ವರದಿ:ಅನು ಮಝರ್

ಕುಂದಾಪುರ : ಖಾರ್ವಿಕೇರಿಯ ಶ್ರೀಮಹಾಕಾಳಿ ದೇವಸ್ಥಾನದ ವತಿಯಿಂದ ಮತ್ಸ್ಯ ಸಂಪತ್ತು ಹಾಗೂ ಪ್ರಾಕೃತಿಕ ವಿಕೋಪಗಳಿಂದ ಯಾವುದೇ ಅವಘಡಗಳು ಜರಗದಂತೆ ವರ್ಷಂಪ್ರತಿ ಜರಗುವ ಸಮುದ್ರ ಪೂಜೆಯು ದಿನಾಂಕ 3/8/2020 ರಂದು ಕೋಡಿಯ ಸಮುದ್ರಕಿನಾರೆಯಲ್ಲಿ ವಿದ್ಯುಕ್ತವಾಗಿ ನೆರವೇರಿತು . ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ್.ಆರ್.ಖಾರ್ವಿ ಉಪಾಧ್ಯಕ್ಷ ರಾದ ಪೀತಾಂಬರ ಗಣಪತಿ ಖಾರ್ವಿ , ಮೊಕ್ತೇಸರರಾದ ಆನಂದ ನಾಯ್ಕ್, ಸಮುದ್ರ ಪೂಜೆ ಯ ವಿಧಿವಿಧಾನಗಳನ್ನು ಸಾಂಗವಾಗಿ ನೆರವೇರಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ದೇವಸ್ಥಾನದ ಸಮಿತಿಯ ಸದಸ್ಯ ಸುನೀಲ್ ಖಾರ್ವಿ ತಲ್ಲೂರು ವಹಿಸಿದ್ದರು. ಸಮಿತಿಯ ಸದಸ್ಯರು. ಮಹಾಕಾಳಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಸಂತಿ ಸಾರಂಗ ಹಾಗೂ ಸಂಘದ ಸದಸ್ಯೆಯರ ಸಹಿತ ಹಲವಾರು ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


