JANANUDI NETWORK
ಕುಂದಾಪುರ ರೋಟರಿ : ವಿದ್ಯಾರ್ಥಿಗಳ ಭವಿಷ್ಯದ ಭದ್ರ ಬುನಾದಿಗೆ ಕಾರ್ಪೋರೇಶನ್ ಬ್ಯಾಂಕಿನ ವಿದ್ಯಾಸಾಲದ ಮಾಹಿತಿ ಶಿಬಿರ
ಕುಂದಾಪುರ, ಜು.20: ‘ಪದವಿಪೂರ್ವ ಶಿಕ್ಷಣದ ಹಂತ ಅಂದರೆ, ತುಂಬ ಕ್ಲಿಷ್ಠಕರವಾದುದು, ಆದರೆ ಪದವಿಪೂರ್ವ ಶಿಕ್ಷಣದ ನಂತರ ವಿದ್ಯಾರ್ಥಿಗಳು ಆರ್ಥಿಕತೆಯ ಸಲುವಾಗಿ ಯಾವತ್ತೂ ಶಿಕ್ಷಣವನ್ನು ಮೊಟುಕು ಗಳಿಸ ಬೇಡಿ, ಸಾಲ ಪಡೆದುಕೊಂಡು, ನೀವು ಅಂದುಕೊಂಡಹ ಶಿಕ್ಷಣ ಪಡೆದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು’ ಎಂದು ಡೇಲಿಯಾ ಡಯಾಸ್, ಡೆಪ್ಯುಟಿ ಜನರಲ್ ಮೇನೆಜರ್ ಹಾಗೂ ವಲಯ ಮುಖ್ಯಸ್ಥೆ ಕಾರ್ಪೋರೇಶನ್ ಬ್ಯಾಂಕ್ ಉಡುಪಿ ಇವರು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ಕಾರ್ಪೋರೇಶನ್ ಬ್ಯಾಂಕ್, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ರೋಟರಿ ಲಕ್ಶ್ಮೀನರಸಿಂಹ ಕಲಾಮಂದಿರದಲ್ಲಿ ಜುಲೈ 20 ರಂದು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ‘ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮುಂದೆ ಉನ್ನತ ಶಿಕ್ಷಣವನ್ನು ಮುಂದುವರೆಸಲಿಕ್ಕಾಗಿ ಕಾರ್ಪೋರೇಶನ್ ಬ್ಯಾಂಕ್ ತುಂಬ ಸರಳವಾದ ಸಾಲವದ ಸೌಲಭ್ಯವನ್ನು ನೀಡುತ್ತದೆ, ವಿದ್ಯಾ ಸಾಲವು ನಾಲ್ಕು ಲಕ್ಷದ ವರೆಗೆ ಯಾವ ಭದ್ರತೆಯೂ ಇಲ್ಲದೆ ಸಾಲವನ್ನು ಬ್ಯಾಂಕುಗಳು ನೀಡುತ್ತವೆ, ಸಾಲವನ್ನು ನಿಮಗೆ ಉದ್ಯೋಗ ದೊರೆತ ಮೇಲೆಯೆ ಸಾಲವನ್ನು ತೀರಿಸ ಬಹುದಾತಂತ ಸಾಲ ವಿದ್ಯಾ ಸಾಲವಾಗಿದೆ, ಹಾಗಾಗಿ ಆರ್ಥಿಕ ಸ್ಥಿತಿ ಉತ್ತಮ ಇಲ್ಲದಿದ್ದರೂ ತಾವು ಅಂದುಕೊಂಡ ಶಿಕ್ಷಣ ಪಡೆಯಬಹುದೆಂದು’ ಅವರು ವಿದ್ಯಾ ಸಾಲದ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭುಜಂಗ ಶೆಟ್ಟಿ ಶುಭ ಹಾರೈಸಿದರು. ಕಾರ್ಪೋರೇಶನ್ ಬ್ಯಾಂಕ್ ಸಹಾಯಕ ಮೇನೆಜರಗಳಾದ ಬಸವರಜ್ ಕಟ್ಟಿ, ಅರುಣ್ ಕುಮಾರ್ ಶೆಟ್ಟಿ. ಇವರುಗಳು ವಿದ್ಯಾಸಾಲದ ಬಗ್ಗೆ ವಿವರಣೆ ನೀಡಿದರು. ರೋ| ಯು.ಎಸ್.ಶೆಣೈ ಪ್ರಸ್ತಾವಿಕ ಮಾತುಗಳನ್ನಾಡಿರು, ರೋ|ಸದಾನಂದ ಛಾತ್ರ ಸಾಲ ತೆಗೆದುಕೊಂಡು ಶಿಕ್ಷಣ ಮುಂದುವರೆಸುವ ವಿದ್ಯಾರ್ಥಿಗಳ ಉದಾರಹಣೆ ನೀಡಿದರು. ರೋ|ಸಂತೋಷ್ ಕುಮಾರ್ ಶೆಟ್ಟಿ ಮುಖ್ಯ ಅಥಿಗಳ ಪರಿಚಯ ನೀಡಿದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಕಾರ್ಯದರ್ಶಿ ಶೋಭಾ ಭಟ್ ಮತ್ತು ಸ.ಪ.ಪೂ. ಪ್ರಾದ್ಯಪಕಿ ಸಂದ್ಯಾ ಎಮ್. ನಾಯ್ಕ್ ಉಪಸ್ಥಿತರಿದ್ದರು. ವಿವಿಧ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿದ ಈ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ದೇವರಾಜ್ ಕೆ. ಸ್ವಾಗತ ಕೋರಿದರು, ಸ.ಪ.ಪೂ. ಕಾಲೇಜಿನ ಪ್ರಾಧ್ಯಪಕರಾದ ಉದಯಕುಮಾರ್ ಶೆಟ್ಟಿ ಕಾಳಾವರ ಕಾರ್ಯಕ್ರವನ್ನು ನಡೆಸಿ ವಂದನೆಗಳನ್ನು ಸಲ್ಲಿಸಿದರು.