JANANUDI.COM NETWORK
ಕುಂದಾಪುರ ಚರ್ಚ್: ಸಂಕಷ್ಟತರಿಗೆ ಆಹಾರ ಸಾಮಾಗ್ರಿ ವಿತರಣೆ
ಚರ್ಚಿನ ದಾನಿಗಳಿಂದ ಹಾಗೇ ಕಥೊಲೀಕ್ ಸಭಾ, ವಿನ್ಸೆಂಟ್ ಪಾವ್ಲ್ ಸಭೆ, ಕಥೊಲಿಕ್ ಸ್ತ್ರೀ ಸಂಘಟನೆ, ಸೆಕ್ಯುಲರ್ ಫ್ರಾನ್ಸಿಕನ್ ಒರ್ಡರ್ ಮತ್ತು ಆರ್ಥಿಕ ಸಮಿತಿಯ ಸಹಯೋಗದಿಂದ
ಕುಂದಾಪುರ, ಮೇ.2: ಇಲ್ಲಿನ ಹೋಲಿ ರೋಜರಿ ಮಾತಾ ಇಗರ್ಜಿಯ ಆಶ್ರಯದಲ್ಲಿ ಲಾಕ್ ಡೌನ್ ಸಂಕಷ್ಟಕ್ಕೆ ಒಳಗಾದ ಸರ್ವ ಧರ್ಮದ 162 ಕುಟುಂಬಗಳಿಗೆ, ರೂಪಾಯಿ 2,97,513 (ಎರಡು ಲಕ್ಷ ತೊಂಭತ್ತ ಎಳು ಸಾವಿರದ ಐನೂರ ಹದಿಮೂರು) ಮೌಲ್ಯದ ಆಹಾರ ಸಾಮಾಗ್ರಿಯನ್ನು ಸಾಂಕೇತಿಕವಾಗಿ ಚರ್ಚಿನ 13 ವಾಳೆಯ ಗುರಿಕಾರರಿಗೆ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ವಿತರಿಸಿ ‘ಈ ಸಮಯ ಬಹಳ ಕಷ್ಟಕರ, ಕಷ್ಟದಕ್ಕಿರುವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ, ಇಂತಹ ಸಹಾಯ ಇನ್ನೂ ಮುಂದುವರೆಸಿ, ಎರಡನೆ ಹಂತದಲ್ಲಿ ನೀಡಲಾಗುವುದು’ ಎಂದು ಅವರು ತಿಳಿಸಿದರು.
ಚರ್ಚಿನ ದಾನಿಗಳಿಂದ ಹಾಗೇ ಕಥೊಲೀಕ್ ಸಭಾ, ವಿನ್ಸೆಂಟ್ ಪಾವ್ಲ್ ಸಭೆ, ಕಥೊಲಿಕ್ ಸ್ತ್ರೀ ಸಂಘಟನೆ, ಸೆಕ್ಯುಲರ್ ಫ್ರಾನ್ಸಿಕನ್ ಒರ್ಡರ್ ಮತ್ತು ಆರ್ಥಿಕ ಸಮಿತಿಯ ಸಹಯೋಗದಿಂದ ಈ ಕಾರ್ಯಕ್ರಮ ಜರುಗಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕಥೊಲಿಕ್ ಸಭೆಯ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ವಿನ್ಸೆಂಟ್ ಪಾವ್ಲ್ ಸಮಿತಿಯ ಅಧ್ಯಕ್ಷ ಒಸ್ವಲ್ಡ್ ಕರ್ವಾಲ್ಲೊ, ಆರ್ಥಿಕ ಸಮಿತಿ ಸದಸ್ಯರಾದ ಸಿಲ್ವೆಸ್ಟರ್ ಡಿಆಲ್ಮೇಡ, ಜೋನ್ಸನ್ ಡಿಆಲ್ಮೇಡಾ, ಫೆಲ್ಸಿಯಾನ್ ಡಿಸೋಜಾ ಇತರರು ಉಪಸ್ಥಿತರಿದ್ದರು
ಉಪಾಧ್ಯಕ್ಷ ಲುವಿಸ್ ಫೆರ್ನಾಂಡಿಸ್ ಸ್ವಾಗತಿಸಿದರು, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಧನ್ಯವಾದಗಳನ್ನು ಅರ್ಪಿಸಿದರು.