JANANUDI.COM NETWORK
ಕುಂದಾಪುರ,ನ.22: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಈ ವರ್ಷ 451 ವರ್ಷದ ಸಂಭ್ರಾಮಾಚರಣೆಯ “ಪವಿತ್ರೆ ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ವಾರ್ಷಿಕ ಹಬ್ಬ (ತೆರಾಲಿ) ಈ ವರ್ಷ ಕೊವೀಡ್ ದೆಸೆಯಿಂದಾಗಿ ಸರಳವಾಗಿ ಆಚರಿಸಲು ನಿರ್ಧರಿಸಿದಂತೆ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭಾತ್ರತ್ವ ಬಾಂಧವ್ಯ ದಿನವನ್ನು ಯಾವುದೇ ಮೇರವಣಿಗೆ, ಅದ್ದೂರಿ ಇಲ್ಲದೆ ಸರಳವಾಗಿ ನಡೆಸಲಾಯಿತು
ಇಗರ್ಜಿಯಲ್ಲಿ ನಡೆದ ಭಾತ್ರತ್ವ ಬಾಂಧವ್ಯ ದಿನ ಪ್ರಧಾನ ಯಾಜಕರಾಗಿ ಧಾರ್ಮಿಕ ವಿಧಿಯನ್ನು ಬ್ರಹ್ಮಾವರ ಇಗರ್ಜಿಯ ಧರ್ಮಗುರು ವಂ| ಜೋಕಿಮ್ ಡಿಸೋಜಾ ನಡೆಸಿಕೊಟ್ಟು ‘ಕ್ರಿಸ್ತನ ಜೊತೆ ನಡೆಯುವಲ್ಲಿ ಅತ್ಯಂತ ಸಂತೋಷವಿರುತ್ತದೆ, ಚಂದ್ರನ ಮೇಲೆ ಪ್ರಥಮ ಭಾರಿ ಇಳಿದು, ಚಂದ್ರನ ಮೇಲೆ ನೆಡೆದ ನೀಲ್ ಆರ್ಮ್ ಸ್ಟ್ರಾಂಗ್ ಹೇಳಿದ್ದೆನೆಂದರೆ ತಾನು ಚಂದ್ರನ ಮೇಲೆ ಇಳಿದು ನಡೆದ ಸಂತೋಷದ ಕ್ಷಣಕಿಂತ ತಾನು ಪ್ರಥಮ ಭಾರಿ ಪರಮ ಪ್ರಸಾದ ಸ್ವೀಕರಿಸಿ ಯೇಸುವಿ ಜೊತೆ ನೆಡೆದ ದಿನವೇ ಅತ್ಯಂತ ಸಂತೋಷದ ಕ್ಷಣ ಎಂದು ಪತ್ರಕರ್ತರಿಗೆ ತಿಳಿಸಿದರು. ನಾವು ಯೇಸುವಿನ ಜೊತೆ ಸತ್ಯ ಮಾರ್ಗದಲ್ಲಿ ನೆಡೆಯೋಣ. ಯೇಸು ನಮಗಾಗಿ ಜೀವ ತೆತ್ತರು, ನಾವು ನಮಗಾಗಿ ಜೀವಿಸಿದರೆ, ಶಾಸ್ವತ ಬದುಕು ಲಭಿಸದು, ನಾವು ಇತರರಿಗಾಗಿ ಜೀವಿಸಿದರೆ, ಕಷ್ಟ ಪಟ್ಟರೆ, ಜೀವನ ಸವೆಸಿದರೆ ನಮಗೆ ದೇವರು ಶಾಸ್ವತ ಬದುಕು ನೀಡುತ್ತಾನೆ’ ಎಂದು ಪ್ರವಚನ ನೀಡಿದರು. ಜೊತೆಗೆ ಪರಮ ಪ್ರಸಾದದ ಆರಾಧನೆಯನ್ನು ನಡೆಸಿಕೊಟ್ಟರು.
ಈ ಧಾರ್ಮಿಕ ವಿಧಿಯ ನೇರವೆರಿಕೆಯಲ್ಲಿ ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಅ|ವ|ಸ್ಟ್ಯಾನಿ ತಾವ್ರೊ ಭಾಗಿಯಾಗಿ ವಂದಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಈ ಪ್ರಾರ್ಥನ ವಿಧಿಯಲ್ಲಿ ಭಾಗವಹಿಸಿದರು. ಪ್ರತಿ ವರ್ಷದಂತೆ ನಡೆಯುತಿದ್ದತೆರಾಲಿಯ ಮಂಗಳವಾರ ನಡೆಯುವ ದೇವರ ವಾಕ್ಯಗಳ ಸಂಭ್ರಮ ರದ್ದು ಪಡಿಸಲಾಗಿದ್ದು ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಂದು ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಬಹುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.