ಕುಂದಾಪುರ ದೈವಿಕ ಕರುಣೆಯ ಹಬ್ಬ- ಕಠೋರ ಪಾಪಿಗೂ ಯೇಸುವಿನ ದೈವಿಕ ಕರುಣೆ ಪ್ರಾಪ್ತವಾಗುತ್ತದೆ

ಕುಂದಾಪುರ ದೈವಿಕ ಕರುಣೆಯ ಹಬ್ಬ-  ಕಠೋರ ಪಾಪಿಗೂ ಯೇಸುವಿನ ದೈವಿಕ ಕರುಣೆ ಪ್ರಾಪ್ತವಾಗುತ್ತದೆ


ಕುಂದಾಪುರ, ಎ.28: ‘ಯೇಸು ಕ್ರಿಸ್ತರು ತನ್ನ ಹ್ರದಯದಿಂದ ಕೆಂಪು ಮತ್ತು ಬಿಳಿ ಕಿರಣಗಳನ್ನು ಹರಿಸುತ್ತಾ ಭಾಗ್ಯವಂತೆ ಸಿಸ್ಟರ್ ಫಾವೊಸ್ತಿನಳಿಗೆ ದರ್ಶನ ನೀಡಿ, ಈ ಕೆಂಪು ಕಿರಣ ಮನುಷ್ಯನ ಆತ್ಮಕ್ಕೆ ಬಲವನ್ನು ನೀಡುತ್ತದೆ ಮತ್ತು ಬಿಳಿ ಕಿರಣ ನನ್ನ ದೈವಿಕ ಕರುಣೆಯನ್ನು ಪ್ರಾಪ್ತಿ ಮಾಡುತ್ತದೆ, ಹಾಗಾಗಿ ನೀನು ಇಂತಹದೆ ಒಂದು ಚಿತ್ರವನ್ನು ರಚಿಸಿ ಇದನ್ನು ಜಗತ್ತಿಗೆ ತಿಳಿಯಪಡಿಸು, ನಾನು ಅತ್ಯಂತ ದಯಾಳು, ಎಂತಹ ಕಠೋರ ಪಾಪಿಗಳಿಗೂ ನಾನು ದಯೆ ನೀಡುತ್ತೇನೆ. ನೀನು ನನ್ನ ದಯೆಯ ಬಗ್ಗೆ ಬರೆದಿರುವ ವಿಷಯ ಒಂದು ಚಿಪ್ಪಿನಸ್ಟು ಮಾತ್ರ, ಆದರೆ ನನ್ನ ದಯೆ ಸಾಗರದಷ್ಟು ವಿಶಾಲ ಮತ್ತು ಆಳ’ ಎಂದು ಭಾಗ್ಯವಂತೆ ಫಾವೊಸ್ತಿನಳಿಗೆ ಯೇಸು ಸ್ವಾಮಿ ಹೇಳಿದ್ದರು’ ಎಂದು ಈಸ್ಟರ್ ನಂತರದ ಎರಡನೆ ಭಾನುವಾರ ಆಚರಿಸುವ ‘ದೈವಿಕ ಕರುಣೆಯ’ ಹಬ್ಬವನ್ನು ಕುಂದಾಪುರ ಚರ್ಚಿನಲ್ಲಿ ಆಚರಿಸುವಾಗ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಹೇಳಿದರು


‘ಯೇಸು ಕ್ರಿಸ್ತರು ನಮ್ಮ ಮೇಲೆ ಆಗಾಧದಸ್ಟು ಕರುಣೆಯನ್ನು ನೀಡುವಾಗ ನಾವೂ ಕೂಡ ಇತರಲ್ಲಿ ಕರುಣೆಯನ್ನು ತೋರುವ, ದೀನ ದಲಿತರಿಗೆ, ಕಷ್ಟದಲ್ಲಿರುವರಿಗೆ ಸಹಾಯ ಮಾಡೋಣ ನೀವು ಇತರರಿಗೆ ಕರುಣೆ ತೋರಿದರೆ, ದೇವರು ನಿಮ್ಮನ್ನು ಕರುಣೆ ತೋರುತ್ತಾರೆ’ ಎಂದು ಅವರು ವಿಶೇಷವಾದ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು. ಫಾ|ರೋಯ್ ಲೋಬೊ ಪರಮ ಪ್ರಸಾದದ ಆರಾಧನೆಯನ್ನು ನೆಡೆಸಿಕೊಟ್ಟರು.ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಬಲಿದಾನದಲ್ಲಿ ಭಾಗಿಯಾದರು.