ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಶುಭ ಶುಕ್ರವಾರ – ಅಡಾಮ್ ಪಾಪದ ಆರಂಭ ಆತನ ಸಮಾಧಿ ಸ್ಥಳ ಗೊಲ್ಗೊಥಾದಲ್ಲಿ ಪಾಪ ನಿವಾರಣೆಗಾಗಿ ಯೇಸುವಿನ ಬಲಿದಾನ
ಕುಂದಾಪುರ ಮಾ.31: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಶ್ಟ ಮರಣದ ಶುಕ್ರವಾರವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಲಾಯಿತು. ಬೆಳಗ್ಗೆ ಆಯ್ದ ಜನರ ಮುಂದಾಳತ್ವದಲ್ಲಿ ಮೈದಾನದಲ್ಲಿ ಭಕ್ತರೊಡನೆ ಶಿಲುಭೆ ಮರಣದ ಯಾತ್ರ ವಿಧಿಯನ್ನು ನೆಡೆಸಲಾಯಿತಾದರೆ ಸಂಜೆ ಇಗರ್ಜಿಯಲ್ಲಿ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ ದೇವರ ವಾಕ್ಯದ ಸಂಭ್ರಮ ಮತ್ತು ಯೇಸುವಿನ ಕಶ್ಟ ಮರಣದ ರೀತಿಯನ್ನು ನೆಡಸಲಾಯಿತು.
ಇದನ್ನು ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊರವರ ಮುಂದಾಳತ್ವದಲ್ಲಿ ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಇವರ ಸಹಯೋಗದಲ್ಲಿ ನೆಡೆಯಿತು.
ಶುಭ ಶುಕ್ರವಾದರ ಪ್ರಾರ್ಥನ ವಿಧಿಯ ಮುಖ್ಯ ಅತಿಥಿಗಳಾಗಿ ಯಾಜಕರ ಎಪಿಸ್ಕೊಪಲ್ ವಿಕಾರ್, ಜೆಪ್ಪು ಸೆಮಿನರಿಯ ಪ್ರಾಧ್ಯಪಕ ಜೋನ್ ಪಿಯುಸ್ ಡಿಸೋಜಾ ಒಸಿಡಿ ಅವರು ‘ಯೇಸು ತನ್ನ ಶಿಲುಭೆ ಮರಣ ಹೊಂದುವ ಮೊದಲು ಗೆತ್ಸಮನಿ ತೋಟದಲ್ಲಿ ದೇವರಲ್ಲಿ ಪ್ರಾಥಿಸಿದಾಗ, ತಾನು ಮುಂದೆ ಅನುಭವಿಸುವ ಹಿಂಸೆಯನ್ನು ತಿಳಿದು ಯೇಸು ರಕ್ತದ ಬೆವರುತ್ತಾನೆ. ನಂತರ ಆತನು ಯುಹುದಿಗಳ ಧಾರ್ಮಿಕ ಮುಖಂಡರಾದ ಅನ್ನಾಸ್ ಮತ್ತು ಕಾಯ್ಪಾಸ್ ಅವರ ಅನ್ಯಾಯದ ತನಿಕೆಗೆ ಒಳ ಪಡುತ್ತಾನೆ, ನಂತರ ರೋಮ್ ಪ್ರತಿನಿಧಿ ಪಿಲಾತನ ತನಿಕೆಗೆ ಒಳಪಡುತ್ತಾನೆ, ಪಿಲಾತನಿಗೆ ಯೇಸುವಿನಲ್ಲಿ ಎನೊಂದು ತಪ್ಪು ಕಾಣದೇಯು, ಯಹೂದಿಗಳಿಗೆ ಹೆದರಿ ಯೇಸುವನ್ನು ಯೆಹೂದಿಗಳ ಸಂಪ್ರಾದಾಯದಂತೆ ಶಿಲುಭೆಗೇರಿಸಿ ಸಾಯಿಸುವ ಶಿಕ್ಷೆಯನ್ನು ನೀಡಲು ಅನುಮತಿ ನೀಡುತ್ತಾನೆ. ಯೇಸುವಿಗೆ ಇಂತಹ ಶಿಕ್ಷೆ ಯಾಕಾಯಿತೆಂದರೆ ಅಡಾಮ್ ದೇವರು ಸ್ರಷ್ಟಿಸಿದ ಮೊದಲ ಮನು ಅವನು ತನ್ನ ಪತ್ನಿಯೊಂದಿಗೆ ಸೇರಿ ದೇವರಿಗೆ ಅವೀಧೆಯನಾಗಿ ನೆಡೆದು ದೇವರ ಶಾಪಕ್ಕೆ ಗುರಿಯಾಗಿ ವೈಕುಂಟದ ಭಾಗ್ಯವನ್ನು ಕಳೆದುಕೊಂಡ, ಅದಕ್ಕಾಗಿ ಅಡಾಮ್ ಮತ್ತು ಇಡೀ ಮನಕುಲ ಪಾಪಕ್ಕೆ ಸಿಲುಕುತ್ತದೆ. ಈ ಪಾಪದ ನಿವಾರಣೆಗಾಗಿ ಪಶ್ಚಾತಾಪ ಪಟ್ಟು ಮಾನವ ಪರಿವರ್ತನೆಗೊಳ್ಳಲು ದೇವರು ಸ್ವತ ಪ್ರಥ್ವಿಗೆ ಸ್ವತ ತನ್ನ ಪುತ್ರ ಯೇಸುವನ್ನು ಕಳುಹಿಸುತ್ತಾನೆ, ದೇವರ ಯೋಜನೆಯಂತೆ ಯೇಸು ದೇವರ ಸಾಮ್ರಾಜ್ಯದ ಭೋದನೆ ಮಾಡಿ, ಪಾಪಿಗಳ ಶಿಕ್ಷೆಗೆ ಗುರಿಯಾಗಿ ಯೇಸು ತನ್ನ ರಕ್ತವನ್ನು ಹರಿಸಿ, ಶಿಲುಭೆಯಲ್ಲಿ ಪ್ರಾಣ ತೆತ್ತು ಮನುಕುಲವನ್ನು ಪಾಪದಿಂದ ವೀಮೊಚನೆ ಮಾಡುವ ದೇವರ ಯೋಜನೆ ಪೂರ್ತಿಗೊಳಿಸುತ್ತಾನೆ, ಹೀಗೆ ಮೊದಲ ಪುರುಷ ಅಡಾಮ್ಗೆ ಅಂತ್ಯಕ್ರಿಯೆ ನೆಡದ ಗೊಲ್ಗೊಥಾ ಸ್ಥಳದಲ್ಲಿ ಶಿಲುಭೆಯಲ್ಲಿ ಪ್ರಾಣ ನೀಡುತ್ತಾನೆ. ಹೀಗೆ ಅಡಾಮ್ ಆರಂಭ ಮಾಡಿದ ಪಾಪದ ಪಯಣ, ಯೇಸು ಕ್ರಿಸ್ತನ ಶಿಲುಭೆಯ ಪಯಣ ಗೊಲ್ಗೊಥಾದಲ್ಲಿ ಆಂತ್ಯಗೊಂಡು ಮನುಕುಲವನ್ನು ಪಾಪದಿಂದ ವಿಮುಕ್ತಿ ಹೊಂದಲು ದಾರಿಯಾಗುತ್ತದೆ’ ಎಂದು ಅವರು ಸಂದೇಶ ನೀಡಿದರು.
ಎರಡನೆ ಭಾಗದಲ್ಲಿ ವಿಶ್ವಾಸಿಗಳ ಪ್ರಾರ್ಥನೆ ನೆಡೆದು, ಪವಿತ್ರ ಸಭೆಗಾಗಿ, ಕಥೊಲಿಕ್ ಜಗತ್‍ಗುರು ಪೆÇೀಪರಿಗಾಗಿ, ಬಿಶಪರಿಗಾಗಿ, ಧರ್ಮಗುರುಗಳಿಗಾಗಿ, ವಿಶ್ವಾಸಿಗಳಿಗಾಗಿ, ಅನಾಥ ಬಡಬಗ್ಗರಿಗಾಗಿ, ರೋಗಿಗಳಿಗಾಗಿ, ಹೀಗೆ ಅನೆಕ ರೀತಿಯ ಪ್ರಾರ್ಥನೆಯನ್ನು ದೇವರಲ್ಲಿ ಸಮರ್ಪಣೆ ಗೊಂಡವು.
ಮೂರನೇ ಭಾಗದಲ್ಲಿ ಶಿಲುಭೆಯಲ್ಲಿ ಯೇಸುವಿನ ಮರಣದ ವಿಧಿಯನ್ನು ನೆಡಸಿ ಶಿಲುಭೆಗೆ ಮುತ್ತು ನೀಡಿ ನಮಿಸುವ ಕಾರ್ಯ ನೆಡೆಯಿತು. ಕೊನೆಯ ಭಾಗವಾಗಿ ಕ್ರಿಸ್ತ ಪ್ರಸಾದವನ್ನು ಹಂಚಲಾಯಿತು. ಯೇಸುವಿನ ಕಶ್ಟ ಮರಣದ ಶುಭ ಶುಕ್ರವಾರದ ಈ ಧಾರ್ಮಿಕ ವಿಧಿಯಲ್ಲಿ ಹಲವಾರು ಧರ್ಮಭಗಿನಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು.