JANANUDI.COM NETWORK

ಕುಂದಾಪುರ,ನ.25: ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಪುರದ ಪವಿತ್ರ ರೋಜರಿ ಮಾತಾ ಇಗರ್ಜಿಯ 451 ವರ್ಷದ ತೆರಾಲಿ ಹಬ್ಬದ ಪ್ರಯುಕ್ತ ಮಂಗಳವಾರ ಸಂಜೆ ನಡೆಯುವ ದೇವರ ವಾಕ್ಯದ ಸಂಭ್ರಮವು ಕೊರೊನಾ ಕಾರಣದಿಂದ ರದ್ದು ಪಡಿಸಲಾಗಿತ್ತಾದರೂ, ಇಗರ್ಜಿಯನ್ನು ವಿದ್ಯುತ್ ದೀಪಗಳೊಂದಿಗೆ ಅಲಂಕ್ರತ ಗೊಳಿಸಲಾಗಿತ್ತು.
ಭಕ್ತಾಧಿಗಳಿಗೆ ತಮ್ಮ ಸಮಯದ ಅನುಕೂಲದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆಸಲ್ಲಿಸಲು ಅವಕಾಶ ನೀಡಿದ್ದರು. ಅದರಂತೆ ಭಕ್ರಾಧಿಗಳು ಮೇರಿ ಮಾತೆಯ ಗ್ರೊಟ್ಟೊದೆದುರು ಜಪಮಾಲೆ ಪಟಿಸಿದರು. ಹಾಗೆಯೇ ಭಕ್ತಾಧಿಗಳು ಜಾತಿ ಮತ ಭೇದವಿಲ್ಲದೆ, ಮೇಣದ ಬತ್ತಿಗಳನ್ನು ಉರಿಸಿ, ತಮ್ಮ ಹರಕೆಯನ್ನು ತೀರಿಸಿದರು,ಹಾಗೂ ತಮ್ಮ ಬೇಡಿಕೆಗಳನ್ನು ಸಲ್ಲಿಸಿ ಪ್ರಾರ್ಥಿಸಿದರು. ಪ್ರಾರ್ಥನೆಯಲ್ಲಿ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾ ಹಾಜರಿದ್ದರು. ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಭಕ್ತಾಧಿಗಳನ್ನು ಆಶಿರ್ವಧಿಸಿದರು.