ಕುಂದಾಪುರ ವಲಯ ಕಥೊಲಿಕ್ ಸಭಾದಿಂದ    ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ

ಕುಂದಾಪುರ ವಲಯ ಕಥೊಲಿಕ್ ಸಭಾದಿಂದ    ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ

ಕುಂದಾಪುರ, ಫೆ.18: ಜಮ್ಮು ಕಾಶ್ಮೀರದ ಅಂತಿ ಪೋರಾದಲ್ಲಿ 40ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ನೆಡೆಸಿದ ದಾಳಿಯಲ್ಲಿ ಹುತ್ಮಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ವನ್ನು ವಲಯ ಮಟ್ಟದಲ್ಲಿ ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿ ಸಂತ ಮೇರಿಸ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. ಮಡಿದ ಯೋಧರ ಆತ್ಮಕ್ಕೆ ಶಾಂತಿ ಲಭಿಸಲು ಸೇರಿದವರೆಲ್ಲರೂ, ಮೊಂಬತ್ತಿಯನ್ನು ಬೆಳಗಿಸಿ ಎಲ್ಲರು ಮೌನ ಪ್ರಾರ್ಥನೆಯನ್ನು ಸಲ್ಲಿಸಿದರು.

     ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಿನ್ಮಯಿ ಅಸ್ಪತ್ರೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಡಾ.ಉಮೇಶ್ ಪುತ್ರನ್ ಆಗಮಿಸಿ ’ಉಗ್ರರ ಉಗಮದ ಕಾರಣಗಳನ್ನು ತಿಳಿಸಿ ಸ್ವಾತಂತ್ರ್ಯ ನೀಡುವಾಗ ಬ್ರಿಟಿಷರು ರಾಜರಿಂದ ಸ್ವಾಧಿನ ಪಡಿಕೊಂಡ ರಾಜ್ಯಗಳನ್ನು, ರಾಜರುಗಳ ಬೇಡಿಕೆಯಂತ್ತೆ, ಆಯಾಯ ರಾಜ್ಯರಿಗೆ ಹಿಂದೆ ಕೊಟ್ಟು, ಸ್ವತಂತ್ರ ಭಾರತ ದೇಶಕ್ಕೆ ಸೇರುವುದು ಆಯಾಯ ರಾಜ್ಯಗಳ ರಾಜರಿಗೆ ಬಿಟ್ಟ ವಿಚಾರ ಎಂದು ನಿರ್ಣಯಿಸಿದ್ದರು, ಅಂತೆಯೆ ಬಹುತೇಕ ಎಲ್ಲಾ   ರಾಜ್ಯರು ಸ್ವತಂತ್ರ ಭಾರತ ದೇಶಕ್ಕೆ ಸೇರಿದರು, ಆದರೆ ಜಮ್ಮು ಕಾಶ್ಮೀರದ ರಾಜನು ಸ್ವತಂತ್ರ ಭಾರತಕ್ಕೆ   ಸೇರಲು ಹಿಂದೆ ಸರಿದ, ಕೊನೆಗೆ ಸೇರುವ ಮನಸ್ಸಾದರೂ, ಆದರೆ ಅವರು ಸೇರುವುದರೊಳಗೆ ಅವರು ಸಾವನ್ನಪ್ಪಿದರು. ಅಲ್ಲಿಂದ ಪಾಕಿಸ್ಥಾನ ಭಾರತದ ಘರ್ಷಣೆ ನೆಡೆಯಿತು, ಜಮ್ಮು ಕಾಶ್ಮೀರವನ್ನು ಕಬಳಿಸಲಿಕ್ಕಾಗಿ ಉಗ್ರರು ಹುಟ್ಟಿದರು, ಇಂತಹ ಉಗ್ರಹರಿಂದ ನಾವು ಇವತ್ತು ಎಷ್ಟೋ ಯೋಧರನ್ನು ಕಳೆದುಕೊಂಡಿದ್ದೇವೆ, ಇತ್ತೀಚೆಗೆ ಪೂಲ್ವಾಮದಲ್ಲಿ ಅತ್ಯಂತ ನಿರ್ದಯಿಗಳಾಗಿ ಯೋಧರನ್ನು ಉಗ್ರರು ಬಲಿ ತೆಗೆದುಕೊಂಡಿದ್ದಾರೆ, ಇದನ್ನು ನಾವು ದೇಶ ಭಾಂದವರು ಒಟ್ಟಾಗಿ ಖಂಡಿಸಬೇಕು, ಯುದ್ದ ಮಾಡಿ ಎಂಬುದು ಸುಲಭ ಆದರೆ, ಅಲ್ಲಿ ಉಂಟಾಗುವ ರಕ್ತಪಾತ, ಸಾವು ನೋವು ಅಪಾರ, ನಾವು ಇದನ್ನು ರಾಜತಾಂತ್ರಿಕತೆಯಿಂದಲೇ ಬಗೆಹರಿಸಿಕೊಳ್ಳ ಬೇಕು’ ಎಂದು ಅಗಲಿದ ಯೋಧರ ಆತ್ಮಕ್ಕೆ ಶಾಂತಿಯನ್ನು ಕೋರಿ, ಅವರ ಕುಟುಂಬಸ್ಥರಿಗೆ ಸಾಂತ್ವನವನ್ನುಹೇಳಿದರು.

    ಉಡುಪಿ ಧರ್ಮಕೇಂದ್ರದ ಶ್ರಮಿಕ ಆಯೋಗದ ಸಂಚಾಲಕ, ಎಮ್.ಸಿ.ಸಿ. ಬ್ಯಾಂಕಿನ ನಿರ್ದೇಶಕ ಕಿರಣ್ ಕ್ರಾಸ್ಟೊ ಮಾತನಾಡಿ, ’ದೇಶ ಕಾಯುವ ನಮ್ಮನ್ನು ಕಾಯುವ ಯೋಧರನ್ನು ಉಗ್ರರು ಕೊಂದಿದ್ದಾರೆ, ಅವರು ನಮಗಾಗಿ ಬಲಿದಾನವನ್ನು ಮಾಡಿದ್ದಾರೆ, ಮಡಿದ ಯೋಧರ ಕುಟುಂಬದವರ ಜೊತೆ ನಾವಿರೋಣ’ಎಂದು ತಿಳಿಸಿದರು. ಈ ಕಾರ್ಯಕ್ರದ ಅಧ್ಯಕ್ಷತೆಯನ್ನು ಕುಂದಾಪುರ ವಲಯ ಸಮಿತಿ ಕಥೊಲಿಕ್ ಸಭಾದ ಅಧ್ಯಕ್ಷರಾದ ಮೈಕಲ್ ಪಿಂಟೊ ಸ್ವಾಗತಿಸಿದರು. ಕುಂದಾಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಸ್ಟ್ಯಾನಿ ತಾವ್ರೊ, ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡರ್ಸ್, ಕಾರ್ಯದರ್ಶಿ ಲೀನಾ ತಾವ್ರೊ, ಕುಂದಾಪುರ ವಲಯ ಕಥೊಲಿಕ ಸಭಾದ ಎಲ್ಲಾ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿನೋದ್ ಕ್ರಾಸ್ಟೊ ಪ್ರಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮವನ್ನು ನೆಡೆಸಿಕೊಟ್ಟರು.