ಕುಂದಾಪುರ ಹೋಲಿ ರೋಜರಿ : ಮಕ್ಕಳ ದಿನಾಚರಣೆ ಮತ್ತು ಇಂಟರ್‍ಯಾಕ್ಟ್  ಕ್ಲಬ್ ಪದ ಪ್ರದಾನ

JANANUDI.COM NETWORK

 

ಕುಂದಾಪುರ ಹೋಲಿ ರೋಜರಿ :ಮಕ್ಕಳ ದಿನಾಚರಣೆ ಮತ್ತು ಇಂಟರ್‍ಯಾಕ್ಟ್  ಕ್ಲಬ್ ಪದ ಪ್ರದಾನ

 

 

ಕುಂದಾಪುರ ನಂ.14 : ಇಲ್ಲಿನ ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ಆಶ್ರಯದಲ್ಲಿ ಕುಂದಾಪುರದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಇಂಟರ್‍ಯಾಕ್ಟ್ ಕ್ಲಬ್ ಪದ ಪ್ರದಾನ ಸಮಾರಂಭ ಜರುಗಿತು.

            ರೋಟರಿ ಸನ್ ರೈಸ್ ಅಧ್ಯಕ್ಷ ಕೆ ಭಾಸ್ಕರ್ ಬಿ ಇಂಟರ್‍ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷೆ ವೆನಿಷಾ ಡಿಸೋಜ, ಕಾರ್ಯದರ್ಶಿ ಪ್ರಜ್ವಲ್ ಪಾಯ್ಸ್, ಖಜಾಂಚಿ ರಿಶೀಕಾ ಮೊಂತೆರೊರವರಿಗೆ ಪದ ಪ್ರದಾನ ನೆರವೇರಿಸಿದರು.

            ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಅವರು ಅಧ್ಯಕ್ಷತೆ ವಹಿಸಿದರು ಹಾಗೂ ಮಕ್ಕಳ ದಿನಾಚರಣೆಯ ಸಲುವಾಗಿ ಹಿತನುಡಿಯನ್ನು ನೀಡಿ ಶುಭ ಹಾರೈಸಿದರು. ಇಂಟರ್‍ಯಾಕ್ಟ್ ಕ್ಲಬ್ ನ ಚೇರ್ ಮೆನ್ ಹಾಜಿ ಅಬು ಶೇಖ್ ಸಾಹೇಬ್ ತಮ್ಮ ಇಂಟರ್‍ಯಾಕ್ಟ್ನ ಬಗ್ಗೆ ಪ್ರಾಸ್ತವಿಕ ಮಾತನಾಡಿ ಮಕ್ಕಳ ದಿನಾಚರಣೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿದರು. ರೋಟರಿ ಕಾರ್ಯದರ್ಶಿ ಶಿವಾನಂದ ಎಸ್.ಪಿ, ಶಾಲೆಯ ಇಂಟರ್‍ಯಾಕ್ಟ್ ಕೋ-ಆರ್ಡಿನೇಟರ್ ಶಿಕ್ಷಕ ಲುವಿಸ್ ಪ್ರಶಾಂತ್ ರೇಬೆರೊ ರೋಟರಿ ಸನ್ ರೈಸ್ ಸದಸ್ಯರಾದ ನವೀನ್ ಡಿಸೋಜರವರು ಉಪಸ್ಥಿತಸಿದ್ದರು.

            ರೋಟರಿ ಸನ್ ರೈಸ್ ಮತ್ತು ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರ ಜಂಟಿ ಆಶ್ರಯದಲ್ಲಿ ಜಾದೂಗರ್ ಸತೀಶ್ ಹೆಮ್ಮಾಡಿಯವರಿಂದ ಜಾದೂ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಿಕ್ಷಕಿ ಸೆಲಿನ್ ಡಿಸೋಜ ಸ್ವಾಗತಿಸಿದರು ಮತ್ತು ಶಿಕ್ಷಕಿ ನೀತಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.  ಶಿಕ್ಷಕಿ ಲಕ್ಷ್ಮಿ ವಂದಿಸಿದರು.