ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಬಸ್ರೂರು ಶಾಖೆಯ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ

JANANUDI.COM NETWORK

ಕುಂದಾಪುರ,ಸೆ.6:ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಬಸ್ರೂರು ಚರ್ಚಿನ ಧರ್ಮಗುರು ವಂ|ಚಾಲ್ರ್ಸ್ ನೊರೊನ್ಹಾ ಇವರುಗಳು ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಬಸ್ರೂರು ಶಾಖೆಯ ಸ್ವಂತ ಕಟ್ಟಡಕ್ಕೆ ಆಶಿರ್ವಚನಗೈದು ಶಿಲಾನ್ಯಾಸ ನೆರವೇರಿಸಿದರು. ಈಸಂದರ್ಭದಲ್ಲಿ ಅವರುಗಳು ಶುಭ ಹಾರೈಸಿದರು. ಜೊತೆಯಲ್ಲಿ ಬ್ರದರ್ ದಿಯೊಕೋನ್ ಜೊಯ್ಸಟನ್ ಪಿಂಟೊ ಹಾಜರಿದ್ದರು.
ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷರಾದ ಜಾನ್ಸನ್ ಡಿ ಆಲ್ಮೆಡಾ, ಉಪಾಧ್ಯಕ್ಷ ಕಿರಣ್ ಲೋಬೊ, ಬಸ್ರೂರು ಶಾಖೆಯ ಉಸ್ತುವಾರಿ, ಸೊಸೈಟಿ ನಿರ್ದೇಶಕ ಫಿಲಿಪ್ ಡಿಕೋಸ್ತಾ, ಶಿಲಾನ್ಯಸ ಗೈದರು. ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರಾದ ವಿನೋದ್ ಕ್ರಾಸ್ಟೊ, ವಿಲ್ಫ್ರೆಡ್ ಮಿನೇಜೆಸ್,ಪ್ರಕಾಶ್ ಲೋಬೊ, ಬ್ಯಾಪ್ಟಿಸ್ಟ್ ಡಾಯಸ್, ಸೊಸೈಟಿಯ ಪ್ರಧಾನ ನಿರ್ವಹಣ ವ್ಯವಸ್ಥಾಪಕ ಪಾಸ್ಕಲ್ ಡಿಸೋಜಾ, ಬಸ್ರೂರು ಚರ್ಚಿನ ಉಪಾಧ್ಯಕ್ಷ ಫ್ಲೈವನ್ ಡಿಸೋಜಾ, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷೆ ಮೇಬಲ್ ಡಿಸೋಜಾ, ಎಮ್.ಸಿ.ಸಿ.ಬ್ಯಾಂಕಿನ ನಿರ್ದೇಶಕ ಕಿರಣ್ ಕ್ರಾಸ್ತಾ, ರೋಜರಿ ಸೊಸೈಟಿ ಶಾಖಾ ವ್ಯವಸ್ಥಾಪಕರು ಮತ್ತು ಸೊಸೈಟಿ ಸಿಬಂದಿ ವರ್ಗದವರು, ಕಥೊಲಿಕ್ ಸಭಾ ಪದಾಧಿಕಾರಿಗಳು ಮತ್ತು ಇನ್ನಿತರರು ಉಪಸ್ತಿತರಿದ್ದರು. ಸೊಸೈಟಿ ನಿರ್ದೇಶಕ ಜೇಕಬ್ ಡಿಸೋಜಾ ಪ್ರಸ್ತಾವಿಸಿದರು.