ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ


ಕುಂದಾಪುರ, ಎ.18: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ ನೆಡೆಯಿತು. ಇದರ ನೇತ್ರತ್ವವನ್ನು ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೆರವೇರಿಸಿಕೊಟ್ಟರು.
ಪ್ರಾರ್ಥನ ವಿಧಿಯ ಪ್ರಥಮ ಭಾಗದಲ್ಲಿ ದೇವರ ವಾಕ್ಯಗಳ ಪಠಣ ಮತ್ತು ಪ್ರವಚನ ನೆಡೆಯಿತು. ಪೆರಂಪಳ್ಳಿ ಟ್ರಿನಿಟಿ ಆಂಗ್ಲಾ ಮಾಧ್ಯಮ ಶಾಲೆಯ ಪ್ರಾಂಶುಪಾಲ ಧರ್ಮಗುರು ವಂ| ಅನಿಲ್ ಡಿಕೋಸ್ತಾ ‘ಪರಮ ಪ್ರಸಾದ (ಯೇಸು ಕರುಣಿಸಿದ ರೊಟ್ಟಿ) ನಮ್ಮ ಆತ್ಮದ ರಕ್ಷಣೆಗೆ ಮತ್ತು ಪೆÇೀಷಣೆಗೆ ಅಗತ್ಯವಿರುವ ಅತ್ಯಂತ ಪವಿತ್ರವಾದ ಸಂಸ್ಕಾರವಾಗಿದೆ. ಯೇಸು ಸ್ವಾಮಿ ರಚಿಸಿದ ಇನ್ನಿತರ ಸಂಸ್ಕಾರಗಳು ನಮ್ಮ ಶಾರೀರಕ್ಕೆ ಸಂಬಂಧ ಪಟ್ಟವುಗಳಾದರೆ ಪರಮ ಪ್ರಸಾದ ಸಂಸ್ಕಾರವು ನಮ್ಮ ಆತ್ಮದ ರಕ್ಷಣೆಗಾಗಿ ಮಾಡಲ್ಪಟ್ಟದಾಗಿದೆ. ಅದನ್ನು ಯೇಸು ತನ್ನ ಜೀವವನ್ನೆ ಬಲಿದಾನ ನೀಡಲು ಸಿದ್ದನಾಗಿ ಅದಕ್ಕೆ ಅರ್ಥ ಬರುವಂತ್ತೆ, ಕೊನೆಯ ಭೋಜನದ ದಿನ ಯೇಸು ರೊಟ್ಟಿಯನ್ನು ಆಶಿರ್ವದಿಸಿ ಪವಿತ್ರವನ್ನಾಗಿಸಿದರು. ಆಮೇಲೆ ಅದನ್ನು ಮುರಿದು ಹಂಚಿ ಈ ಸಂಸ್ಕಾರವನ್ನು ನಿತ್ಯವೂ ನನ್ನ ನೆನಪಿಗಾಗಿ ಹಾಗೂ ಆತ್ಮದ ರಕ್ಷಣೆಗಾಗಿ ಮಾಡಿರಿ ಎಂದು ಹೇಳಿ ಹಾಗೇ ಪವಿತ್ರ ಶುಕ್ರವಾರದಂದು ತನ್ನ ದೇಹವನ್ನು ದಂಡಿಸಿಕೊಂಡು ಶಿಲುಭೆಗೇರಿ ತನ್ನ ಈ ಬಲಿದಾನಕ್ಕೆ ನೀಜ ಅರ್ಥ ನೀಡಿದರು. ಈ ಸಂಸ್ಕಾರವನ್ನು ಮುಂದುವರೆಸಿಕೊಂಡು ಹೋಗಲು ತನ್ನ ಶಿಷ್ಯರಿಗೆ ಧರ್ಮಗುರುವಿನ ದಿಕ್ಷೆಯನ್ನು ನೀಡಿ ಧರ್ಮಗುರುಗಳ ಸಂಸ್ಕಾರವನ್ನು ನೀಡಿದರು’ ಹಾಗೇ ಅವರು ಮುಂದುವರೆಸುತ್ತ ‘ಯಾಜಕರು ದೇವರ ಸ್ಥಾನದಲ್ಲಿದ್ದರು, ಆತ ಮನುಷ್ಯ, ಆದ್ದರಿಂದ ತಮ್ಮ ಧಾರ್ಮಿಕ ಸಂಸ್ಕಾರವನ್ನು ಒಳ್ಳೆಯ ರೀತಿಯಲ್ಲಿ ನೆಡೆದುಕೊಂಡು ಹೋಗಲು ವಿಶ್ವಾಸಿಗಳ ಪ್ರಾರ್ಥನೆ ಅಗತ್ಯವಿದೆ ಹಾಗಾಗಿ ಯಾಜಕರಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿಸಿರಿ’ ಎಂದು ಅವರು ಪ್ರವವಚನ ನೀಡಿದರು.
ಎರಡನೇ ಭಾಗದಲ್ಲಿ ಆರಿಸಲ್ಪಟ್ಟ ವಿಶ್ವಾಸಿಗಳ ಪಾದ ತೊಳೆಯುವ ಧಾರ್ಮಿಕ ವಿಧಿಯನ್ನು ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೆರವೇರಿಸಿಕೊಟ್ಟರು ನೆಡೆಸಿಕೊಟ್ಟರು. ಮೂರನೇ ಭಾಗವಾಗಿ ರೊಟ್ಟಿ ಮತ್ತು ದ್ರಾಕ್ಷರಸದೊಂದಿಗೆ ಪರಮ ಪ್ರಸಾದದ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಈ ಮಹಾ ದಿವ್ಯ ಬಲಿ ಪೂಜೆಯ ಧಾರ್ಮಿಕ ವಿಧಿಯಲ್ಲಿ ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಸಹಾಯಕ ಧರ್ಮಗುರು ವಂ|ರೋಯ್ ಲೋಬೊ, ಗೋವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಂದಾಪುರದವರಾದ ಧರ್ಮಗುರು ವಂ|ರೋಶಾನ್ ಡಿಸೋಜಾ ಬಲಿದಾನದಲ್ಲಿ ಭಾಗಿಯಾದರು. ಹೀಗೆ ಮೂರು ಧಾರ್ಮಿಕ ವಿಧಿಗಳು ನೆಡೆದ ಬಳಿಕ ಪರಮ ಪ್ರಸಾದವನ್ನು ವಿಶ್ರಾಂತಿ ಪೀಠಕ್ಕೆ ಕೊಂಡಯ್ದ ಬಳಿಕ ಫಾ|ಅನಿಲ್ ಡಿಕೋಸ್ತಾ ಪರಮ ಪ್ರಸಾದದ ಆರಾಧನೆಯನ್ನು ನೆಡೆಸಿಕೊಟ್ಟರು. ಈ ಧಾರ್ಮಿಕ ವಿಧಿಯಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.