ಕುಂದಾಪುರ ನಗರದ ಸಂಚಾರಿ ಠಾಣೆ ಹೆಡ್‌ಕಾನ್ಸ್‌ಟೆಬಲ್‌ಗೆ ಕೊರೋನಾ ಪಾಸಿಟಿವ್ ದ್ರಢ ಕುಂದಾಪುರ ಕೋವಿಡ್ 19 ಆಸ್ಪತ್ರೆಗೆ ದಾಖಲು

JANANUDI.COM NET WORK

 

 

ಕುಂದಾಪುರ ನಗರದ ಸಂಚಾರಿ ಠಾಣೆ ಹೆಡ್‌ಕಾನ್ಸ್‌ಟೆಬಲ್‌ಗೆ ಕೊರೋನಾ ಪಾಸಿಟಿವ್ ದ್ರಢ ಕುಂದಾಪುರ ಕೋವಿಡ್ 19 ಆಸ್ಪತ್ರೆಗೆ ದಾಖಲು

 

 

59 ವರ್ಷ ಪ್ರಾಯದ ಹೆಡ್‌ಕಾನ್ಸ್‌ಟೆಬಲ್‌ ಒಬ್ಬರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅವರಿಗೆ ಕೋವಿಡ್-19 ತಪಾಸಣೆ ನಡೆಸಲಾಗಿತ್ತು. ಅದರ ವರದಿ ಬಂದಿದ್ದು ಹೆಡ್‌ಕಾನ್ಸ್‌ಟೆಬಲ್‌ ಅವರಿಗೆ ಕೊರೋನಾ ಇರುವುದು ತಿಳಿದಿದೆ. ಸದ್ಯ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ತಿಳಿದು ಬಂದಿದೆ.

   ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯನ್ನು ಎರಡು ದಿನಗಳ ಕಾಲ ಮುಚ್ಚಿ ಸ್ಯಾನಿಟೈಸಿಂಗ್ ಮಾಡಿ ಮುಚ್ಚಲಾಗಿದೆ. ಎರಡು ದಿನಗಳ ಕಾಲ ಸಮೀಪದ ಪ್ರವಾಸಿ ಮಂದಿರ (ಐಬಿ) ಯಲ್ಲಿ ಸಂಚಾರಿ ಠಾಣೆ ಕಾರ್ಯನಿರ್ವಹಿಸಲಿದೆ. ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹದಿನೈದು ದಿನಗಳ ಕಾಲ ಹೋಂ ಕ್ವಾರೆಂಟೈನ್ ಕಳಿಸಲಾಗುತ್ತದೆ. ಹೆಡ್‌ಕಾನ್ಸ್‌ಟೆಬಲ್‌ ಇದ್ದ ಪೊಲೀಸ್ ಕ್ವಾಟ್ರಸ್ ಕೂಡ ಸೀಲ್ ಡೌನ್ ಮಾಡಲಾಗಿದೆ ಎಂದು ಮಾಧ್ಯಮಕ್ಕೆ ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.