ಕುಂದಾಪುರ ಮಾಸ್ಕನ್ನು 4 ರೂಪಾಯಿ ಹೆಚ್ಚಿಗೆ ಮಾರಾಟ ಮಾಡಿದಕ್ಕೆ 5000 ರೂ. ದಂಡ ವಸೂಲಿ

JANANUDI.COM NETWORK

 

 

ಕುಂದಾಪುರ ಮಾಸ್ಕನ್ನು 4 ರೂಪಾಯಿ ಹೆಚ್ಚಿಗೆ ಮಾರಾಟ ಮಾಡಿದಕ್ಕೆ 5000 ರೂ. ದಂಡ ವಸೂಲಿ

 

 

ಕುಂದಾಪುರ ಎ.5: ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಗ್ರಿಗಳನು ಹೆಚ್ಚಿಗೆ ದರ ವಸೂಲಿ ಮಾಡುತಿದ್ದಾರೆಂದು ದೂರುಗಳು ಬಂದಿರುವುದರಿಂದ ಕಾನೂನು ಮಾಪನ ಶಾಸ್ತ್ರ ಇಲಾಖೆಯು ಅನೇಕ ಅಂಗಡಿ ಶಾಪ್ ಗಳಲ್ಲಿ ದಾಳಿ ಮಾಡುತಿದೆ. ಅದರಂತೆ ಇವತ್ತು ಕುಂದಾಪುರದಲ್ಲಿ ದಾಳಿ ಮಾಡಿದ ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕರಾದ ಗಜೇಂದ್ರ, ನಿರೀಕ್ಷರಾದ ರಾಗ್ಯ ನಾಯಕ್, ಬಿ.ಎಸ್.ನಂಜಪ್ಪ, ಸ್ಮಿತಾ ಹಾಗೂ ಸಿಬ್ಬಂದಿ ಸಂತೋಷ್ ಇವರ ತಂಡವು ಕುಂದಪುರ ನಗರದ ಓಷಧಿ ಅಂಗಡಿಗಳ ತಪಾಸಣೆ ಮಾಡಿದ ಸಂದರ್ಭದಲ್ಲಿ ಒಂದು 3 ಪ್ಲೈ ಮಾಸ್ಕಿಗೆ ಕೇಂದ್ರ ಸರಕಾರವು ರೂ. 16 ನಿಗದಿ ಪಡಿಸಿದ್ದು, ಅದನ್ನು ಸದರಿ ಅಂಗಡಿಯವರು ಮಾಸ್ಕನ್ನು ರೂ. 20 ಕ್ಕೆ ಓಷಧ ಗ್ರಾಹಕರಿಗೆ ಮಾರಿರುತ್ತಾರೆ. ಸದರಿ ಓಷಧ ಅಂಗಡಿಯ ವಿರುದ್ದ ಮೊಕ್ಕದ್ದಮೆ ದಾಖಲಿಸಿ ರೂಪಾಯಿ 5000 ಯ ದಂಡವನ್ನು ವಸೂಲಿ ಮಾಡಲಾಗಿದೆ.
ಹಾಗೇ ಕುಂದಾಪುರ ತರಕಾರಿ, ದಿನಸಿ ಮತ್ತು ಮಾಂಸದ ಅಂಗಡಿಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಯವರ ಸೂಚನೆಯಂತ್ತೆ ಅನೇಕ ತರಕಾರಿ ಅಂಗಡಿಗಳಲ್ಲಿ ತರಕಾರಿಗಳ ದರ ಪಟ್ಟಿಯನ್ನು ಪ್ರದರ್ಶಿಸಿರುವುದು ಕಂಡು ಬಂದಿದೆ. ಇದೇ ರೀತಿ ಎಲ್ಲಾ ತರಕಾರಿ ಅಂಗಡಿಗಳಲ್ಲಿ ದರ ಪಟ್ಟಿ ಪ್ರದರ್ಶಿಸಲು ಸೂಚಿಸಲಾಯಿತು. ಜಿಲ್ಲಾಧಿಕಾರಿಗಳಾದ ಜಿ.ಜಗದೀಶ್ ರವರು ಇಂಥಹ ಆರೋಗ್ಯದ ತುರ್ತು ಸಂದರ್ಭದಲ್ಲಿ ಮಾಸ್ಕ್ ಹಾಗೂ ಸಾನಿಟೈಸರುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಜರಗಿಸಲು ಸೂಚಿಸಿದ್ದಾರೆಂದು, ಉಡುಪಿ ಜಿಲ್ಲೆಯ ಕಾನೂನು ಮಾಪನ ಶಾಸ್ತ್ರ ಇಲಖೆಯ ಸಹಾಯಕ ನಿಯಂತ್ರಕರಾದ ಗಜೇಂದ್ರ ಇವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅದರಂತೆ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಜಾಗ್ರಾತರಿಬೇಕು