JANANUDI.COM NETWORK
ಕುಂದಾಪುರ ತೆರಾಲಿ ಪೂರ್ವಭಾವಿ ಭ್ರಾತ್ರತ್ವ ಬಾಂಧವ್ಯ ದಿನ – ಪರಮ ಪ್ರಸಾದದ ಭವ್ಯ ಮೆರವಣಿಗೆ ಆರಾಧನೆ: ಜೀವನ-ಮರಣ, ನ್ಯಾಯ-ಅನ್ಯಾಯ, ನೀತಿ-ಅನೀತಿ ಆಯ್ಕೆ ನಿಮ್ಮದು -ಫಾ|ರಿಚರ್ಡ್ ಪಾಯ್ಸ್
ಕುಂದಾಪುರ,ನ.25: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ, ಈ ವರ್ಷ 450 ವರ್ಷದ ಸಂಭ್ರಾಮಾಚರಣೆಯ “ಪವಿತ್ರೆ ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ಈ ವರ್ಷದ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತ್ರತ್ವ ಬಾಂಧವ್ಯ ದಿನವನ್ನು ‘ವಿಶ್ವಾಸದ ಯಾತ್ರೆಯಲ್ಲಿ ಯೇಸು ಪ್ರಭುವಿನ ಜೊತೆ’ ಎಂಬ ಧ್ಯೇಯದೊಂದಿಗೆ ಪರಮ ಪ್ರಸಾದದ ಆರಾಧನೆ ನ.24 ರಂದು ಭಾನುವಾರದಂದು ನೆಡೆಯಿತು.
ಪವಿತ್ರೆ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ ಬೆಳೆಗಿಸಿದ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡು, ಬಣ್ಣ ಬಣ್ಣದ ಕೊಡೆಗಳ ಜೊತೆ, ಗಾಯನ ಮಂಡಳಿಯೊಡನೆ ವಿದ್ಯುತ್ ದೀಪಗಳ ಅಲಕ್ರಂತದೊAದಿಗೆ ಪರಮ ಪ್ರಸಾದದ ಪುರ ಮೆರವಣಿಗೆಯನ್ನು ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದ ಜೊತೆ ಭಕ್ತಿ ಮತ್ತು ಶಿಸ್ತಿನಿಂದ ನೆಡೆಸಲಾಯಿತು.
ನಂತರ ಸಂತ ಮೇರಿಸ್ ವಿಧ್ಯಾ ಸಂಸ್ಥೆಯ ಮೈದಾನದಲ್ಲಿ ಪರಮ ಪ್ರಸಾದದ ಆರಾಧನೆ ಕನ್ನಡದಲ್ಲಿ ನೆಡೆಯಿತು. ಈ ಧಾರ್ಮಿಕ ವಿಧಿಯನ್ನು ನೆಡೆಸಿದ ಶಿವಮೊಗ್ಗ ಧರ್ಮಪ್ರಾಂತ್ಯದ ಕಬ್ಳೆ ಚರ್ಚಿನ ಧರ್ಮಗುರು ವಂ|ರಿಚಾರ್ಡ್ ಪಾಯ್ಸ್ ‘’ದ್ರವ್ಯ ಮತ್ತು ಯೇಸುಸ್ವಾಮಿಗೆ ಜೊತೆ ಜೊತೆಯಾಗಿ ನಾವು ಸೇವೆ ಮಾಡಲು ಸಾಧ್ಯವಿಲ್ಲಾ, ಪ್ರಾಪಂಚಿಕ ಸುಖದ ಜೊತೆ ಯೇಸುವಿನ ಭಕ್ತಿ ಆಚರಿಸಲು ಅಸಾಧ್ಯ, ಅಲ್ಲಿ ಪರಿಶುದ್ದ ವಿಶ್ವಾಸ ಇರುವುದಿಲ್ಲಾ, ನಮ್ಮ ಪರಿಸುದ್ದ ವಿಶ್ವಾಸಕ್ಕಾಗಿ ಯೇಸು ಸ್ವಾಮಿ ಕಾಯುತಿದ್ದಾರೆ. ನಾವು ನಮ್ಮ ಜೀವಿತದಲ್ಲಿ ಯೇಸುವಿಗೆ ಮೊದಲ ಆದ್ಯತೆ ನೀಡಬೇಕು. ಜೀವ-ಮರಣ, ನ್ಯಾಯ-ಅನ್ಯಾಯ, ನೀತಿ-ಅನೀತಿ ಇದರಲ್ಲಿ ಯಾವುದು ಉತ್ತಮವೆಂದು ಆಯ್ಕೆ ಮಾಡಿಕೊಳ್ಳುವುದು ನಿಮ್ಮದಾಗಿದೆ. ಯೇಸು ಪ್ರಾಪಂಚಿಕ ರಾಜನಲ್ಲಾ, ಆತ ದೈವಿಕ ರಾಜ, ಅದಕ್ಕಾಗಿ ನಮ್ಮ ಜೀವನದ ‘ವಿಶ್ವಾಸದ ಯಾತ್ರೆಯಲ್ಲಿ ಯೇಸು ಪ್ರಭುವಿನ ಜೊತೆ’ ನಡೆದು ಅವರ ರಾಜ್ಯದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಪ್ರಯತ್ನಿಸೋಣ ಎಂದು ಅವರು ಸಂದೇಶ ನೀಡಿ ಪರಮ ಪ್ರಸಾದದ ರೂಪದಲ್ಲಿರುವ ಯೇಸುವಿನ ಆಶಿರ್ವಾದವನ್ನು ನೀಡಿದರು.
[ನವೆಂಬರ್ ನಾಲ್ಕನೆ ಭಾನುವಾರ ಪ್ರಪಂಚದಾದ್ಯಂತ ಯೇಸುವನ್ನು ‘ಕ್ರಿಸ್ತ ರಾಜಾ’ ನೆಂಬ ಹಬ್ಬ ಆಚರಿಸಲು ‘ಪರಮ ಪ್ರಸಾದದ’ ಸಂಭ್ರಮ ಆಚರಿಸಲು ಆರಂಭವಾಗಿ ಕೆಲವು ದಶಕಗಳಾದವು ಮಾತ್ರ. ಆದರೆ 450 ವರ್ಷ ಇತಿಹಾಸ ಇರುವ ಕುಂದಾಪುರ ಕ್ರೆಸ್ತ ಪವಿತ್ರ ಸಭೆ ಇದಕ್ಕಿಂದ ಹಿಂದೆಯೆ ಹಲವಾರು ವರ್ಷಗಳ ಮೊದಲೇ ನವೆಂಬರ್ ನಾಲ್ಕನೆ ಭಾನುವಾರ ಕುಂದಾಪುರ ಪವಿತ್ರ ರೊಜಾರಿ ಮಾತಾ ಇಗರ್ಜಿ ತೆರಾಲಿಯ ಪೂರ್ವಭಾವಿಯಾಗಿ ಭ್ರಾತ ಬಾಂಧವ್ಯದ ಭಾನುವಾರ ಹಾಗೂ ಪರಮಪ್ರಸಾದದ ಸಂಭ್ರಮ ಆಚರಿಸುವುದು ನಡೆಯುತ್ತಲೆ ಬಂದಿದೆ ಎಂಬುದು ವಿಶೇಷ]
ಈ ಧಾರ್ಮಿಕ ವಿಧಿಯ ನೇರವೆರಿಕೆಯಲ್ಲಿ ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಅ|ವ|ಸ್ಟಾ÷್ಯನಿ ತಾವ್ರೊ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡು ಎಲ್ಲರನ್ನು ವಂದಿಸಿದರು ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಇದೇ ದಿನ ಜಗತ್ತಿನೆಡೆ ಕೈಸ್ತ ರಾಜಾರ ಹಬ್ಬವನ್ನು ಆಚರಿಸುವ ದಿನದ ಮಹತ್ವವನ್ನು ತಿಳಿಸಿದರು. ಮತ್ತು ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಈ ಪ್ರಾರ್ಥನ ವಿಧಿಯಲ್ಲಿ ಹಲವು ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು ಪಾಲನ ಮಂಡಳಿ ಸದಸ್ಯರು, ಇಗರ್ಜಿಯ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡರು.