ಕುಂದಾಪುರ: ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗ್ರತಿ

ಕುಂದಾಪುರ: ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗ್ರತಿ


ಕುಂದಾಪುರ, ಮಾ.2: ರೋಟರಿ ಕ್ಲಬ್ ದಕ್ಷಿಣ ಹಾಗೂ ರೋಟಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇವರ ಜಂಟಿ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸುವ ಕಾರ್ಯಕ್ರಮ ಸ್ಥಳಿಯ ಸಂತ ಜೋಸೆಫ್ ಪ್ರೌಢ ಶಾಲಾ ಸಭಾ ಭವನದಲ್ಲಿ ಜರುಗಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ರೋ| ಕೆ.ಕೆ. ಕಾಂಚನ್ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ರೋಟರಿ ಕ್ಲಬ್ ದಕ್ಷಿu ಇದರ ಅಧ್ಯಕ್ಷರಾದ ಜಾನ್ಸನ್ ಡಿಆಲ್ಮೇಡಾ ಪ್ರಸ್ತಾವಿಕ ನುಡಿಗಳನ್ನಾಡಿದರು. ರೋಟಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ಆಲ್ಡ್ರಿನ್ ಡಿಸೋಜಾ ಸ್ವಾಗತವನ್ನು ಕೋರಿದರು. ಶಾಲಾ ಮುಖ್ಯೋಪಾದ್ಯಾಯಿನಿ ಸಿಸ್ಟರ್ ವಾಯ್ಲೆಟ್ ತಾವ್ರೊ ಕ್ರತಜ್ನತೆಯನ್ನು ಸಲ್ಲಿಸಿದರು. ರೋ | ಮನೋಹರ್ ಭಟ್ ರೋಟಾರ್ಯಾಕ್ಟ್ ಕಾರ್ಯದರ್ಶಿ ಸನತ್ ಶೇಟ್ ಉಪಸ್ಥಿತರಿದ್ದು, ಕಾರ್ಯಕ್ರದ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ರಸ್ತಾ ಸುರಕ್ಷತಾ ಕ್ರಮಗಳ ಕೈ ಪಿಡಿಯನ್ನು ನೀಡಲಾಯಿತು.