ಕುಂದಾಪುರ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಗೆ ರಾಜ್ಯ ಮಟ್ಟದಲ್ಲಿ “ಉತ್ತಮ ಸಹಕಾರ ಸಂಘ ಪ್ರಶಸ್ತಿ 2019”

JANANUDI.COM NETWORK 

 

ಕುಂದಾಪುರ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಗೆ ರಾಜ್ಯ ಮಟ್ಟದಲ್ಲಿ “ಉತ್ತಮ ಸಹಕಾರ ಸಂಘ ಪ್ರಶಸ್ತಿ 2019”

 

ಕುಂದಾಪುರ, ನ.19: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಕೇಂದ್ರ. ಬ್ಯಾಂಕ್ ನಿ. ಮಂಗಳೂರು,. ಉಡುಪಿ ಜಿಲ್ಲಾ ಸಹಕಾರ ಯುನಿಯನ್ ನಿ.ಉಡುಪಿ,. ಮತ್ತು ಸಹಾಕಾರಿ ಇಲಾಖೆ, ಹಾಗೂ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ 66 ನೇ ಅಖಿಲ ಭಾತರ ಸಹಕಾರ ಸಪ್ತಾಹ 2019 ಸಮಾವೇಷದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ಕುಂದಾಪುರ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಗೆ ರಾಜ್ಯ ಮಟ್ಟದಲ್ಲಿ 2019 ರ ‘ಉತ್ತಮ ಸಹಕಾರ ಸಂಘ ಪ್ರಶಸ್ತಿ’ ಯನ್ನು ಪಡೆದುಕೊಂಡಿದೆ.
ಈ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಕುಂದಾಪುರ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ ಇವರು ಸಹಕಾರ ರತ್ನ ಡಾ|ಎಂ.ಎನ್. ರಾಜೇಂದ್ರ ಕುಮಾರ್, ಅಧ್ಯಕ್ಷರು ದಕ್ಷಿಣ ಕ. ಜಿ.ಸ. ಬ್ಯಾಂಕ್ ನಿ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ. ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿ. ಬೆಂಗಳೂರು ಮತ್ತು ಎನ್.ಗಂಗಣ್ಣ ಅಧ್ಯಕ್ಷರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ. ಬೆಂಗಳೂರು ಹಾಗೂ ಇನ್ನಿತರ ಗಣ್ಯರಿಂದ, ವಿವಿಧ ಸಹಕಾರಿ ಸಂಘದ 3 ಸಾವಿರಕ್ಕೂ ಅಧಿಕ ಸದಸ್ಯರ ಸಮ್ಮೂಖ ಪ್ರಶಸ್ತಿಯನ್ನು ಪಡೆದುಕೊಂಡರು.

ಕುಂದಾಪುರ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಒಂದು ಹಿನ್ನೊಟ


ಸಹಕಾರ ವ್ಯವಸ್ಥೆಯಿಂದ ಇವತ್ತು ಆರ್ಥಿಕ-ಸಾಮಾಜಿಕ ಬೆಳವಣಿಗೆಗೆ ತಮ್ಮದೇ ಆದ ಸೇವೆ ಸಿಗುತ್ತಿದೆ. ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆಯಲ್ಲಿ ಕೂಡ ಸಹಕಾರ ಕ್ಷೇತ್ರ ತನ್ನದೇ ಆದ ಪಾತ್ರ ನೀಡುತ್ತಿದೆ. ಬಹುಶಃ 27 ವರ್ಷಗಳ ಹಿಂದಿನ ಮಾತು. ಕುಂದಾಪುರದ ರೋಜರಿ ಮಾತೆಯ ಇಗರ್ಜಿಯ ವಠಾರದಲ್ಲಿ ಸಹಕಾರ ಸಂಘವೊಂದನ್ನು ಹುಟ್ಟು ಹಾಕುವ ಕುರಿತಂತೆ ಮಹತ್ವದ ಸಭೆ ನಡೆದಿತ್ತು. ಅದು ದಿನಾಂಕ 15-08-1992. ಹೀಗೊಂದು ಕೋ ಅಪರೇಟಿವ್ ಸೊಸೈಟಿಯ ಕಲ್ಪನೆ ಮತ್ತು ರಚನೆಯ ಬಗ್ಗೆ ಸಾಕಷ್ಟು ವಿಚಾರಗಳು ವಿನಿಮಯವಾದವು. ವಂ| ಕ್ಲಿಫರ್ಡ್ ಡಿ’ಸೋಜರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆ ಕುಂದಾಪುರದ ಸಹಕಾರ ಕ್ಷೇತ್ರದ ಮಟ್ಟಿಗೆ ಮಹತ್ವದ ಸಭೆಯಾಗಿ ಮೂಡಿಬಂತು. ತಾಲೂಕಿನಲ್ಲಿ ಹಿಂದುಳಿದ ಜನರ ಆರ್ಥಿಕ ಪ್ರಗತಿ, ವ್ಯಾಪಾರ ವಹಿವಾಟು ಪ್ರಾರಂಭಿಸಲು ಆರ್ಥಿಕ ನೆರವು, ಗೃಹ ನಿರ್ಮಾಣ, ಕೈಗಾರಿಕೆಗಳ ಆರಂಭ, ನಿವೇಶನ ಖರೀದಿ, ಸ್ವ ಉದ್ಯೋಗ ಹೀಗೆ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಸಹಕಾರ ಸಂಘವೊಂದನ್ನು ರಚನೆ ಮಾಡುವುದಕ್ಕೆ ಒಮ್ಮತದ ನಿರ್ಧಾರವಾಯಿತು.

ಕುಂದಾಪುರ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಈಗಿನ ಒಂದು ನೋಟ

 

ಪರಸ್ಪರ ಸಹಕಾರದಿಂದ ಇಂದು ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಉಡುಪಿ ಜಿಲ್ಲೆಗೆ ಮಾದರಿಯಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ. ಸಂಘದ ಸಂಘಟನಾತ್ಮಕ ಹಾಗೂ ನಿಸ್ವಾರ್ಥ ಸೇವೆಯಿಂದ ರೋಜರಿ ಸಂಸ್ಥೆಯು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವುದು ಅಭಿಮಾನದ ವಿಷಯ. ಸಾಧನೆಯ 27 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಸ್ಥೆಯು “ಅಭಿವೃದ್ದಿ”ಯೇ ಸಹಕಾರ ರಂಗದ ಮೂಲ ಮಂತ್ರವನ್ನಾಗಿಸಿಕೊಂಡು ಸಹಕಾರ ತತ್ವದಡಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ವರದಿ ವರ್ಷದಲ್ಲಿ 346 ಕೋಟಿ ಒಟ್ಟು ವ್ಯವಹಾರ ಸಾಧಿಸುವ ಮೂಲಕ ಅಭಿವೃದ್ಧಿಯ ಪಥದತ್ತ ಮುನ್ನಡೆಯುತ್ತಿದೆ. ಠೇವಣಿಗಳ ಸಂಗ್ರಹಣೆಗಳು ಗಣನೀಯವಾಗಿ ಏರಿದ್ದು ಪ್ರಸ್ತುತ ನಮ್ಮ ಸಂಸ್ಥೆಯು 7 ಶಾಖೆಗಳ ಮೂಲಕ ಸುಮಾರು ರೂ.85.00 ಕೋಟಿ ಠೇವಣಿ ಸಂಗ್ರಹಿಸಿ ಸಾಧನೆಗೈದಿದ್ದು ಕಳೆದ ವರ್ಷ ರೂ. 1 ಕೋಟಿ 15 ಲಕ್ಷ ನಿವ್ವಳ ಲಾಭಗಳಿಸಿದೆ’ ಎಂದು ಸಂಘದ ಹಾಲಿ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡರು ತಿಳಿಸುತ್ತಾರೆ.
ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಭಾಗವಾಗಿ ಸಂಘವು ಪ್ರಾರಂಭದಿಂದ ವಿವಿಧ ಸಾಮಾಜಿಕ ಉಪಕ್ರಮಗಳಿಗೆ ಸ್ವಂದಿಸುತ್ತಾ ಬಂದಿದೆ. ವರದಿ ವರ್ಷದಲ್ಲಿ ಧರ್ಮದ ನಿಧಿ ಮತ್ತು ಉಪಕಾರ ನಿಧಿಯಿಂದ ಅನೇಕ ಯೋಜನೆಗಳಿಗೆ ಹಣಕಾಸು ನೆರವು ನೀಡಿದ್ದು ಇದರ ಪರಿಣಾಮಗಳು ಉತ್ತಮವಾಗಿದ್ದು ಅಪಾರ ಮೆಚ್ಚುಗೆ ಹಾಗೂ ಜನ ಮನ್ನಣೆಯನ್ನು ಪಡೆದಿದೆ. ‘ಸಹಕಾರದ ಮೂಲಕ ಸರ್ವಾಂಗೀಣ ಪ್ರಗತಿ’ ನಮ್ಮ ಧ್ಯೇಯವಾಕ್ಯ. ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜೋನ್ಸನ್ ಡಿ’ಆಲ್ಮೇಡಾರವರು ಹೇಳುತ್ತಾರೆ.

ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ 66 ನೇ ಅಖಿಲ ಭಾತರ ಸಹಕಾರ ಸಪ್ತಾಹ 2019 ಸಮಾವೇಷದ ಪೋಟೊಗಳು