JANANUDI.COM NETWORK
ಕುಂದಾಪುರ ಚರ್ಚ್ ಹಿಂದೆ ಗದ್ದೆಗಳಿಗೆ ಬೆಂಕಿ: ಅಗ್ನಿ ಶಾಮಕ ದಳದಿಂದ ಕಾರ್ಯಚರಣೆ: ತಪ್ಪಿದ ದುರಂತ
ಕುಂದಾಪುರ, ಎ.22: ಕುಂದಾಪುರ ಚರ್ಚಿನ ಹಿಂದೆ ಇರುವ ಖಾಸಗಿ ಜಾಗದಲ್ಲಿ ಗದ್ದೆಗಳ ಹುಲ್ಲಿಗೆ ಬೆಂಕಿ ತಾಗಿ ಸುಮಾರು ಅರ್ಧ ಎಕ್ರೆ ಜಾಗದಲ್ಲಿ ಬೆಂಕಿ ಆವರಿಸಿಕೊಂಡಿತು.
ರೈತರು ಗದ್ದೆಗಳಲ್ಲಿ ಸುಡುಮಣ್ಣಿಗೆ ಬೆಂಕಿ ಹಾಕಿದ್ದರು ಅಂದು ಹೇಳಲಾಗುತ್ತದೆ, ಗಾಳಿ ಇರುವ ಕಾರಣ ಬೆಂಕೆ ಹರಡಿ ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ರೊಬರ್ಟ್ ರೆಬೆಲ್ಲೊ ಇವರ ಮನೆ ಆವರಣದ ವರೆಗೂ ಬೆಂಕಿ ವ್ಯಾಪಿಸಿದ್ದು. ಡಾ|ರೆಬೆಲ್ಲೊ ಕೂಡಲೆ ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದರು. ಸಕಾಲದಲ್ಲಿ ಅಗ್ನಿ ಶಾಮಕ ದಳದವರು ಬಂದು ಒಂದು ಗಂಟೆಯ ಶತತ ಶ್ರಮದ ಫಲವಾಗಿ ಬೆಂಕಿ ನಂದಿಸಿ ಆಗ ಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದರು.
ಮತ್ತೊಂದು ಮೂಲದ ಪ್ರಕಾರ ಖಾಸಗಿ ಜಾಗದವರು (ಗದ್ದೆಯವರು) ಬೈಲ ಹುಲ್ಲು ಬೆಳದ ದೊಡ್ಡ ಗಾತ್ರದ ಹುಲ್ಲನ್ನು ನಾಶ ಮಾಡಲು ಬೆಂಕಿ ಕೊಟ್ಟು ದೂರ ಉಳಿಯುವುದರಿಂದ ಪ್ರತಿ ವರ್ಷದಂತೆ ಬೆಂಕಿ ಅನಾಹುತ ವಾಗುತ್ತದೆಯೆಂದು ಅರೋಪಿಸುತ್ತಾರೆ. ಎರಡು ವರ್ಷಗಳ ಹಿಂದೆ ಇದೇ ರೀತಿ ಬೆಂಕಿ ಹರಡಿ ಚರ್ಚ್ ಕಪೌಂಡ್ ದಾಟಿ ಹಲವಾರು ತೆಂಗಿನ ಮರಗಳು ಆಹುತಿಯಾಗಿದ್ದವು. ಹಾಗಾಗಿ ಸ್ಥಳಿಯರು ಈ ವರ್ಷ ಪೊಲೀಸರಿಗೆ ದೂರನ್ನು ನೀಡಲಾಗಿದೆಯೆಂದು ತಿಳಿದು ಬಂದಿದೆ.