JANANUDI.COM NETWORK
ಕುಂದಾಪುರ ರೋಜರಿ ಚರ್ಚ್ ಪಾಲನಮಂಡಳಿ ಉಪಾಧ್ಯಕ್ಷರಾಗಿ ಲುವಿಸ್ ಜೆ. ಫೆರ್ನಾಂಡಿಸ್ ಆಯ್ಕೆ
ಕುಂದಾಪುರ, ಡಿ.24: ಕುಂದಾಪುರ ರೋಜರಿ ಚರ್ಚಿನ ನೂತನ ಪಾಲನ ಮಂಡಳಿಗಾಗಿ ಚರ್ಚಿನ ವಾಳೆಯ ಪ್ರತಿನಿಧಿಗಳ ಚುನಾವಣೆ ಕೆಲವು ದಿನಗಳ ಹಿಂದೆ ನಡೆದಿತ್ತು. ಪಾಲನ ಮಂಡಳಿ ಉಪಾಧ್ಯಕ್ಷ ಮತ್ತು ಕೆಲವು ಪದಾಧಿಕಾರಿಗಳ ಚುನಾವಣ ಪ್ರಕ್ರಿಯೆ ಡಿ.22 ರಂದು ನಡೆಯಿತು. ಚುನಾವಣೆಯಲ್ಲಿ ಲುವಿಸ್ ಜೆ. ಫೆರ್ನಾಂಡಿಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಚಾಲಿಕಿಯಾಗಿ ಪ್ರೇಮಾ ಡಿಕುನ್ಹಾ ಆಯ್ಕೆಯಾಗಿದ್ದಾರೆ. ಆರ್ಥಿಕ ಮಂಡಳಿ ಸದಸ್ಯರಾಗಿ ಜೋನ್ಸನ್ ಡಿಆಲ್ಮೇಡಾ ಮತ್ತು ಶಾಂತಿ ಕರ್ವಾಲ್ಲೊ, ಬರ್ನಾಡ್ ಜೆ. ಡಿಕೋಸ್ತಾ, ಸಂತ ಮೇರಿಸ್ ಪಿ.ಯು.ಕಾಲೇಜ್, ಶಾಲೆಟ್ ರೆಬೆಲ್ಲೊ, ಸಂತ ಮೇರಿಸ್ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸೆರಾಫಿನ್ ಡಿಸಿಲ್ವಾ, ರೋಜರಿ ಆಂಗ್ಲಾ ಮಾಧ್ಯಮ ಶಾಲೆಗಳ ಅಭಿವ್ರದ್ದಿ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹಾಗೆ ರೋಜರಿ ಚರ್ಚಿನ ಪತ್ರಿಕೆಯಾದ “ರೊಜಾರಿಯುಮ್” ಇದರ ಸಂಪಾದಕರಾಗಿ ಬರ್ನಾಡ್ ಜೆ. ಡಿಕೋಸ್ತಾ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ಪಾಲನಮಂಡಳಿ ಅಧ್ಯಕ್ಷ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ಲೋಬೊ ನಡೆಸಿಕೊಟ್ಟರು. ಸಹಾಯಕ ಧರ್ಮಗುರು ವಂ|ವಿಜಯ್ ಜೆ. ಡಿಜೋಜಾ ಮತ್ತು ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಪ್ರವೀಣ್ ಎ.ಮಾರ್ಟಿಸ್ ಉಪಸ್ಥಿತರಿದ್ದು ಚುನಾವಣೆಗೆ ಸಹಕರಿಸಿದರು.