಯಾಗಿತ್ತು ಆದರೆ ಸಂತೆಯ ಹೊರಗಡೆ ರಸ್ತೆ ಬದಿಯ ಮೀನು ಅಂಗಡಿಗಳಲ್ಲಿ ಬಹಳ ಜೋರಾಗಿ ವ್ಯಾಪರ ನಡೆದಿತ್ತು. ಮತ್ತು ಸಂಗಮ್ ಜಂಕ್ಷನ್ ಬಳಿಯೂ ಜನರು ಮೀನು ಖರೀದಿಸಲು ಮೂಗಿ ಬಿದ್ದಿದ್ದರು.