ವರದಿ:ಮಝರ್ ಕುಂದಾಪುರ

ಕುಂದಾಪುರ : ಸುರಿಯುತ್ತಿದ್ದ ಭಾರಿ ಗಾಳಿ ಮಳೆಗೆ ಸಿಲುಕಿದ ಮಹಿಳೆಯೋರ್ವಳು ಹಳ್ಳದಲ್ಲಿ ಕಾಲಿ ಜಾರಿ ಬಿದ್ದು ಮೃತ ಪಟ್ಟ ಘಟನೆ ಕುಂದಾಪುರ ರಾಮ ಮಂದಿರ ರಸ್ತೆಯ ಮೋರಿ ಬಳಿ ನಡೆದಿದೆ. ಮೃತ ಪಟ್ಟ ಮಹಿಳೆಯನ್ನು ಸುಜಾತ ಕೃಷ್ಣ ಖಾರ್ವಿ(43) ಎಂದು ಗುರ್ತಿಸಲಾಗಿದೆ.ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಭಾರಿ ಗಾಳಿ ಮಳೆ ಸುರಿಯುತಲಿದ್ದು ಈ ಸಂದರ್ಭದಲ್ಲಿ ಗಾಳಿಯ ರಭಸಕ್ಕೆ ಸಿಲುಕಿದ ಸುಜಾತ ಕೊಡೆ ಸಹಿತ ಕಾಲು ಜಾರಿ ಮೋರಿಗೆ ಉರುಳಿ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
