ಕುಂದಾಪುರ ರೊಜಾರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಉತ್ಸವ – ನಮ್ಮ ಕುಟುಂಬಗಳು ವಿಶ್ವಾಸದ ಮಂದಿರಗಳು ಹಾಗೂ ಸಮಾಧಾನದ ನಿವಾಸವಾಗಳಾಗಬೇಕು’- ಫಾ|ರೋನಿ ಸೆರಾವೊ

JANANUDI.COM NETWORK

 

 

ಕುಂದಾಪುರ ರೊಜಾರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಉತ್ಸವ – ನಮ್ಮ ಕುಟುಂಬಗಳು ವಿಶ್ವಾಸದ ಮಂದಿರಗಳು ಹಾಗೂ ಸಮಾಧಾನದ ನಿವಾಸವಾಗಳಾಗಬೇಕು’- ಫಾ|ರೋನಿ ಸೆರಾವೊ

 

ಕುಂದಾಪುರ,ನ.28: “ಈ ಇಗರ್ಜಿಗೆ 450 ವರ್ಷದ ಚರಿತ್ರೆ ಇದೆ, ಈ ಚರ್ಚಿನ ಪಾಲಕಿ ರೋಜರಿ ಮಾತೆ ಇಲ್ಲಿನ ಭಕ್ತರಿಗೆ 450 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾಳೆ. ನಮ್ಮ ಹಿರಿಯರ ಭಕ್ತಿ, ಪ್ರಾರ್ಥನೆಯ ಜೀವನವನ್ನು ನೆನಪಿಗೆ ತಂದುಕೊಳ್ಳುವ, ಅವರಲ್ಲಿದ ವಿಶ್ವಾಸದ ಜೀವನ ನಾವೂ ಪುನ: ಪ್ರೀತಿಯಿಂದ ಅಭಿಮಾನದಿಂದ ಅಖಂಡ ವಿಶ್ವಾಸದ ಸಾಕ್ಷಿಗಳಾಗಲು ನಾವು ರೋಜರಿ ಮಾತೆಯ ಸಹಾಯ ಹಸ್ತವನ್ನು ಚಾಚೋಣ’ ಎಂದು ಜೆಪ್ಪು ಸೆಮಿನರಿರ ರೆಕ್ಟರ್ ಅ|ವಂ|ಧರ್ಮಗುರು ರೋನಿ ಸೆರಾವೊ ಸಂದೇಶ ನೀಡಿದರು.
ಅವರು 450 ವರ್ಷಗಳ ಹಿರಿಮೆಯುಳ್ಳ ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಕುಂದಾಪುರ ರೋಜರಿ ಮಾತಾ ದೇವಾಲಯದ ಬುಧವಾರ 27 ರಂದು ನಡೆದ ವಾರ್ಷಿಕ ಮಹಾ ಹಬ್ಬದ ಸಂಭ್ರಮದ ದಿವ್ಯ ಬಲಿ ಪೂಜೆಯ ನೇತ್ರತ್ವವನ್ನು ವಹಿಸಿಕೊಂಡು ‘ಯೇಸುವಿನ ಶಿಸ್ಯರಿಗೆ ಮೇರಿ ಮಾತೆ ಹೇಗೆ ಪ್ರೇರಣೆ ಕೊಟ್ಟಿದ್ದರೊ ಹಾಗೇ ನಮಗೆ ಕೂಡ ಮೇರಿ ಮಾತೆ ಭಕ್ತಿ ಮತ್ತು ವಿಶ್ವಾಸದಲ್ಲಿ ಪ್ರೇರಣೆ ನೀಡುತ್ತಾರೆ, ಇಂದು ಜೀವನದಲ್ಲಿ ಸಂಕಷ್ಟಗಳು, ಸಂಭಂದಗಳು ಹಾಳಾಗಲು ಕಾರಣ ಕುಟುಂಬದಲ್ಲಿ ಭಕ್ತಿ ಪ್ರಾರ್ಥನೆ ಇಲ್ಲದಿರುವುದರಿಂದಾಗಿದೆ. ಪ್ರಾರ್ಥನೆ  ಭಕ್ತಿ ಯಿಂದ ನಮ್ಮ ಆತ್ಮದ ಶತ್ರುಗಳ ಮೇಲೆ ಜಯ ಸಾಧಿಸಬಹುದು. ಮಾತೆ ರೋಜರಿ ಮಾತೆ ಕುಟುಂಬದ ಮಹಾರಾಣಿ, ಸಮಾಧಾನದ ಮಹಾರಾಣಿ, ನಮಗೆಲ್ಲಾ ಸಮಧಾನ ಬೇಕು. ಆದರೆ ಹೆಚ್ಚಿನ ಕುಟುಂಬಗಳಲ್ಲಿ ಇಂದು ಸಮಾಧಾನವಿಲ್ಲಾ, ಇದಕ್ಕೆ ನಮ್ಮಲ್ಲಿ ವಿಶ್ವಾಸ, ಪ್ರಾರ್ಥನೆ, ಭಕ್ತಿ ಇಲ್ಲವಾಗಿದ್ದುದೇ ಕಾರಣವಾಗಿದೆ. ಯೇಸು ಸಮಾಧಾನದ ಮಹಾರಾಜ, ಆತನಲ್ಲಿ ವಿಶ್ವಾಸಿ ಪ್ರಾರ್ಥಿಸಿ, ಅವನ ತಾಯಿ ರೋಜರಿ ಮಾತೆಯಲ್ಲಿ  ನಿಮಗಾಗಿ ಬೇಡಿ, ಆಗ ಅವಳು ದೇವಪುತ್ರನಾದ ಯೇಸುವಿನಲ್ಲಿ  ನಿಮಗಾಗಿ ವಿನಂತಿಸುವಳು, ಮೇರಿ ಮಾತೆ ಜೀವನವಿಡಿ ಕಷ್ಟ ಪಟ್ಟಳು, ಆದರೆ ಅವಳು ದೇವರಿಗೆ ವಿಧೇಯಳಾದಳು. ಹಾಗೇ ನಾವು ವಿಶ್ವಾಸಿಗರಾಗಿ, ಪ್ರಾರ್ಥನೆಯುಳ್ಳವರಾಗಿ ವಿಧೇಯರಾಗಿ ಪರಿವರ್ತಿತರಾಗೋಣಾ.  ’ನಮ್ಮ ಕುಟುಂಬಗಳು ವಿಶ್ವಾಸದ ಮಂದಿರಗಳು ಹಾಗೂ ಸಮಾಧಾನದ ನಿವಾಸವಾಗಳಾಗಬೇಕು’ ಅದಕ್ಕಾಗಿ ರೋಜರಿ ಮಾತೆಯಲ್ಲಿ ಪ್ರಾರ್ಥಿಸುತ್ತಾ, ಅವಳ ಆದರ್ಶದಂತೆ ಜೀವಿಸಿ ಮುಂದೊಂದು ದಿನ ನಾವು ಸ್ವರ್ಗದ ನಿವಾಸಿಗಳಾಗಲು ಪ್ರಯತ್ನಿಸೋಣ’ ಎಂದು ಅವರು ನುಡಿದರು.
ಕುಂದಾಪುರ ಚರ್ಚಿನ ಧರ್ಮಗುರು ಅ|ವಂ|ಸ್ತ್ಯಾನಿ ತಾವ್ರೊ ಬಲಿ ಪೂಜೆಯಲ್ಲಿ ಭಾಗವಹಿಸಿ ಧನ್ಯವಾದಗಳನ್ನು ಅರ್ಪಿಸಿದರು. ಪ್ರಾಂಶುಪಾಲಾರಾದ ಧರ್ಮಗುರು ವಂ|ಪ್ರವೀಣ್ ಮಾರ್ಟಿಸ್ ಗಾಯನ ಮಂಡಳಿಯ ನೇತ್ರತ್ವನ್ನು ವಹಿಸಿದ್ದರು, ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಕುಂದಾಪುರ ವಲಯದ ಧರ್ಮ ಕೇಂದ್ರಗಳ ಅನೇಕ ಧರ್ಮಗುರುಗಳು ಹಾಗೂ ಅತಿಥಿ ಧರ್ಮಗುರುಗಳು ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು.ಅನೇಕ ಧರ್ಮ ಭಗಿನಿಯರು, ಹಾಗೂ ಬಹು ಸಂಖ್ಯೆಯ ಭಕ್ತಾದಿಗಳು ರೊಜರಿ ಮಾತೆಯ ವಾರ್ಷಿಕ ಜಾತ್ರೆಯ ಪವಿತ್ರ ಬಲಿದಾನ ಮತ್ತು ಜಾತ್ರೆಯಲ್ಲಿ ಭಾಗಿಯಾದರು.