ಕುಂದಾಪುರ ಯುವ ಸಂಚಾಲನೆಯಿಂದ ವಿವಿಧ ಸಾಂಸ್ಕ್ರತಿಕ ಸ್ಪರ್ಧೆಗಳು

JANANUDI.COM NETWORK

 

ಕುಂದಾಪುರ ಯುವ ಸಂಚಾಲನೆಯಿಂದ ವಿವಿಧ ಸಾಂಸ್ಕ್ರತಿಕ ಸ್ಪರ್ಧೆಗಳು

 


ಕುಂದಾಪುರ, ಸೆ.9: ಕುಂದಾಪುರ ರೋಜರಿ ಮಾತಾ ಚರ್ಚಿನ ಭಾರತೀಯ ಯುವ ಸಂಚಾಲನೆಯಿಂದ ಮೊಂತಿ ಹಬ್ಬದ ಪ್ರಯುಕ್ತ ಹಿರಿಯರಿಗೆ ಮತ್ತು ಕಿರಿಯರಿಗೆ ವಿವಿಧ ರೀತಿಯ ಸಾಂಸ್ಕ್ರತಿಕ ಸ್ಪರ್ಧೆಗಳನ್ನು ಎರ್ಪಡಿಸಿತ್ತು. ಸ್ಪರ್ಧೆಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಹುಮಾನಗಳನ್ನು ವಿತರಿಸಿ ‘ಮೊತಿ ಹಬ್ಬದ ಪ್ರಯುಕ್ತ ಎರ್ಪಡಿಸಿದ ಈ ಕಾರ್ಯಕ್ರಮದಲ್ಲಿ ನೀವೆಲ್ಲಾ ಉತ್ತಮವಾದ ಪ್ರದರ್ಶನಗಳನ್ನು ನೀಡಿದ್ದಿರಿ, 9 ತಿಂಗಳಿನ ಮಗುವಿನಿಂದ ಹಿಡಿದು 90 ವರ್ಷದ ಹಿರಿಯರೂ ಕೂಡ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಲ್ಲದೆ ಹಿರಿಯರು ಕೂಡ ಕುಣಿದು ಕುಪ್ಪಳಿಸಿದಕ್ಕೆ ಅಭಿನಂದನೆ ಸಲ್ಲಿಸುತ್ತಾ, ಮೊಂತಿ ಮಾತೆಯ ಆದರ್ಶವನ್ನು ಪಾಲಿಸೋಣ” ಎಂದು ನುಡಿದರು.
ಒಳಗಾಂಣ ಆಟದಲ್ಲಿ ವಿಜೇತರಾದ ಮಕ್ಕಳಿಗೆ ಹಿರಿಯರಿಗೆ. ಕಥೊಲಿಕ್ ಸಭಾ ಭಾಷಣ ಸ್ಪರ್ಧೆಯ ವಿಜೇತರಿಗೆ, ಚರ್ಚ ಪತ್ರ ರೊಜಾರಿಯುಮ್ ಪತ್ರದ ಕ್ವಿಜ್ ಸ್ಪರ್ಧಾ ವಿಜೇತರಿಗೆ ಪ್ರಾಂಶುಪಾಲ ವಂ|ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್, ಸಹಾಯಕ ಧರ್ಮಗುರು ವಂ|ಫಾ|ವಿಜಯ್ ಡಿಸೋಜಾ, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ವೈಲೆಟ್ ತಾವ್ರೊ ಸರ್ವ ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಬಹುಮಾನಗಳನ್ನು ವಿತರಿಸಿದರು. ಕಥೊಲಿಕ್ ಸಭಾ ಅಧ್ಯಕ್ಷ ವಾಲ್ಟರ್ ಡಿಸೋಜಾ, ಕಾರ್ಯದರ್ಶಿ ವಿಲ್ಸನ್ ಡಿಆಲ್ಮೇಡ , ರೊಜಾರಿಯುಮ್ ಪತ್ರದ ಸಂಪಾದಕ ಬರ್ನಾಡ್ ಡಿಕೋಸ್ತಾ ಉಪಸ್ಥಿತರಿದ್ದರು.
ಉತ್ತಮ ಗಾಯನ ಪ್ರಶಸ್ತಿ ವೆಲಂಕಣಿ ವಾಳೆಗೆ, ಉತ್ತಮ ನ್ರತ್ಯ ಪ್ರಶಸ್ತಿ ನಿತ್ಯಾಧರ್ ವಾಳೆಗೆ ದೊರಕಿತು ದ್ವೀತಿಯ ಸಮಗ್ರ ಪ್ರಶಸ್ತಿ ರೋಜರಿ ಎ ವಾಳೆಗೆ, ಸಮಗ್ರ ಪ್ರಶಸ್ತಿ ನಿತ್ಯಾಧರ್ ವಾಳೆಗೆ ದೊರಕಿತು. ವೇದಿಕೆಯಲ್ಲಿ ಯುವ ಸಂಚಾಲನ ಅಧ್ಯಕ್ಷ ಆಲೆನ್ ತಾವ್ರೊ, ಕಾರ್ಯದರ್ಶಿ ನಿತಿನ್ ಬರೆಟ್ಟೊ, ಸಚೇತಕಿ ರೇಶ್ಮಾ ಫೆರ್ನಾಂಡಿಸ್, ತೀರ್ಪುದಾರದಾದ ಮೆಲ್ವಿನ್ ರೊಡ್ರಿಗಸ್, ರೆಬೆಕಾ ಲುವಿಸ್ ಉಪಸ್ಥಿತರಿದ್ದರು. ಸಾಂಸ್ಕ್ರತಿಕ ಕಾರ್ಯದರ್ಶಿ ಅಸ್ಮಿತಾ ಕೊರೆಯಾ ಸ್ವಾಗತಿಸಿ ಸಾಂಸ್ಕ್ರತಿಕ ಸ್ಪರ್ಧೆಯನ್ನು ನಡೆಸಿಕೊಟ್ಟರು. ಸಭಾ ಕಾರ್ಯಕ್ರಮವನ್ನು ಅಶ್ವಿನ್ ಪಿಂಟೊ ನಡೆಸಿದರು, ಸಾಮ್ಯುವೇಲ್ ಲುವಿಸ್ ಧನ್ಯವಾದಗಳನ್ನು ಅರ್ಪಿಸಿದರು.