JANANUDI.COM NETWORK
ಕುಂದಾಪುರ ರೋಜರಿ ಚರ್ಚನಲ್ಲಿ ಕೈಸ್ತ ಶಿಕ್ಷಣ ದಿನಾಚರಣೆ
ಕುಂದಾಪುರ,ಮಾ.1 ‘ಇವತ್ತು ಶಿಕ್ಷಣಕ್ಕೆ ಕೊಡುವ ಮಹತ್ವ ಅಧ್ಯಾತ್ಮಿಕ ವಿಷಯಕ್ಕೆ ನೀಡುವುದಿಲ್ಲಾ. ಸನ್ನಡೆತೆಯಲ್ಲಿ ಜಿವಿಸಿ ಜೀವನ ಸಫಲವಾಗ ಬೇಕಾದರೆ, ನೀತಿ ಶಿಕ್ಷಣ, ಧಾರ್ಮಿಕ ಪಾಲನೆ, ಅಗತ್ಯ’ ಎಂದು ಕೊಂಕಣಿ ಹಾಡುಗಾರ ವಿಲ್ಸನ್ ಒಲಿವೆರಾ ಹೇಳಿದರು. ಅವರು ಕುಂದಾಪುರ ರೋಜರಿ ಮಾತಾ ಇಗರ್ಜಿಯ ಸಭಾ ಭವನದಲ್ಲಿ ನೀತಿ ಶಿಕ್ಷಣದ ದಿವಸದ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತಾನಾಡಿದರು.
ಸಭಾ ಕಾರ್ಯ ಕ್ರಮದ ಮೊದಲು ಹೋಲಿ ರೋಜರಿ ಚರ್ಚನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ನೀತಿ ಶಿಕ್ಷಣ ಕೇವಲ ಅಧ್ಯಾತ್ಮಿಕವಾಗಿ ತಮ್ಮನ್ನು ಬೆಳೆಸಿಕೊಳ್ಳುವುದು ಮಾತ್ರವಲ್ಲಾ, ಜೀವನದಲ್ಲಿ ಮೌಲ್ಯ ಭರಿತ ಜೀವನಕ್ಕೆ ದಾರಿಯಾಗುತ್ತೆ. ನೀತಿ ಶಿಕ್ಷಣದಿಂದ ನಮಗೆ ದೇವರ ಪರಿಚಯವಾಗುತ್ತದೆ’ ಎಂದು ವರ್ಷವೀಡಿ ತಮ್ಮ ಸಮಯವನು ತ್ಯಾಗ ಮಾಡಿ ನೀತಿ ಶಿಕ್ಷಣ ನೀಡುವ ಶಿಕ್ಷಕಿಯರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ, ಅವರಿಗೆ ಗೌರವಿಸಿದರು.
ಸಂತ ಮೇರಿಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಧರ್ಮಗುರು ವಂ| ಪ್ರವೀಣ್ ಅಮ್ರತ್ ಮಾರ್ಟಿಸ್,ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ, ಕುಂದಾಪುರದವರೆ ಆದ ಅತಿಥಿ ಧರ್ಮಗುರು ವಂ|ವೆನಿಲ್ ಡಿಸೋಜಾ, ಉಪಾಧ್ಯಕ್ಷ ಲುವಿಸ್ ಫೆರ್ನಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಧರ್ಮ ಭಗಿನಿ ವಾಯ್ಲೆಟ್ ತಾವ್ರೊ. ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಒಂದನೇ ತರಗತಿಯಿಂದ ಪಿ.ಯು.ಸಿ. ವರೆಗಿನ ಮಕ್ಕಳಿಗೆ ಕ್ರಿಸ್ತಿ ಮೌಲ್ಯಾಧಾರಿತ ಶಿಕ್ಷಣದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಬಹುಮಾನಗಳನ್ನು ವಿತರಿಸಿದರು. ಶಿಕ್ಷಕಿ ಶೈಲಾ ಡಿಆಲ್ಮೇಡಾ ತಮ್ಮ ಅನುಭವವನ್ನು ಹಂಚಿಕೊಂಡರು. ಮಕ್ಕಳಿಂದ ನ್ರತ್ಯ, ಪ್ರಹಸನ ಮತ್ತು ಗಾಯನ ಮುಂತಾದ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ರಿಶಿಕಾ ಮೊಂತೇರೊ ಸ್ವಾಗತಿಸಿದರು, ನೀತಿ ಶಿಕ್ಷಣ ಶಿಕ್ಷರ ಸಂಚಾಲಕಿ ವೀಣಾ ಡಿಸೋಜಾ ವರದಿಯನ್ನು ವಾಚಿಸಿದರು. ವೆನಿಶಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಜಲ್ ಪಾಯ್ಸ್ ವಂದಿಸಿದರು