ಕುಂದಾಪುರ ಪುರಸಭಾ ವ್ಯಾಪ್ತಿಯ ವ್ಯಾಪರಸ್ತರು ಜುಲಾಯ್ 13 ಬೆಳಿಗ್ಗೆಯಿಂದ ಮಧ್ಯಾಹ್ನ 2ಗಂಟೆ ತನಕ ಮಾತ್ರ ವ್ಯವಹರಿಸುವರು : ವ್ಯಾಪರಿಸ್ತರಿಂದ ಸ್ವಯಂಪ್ರೇರಿತವಾಗಿ ಬಂದ್

JANANUDI.COM NETWORK

 

ಕುಂದಾಪುರ ಪುರಸಭಾ ವ್ಯಾಪ್ತಿಯ ವ್ಯಾಪರಸ್ತರು ಜುಲಾಯ್ 13 ಬೆಳಿಗ್ಗೆಯಿಂದ ಮಧ್ಯಾಹ್ನ 2ಗಂಟೆ ತನಕ ಮಾತ್ರ ವ್ಯವಹರಿಸುವರು : ವ್ಯಾಪರಿಸ್ತರಿಂದ ಸ್ವಯಂಪ್ರೇರಿತವಾಗಿ ಬಂದ್

 

 [ಔಷಧಾಲಯಗಳು, ಹಾಲು, ಹೊಟೇಲ್ ಮುಂತಾದ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳು ಮಧ್ಯಾಹ್ನ 2ಗಂಟೆ ಬಳಿಕ ಮುಚ್ಚಲಿವೆ]

 

 

ಕುಂದಾಪುರ, ಜು.11: ಕೋವಿಡ್ ಸೋಂಕು ಹಬ್ಬುವ ಭೀತಿಯ ಹಿನ್ನೆಲೆಯಲ್ಲಿ ಜು.13ರಿಂದ ಬೆಳಿಗ್ಗೆಯಿಂದ ಮಧ್ಯಾಹ್ನ 2ಗಂಟೆ ತನಕ ಮಾತ್ರ ಪುರಸಭಾ ವ್ಯಾಪ್ತಿಯಲ್ಲಿ ಅಂಗಡಿಗಳು ತೆರೆಯಲಿವೆ. ಎರಡು ಗಂಟೆ ಬಳಿಕ ಎಲ್ಲ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ನಡೆಸಲಾಗುವುದೆಂದು ಕುಂದಾಪುರದ ವರ್ತಕರು ಮಾದ್ಯಮಕ್ಕೆ ತಿಳಿಸಿದ್ದಾರೆ

ಕುಂದಾಪುರ ಪುರಸಭಾ ವ್ಯಾಪ್ತಿಯ ಔಷಧಾಲಯಗಳು, ಹಾಲು, ಹೊಟೇಲ್ ಮುಂತಾದ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳು ಮಧ್ಯಾಹ್ನ 2ಗಂಟೆ ಬಳಿಕ ಮುಚ್ಚಲಿವೆ ಎಂದು ಶೆರೋನ್‌ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವ್ಯಾಪಾರಸ್ಥರು ಮಾಹಿತಿ ನೀಡಿದರು. ಸ್ಥಳಿಯ ಪುರಸಭೆ ವ್ಯಾಪ್ತಿಯ 150 ಹೆಚ್ಚು ವ್ಯಾಪಾರಸ್ಥರು ಈ ತೀರ್ಮಾನಕ್ಕೆ ಬಂದಿದ್ದಾರೆ. ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಎಲ್ಲರ ಸಹಕಾರದಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದರು

    ದಿನಸಿ ಅಂಗಡಿಗಳು, ಮೊಬೈಲ್ ಮಳಿಗೆಗಳು, ಸೆಲೂನ್, ಬ್ಯೂಟಿ ಪಾರ್ಲರ್, ಬೇಕರಿ, ಬಟ್ಟೆ ಅಂಗಡಿಗಳು, ಚಿನ್ನದಂಗಡಿಗಳು ಜುಲೈ ತಿಂಗಳ ಅಂತ್ಯದ ತನಕ ಮಧ್ಯಾಹ್ನ ಎರಡು ಗಂಟೆ ತನಕ ಮಾತ್ರ ತೆರೆದಿಡಲಾಗುವುದು.ಈ ಸಂದರ್ಭದಲ್ಲಿ ವ್ಯಾಪರಸ್ತರಾದ ರಾಧಾಕೃಷ್ಣ, ಶ್ರೀಧರ್‌ ಪಿ.ಎಸ್‌. ಹುಸೇನ್‌ ಹೈಕಾಡಿ, ಅಬು ಮಹಮ್ಮದ್‌, ಜುವೆಲ್ಲರ್ ಅಸೋಸಿಯೇಶನ್‌ ಅಧ್ಯಕ್ಷ ಸತೀಶ್‌ ಶೇಟ್‌, ವಿಜಯ ಕುಮಾರ್‌ ಶೆಟ್ಟಿ, ಸತೀಶ್‌ ಹೆಗ್ಡೆ, ಜಸ್ವಂತ್‌ ಸಿಂಗ್‌, ಸುರೇಂದ್ರ ಶೇಟ್ ಉಪಸ್ಥಿತರಿದ್ದರು.