ಕುಂದಾಪುರ ಗಾಂಜಾ ವ್ಯಾಪರಿಗಳ ಬಂದನ:1 ಕೆ.ಜಿ 105 ಗ್ರಾಮ್, 33,000 ರೂಪಾಯಿ ಮೌಲ್ಯದ ಗಾಂಜಾ ವಶ

JANANUDI.COMNETWORK

ದಿನಾಂಕ 23/08/2020 ರಂದು ಬೆಳಿಗ್ಗೆ 07:00 ಗಂಟೆ ಸುಮಾರಿಗೆ ವಕ್ವಾಡಿ ಗ್ರಾಮದ ಅಶೋಕ ನಗರ ಎಂಬಲ್ಲಿ ಕೊಟೇಶ್ವರ ಮೇಪು ಕಡೆಗೆ ಹೋಗುವ ಮಣ್ಣು ರಸ್ತೆಯ ಪೂರ್ವಬದಿಯ ಖಾಲಿ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ಒಂದು ಮೋಟಾರು ಸೈಕಲನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಬಾತ್ಮಿದಾರರೊಬ್ಬರು ನೀಡಿದ ಮಾಹಿತಿ ದೊರಕಿ ಪೊಲೀಸರು ಸಿಬ್ಬಂದಿ 08:00 ಗಂಟೆಗೆ ಠಾಣೆಯಿಂದ ಹೊರಟು 08:20 ಗಂಟೆಗೆ ಮಾಹಿತಿ ದೊರೆತ ವಕ್ವಾಡಿ ಗ್ರಾಮದ ಅಶೋಕ ನಗರ ಎಂಬಲ್ಲಿ ಕೊಟೇಶ್ವರ ಮೇಪು ಕಡೆಗೆ ಹೋಗುವ ಮಣ್ಣು ರಸ್ತೆಯ ಪೂರ್ವಬದಿಯ ಖಾಲಿ ಜಾಗದಲ್ಲಿ ಸ್ವಲ್ಪ ಹಿಂದೆ ನಿಲ್ಲಿಸಿ ಮೋಟಾರು ಸೈಕಲ್‌ ನಿಂತ ಸ್ಥಳದ ಹತ್ತಿರ ಹೋಗಿ ಪರಿಶೀಲಿಸಲಾಗಿ ಇಬ್ಬರು ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ಪೊಲೀಸರುನ್ನು ಕಂಡು

ಓಡಲು ಪ್ರಯತ್ನಿಸಿದ್ದು ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ಸುತ್ತವರಿದು ಅವರನ್ನು ಹಿಡಿದು ಪರೀಕ್ಷಿಸಿದಾಗ 1 ನೇ ಆರೋಪಿಯ ಕೈಯಲ್ಲಿರುವ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಏನಿದೆ ಎಂದು ಪ್ರಶ್ನಿಸಿದಲ್ಲಿ ತೊದಲುತ್ತಾ ಅದರಲ್ಲಿ ಮಾತ್ರೆ ಮತ್ತು ಔಷಧ ಇರುವುದಾಗಿ ತಿಳಿಸಿದ್ದು ಅದರಲ್ಲಿ ಗಾಂಜಾ ಇರುವುದು ಪತ್ತೆಯಾಗಿದ್ದು, ಇನ್ನೂ ಹಚ್ಚಿನ ತನಿಖೆ ನಡೆಸಿದಾಗ ಗಾಂಜಾವನ್ನು ನಮಗೆ ಹೊಸನಗರ ಕಡೆಯಿಂದ ಒಬ್ಬ ವ್ಯಕ್ತಿಯಿಂದ ಪಡೆದು ನಾವಿಬ್ಬರು ಈ ಗಾಂಜಾವನ್ನು ಅವುಗಳನ್ನು ವಕ್ವಾಡಿ ಗ್ರಾಮದ ಪರಿಸರದಲ್ಲಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುವರೇ ನಿಂತುಕೊಂಡಿರುವುದಾಗಿ ತಿಳಿಸಿದ್ದಾರೆ.

ವಿಚಾರಣೆಯಲ್ಲಿ ಅವರ ಹೆಸರು ವಿಳಾಸವಾಗಿ ಗಣೇಶ್ ಪ್ರಾಯ: 20 ವರ್ಷ ತಂದೆ: ಕೃಷ್ಣ ವಾಸ: ಸಘುಮಾಲೆ ನಿಲಯ,ವಿನಾಯಕ ನಗರ 5 ನೇ ಕ್ರಾಸ್, ಕುಂಭಾಶಿ ಗ್ರಾಮ ಹಾಗೂ ಮತ್ತೊಬ್ಬನ ಹೆಸರು ಗೌತಮ್ ಯಾನೆ ಬುದ್ದ ಪ್ರಾಯ: 25 ವರ್ಷ ತಂದೆ: ಮಂಜುನಾಥ ವಾಸ: ದುಗ್ಗಾನ್ ಬೆಟ್ಟು, ಬೊಬ್ಬರ್ಯ ದೇವಸ್ಥಾನ ರಸ್ತೆ, ಉಪ್ಪಿನಕುದ್ರು ಗ್ರಾಮ, ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿದ್ದು, ಆರೋಪಿಗಳ ಮೇಲೆ ಕುಂದಾಪುರ ಪೊಲೀಸರುಕೇಸು ದಾಖಲಿಸಿಕೊಂಡಿದ್ದಾರೆ,ಹಾಗೇ ಆರೋಪಿಗಳಿಂದ 1 ಕೆ.ಜಿ 105 ಗ್ರಾಮ್ ತೂಕದ ಗಾಂಜಾವನ್ನು ಸ್ವಾಧಿನಪಡಿಸಿಕೊಂಡಿದ್ದು ಸದ್ರಿ ಗಾಂಜಾದ ಅಂದಾಜು ಮೌಲ್ಯ 33,000/- ರೂಪಾಯಿ ಆಗಬಹುದು. 1 ನೇ ಆರೋಪಿಯಿಂದ ನಗದು 1290 ರೂಪಾಯಿ ಮತ್ತು ಬಿಳಿ ಬಣ್ಣದ ರೆಡ್‌ಮಿ ಮೊಬೈಲ್ ಹಾಗು 2 ನೇ ಆರೋಪಿಯಿಂದ ನಗದು 590 ರೂಪಾಯಿ ಮತ್ತು ಕೆಂಪು ಬಣ್ಣದ ಓಪೋ ಮೊಬೈಲ್ ಸ್ವಾದೀನಪಡಿಸಿಕೊಳ್ಳಲಾಯ್ತು. ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ RX 135 ಮೋಟಾರು ಸೈಕಲ್ ಸ್ವಾದೀನಪಡಿಸಿಕೊಳ್ಳಲಾಯ್ತು. ಎರಡು ಮೊಬೈಲ್‌ಗಳ ಅಂದಾಜು ಮೌಲ್ಯ 12,000 ರೂಪಾಯಿ ಹಾಗು ಮೋಟಾರು ಸೈಕಲ್‌ನ ಅಂದಾಜು ಮೌಲ್ಯ 8000/- ರೂಪಾಯಿ ಇವಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ

ಈ ದಾಳಿಯಲ್ಲಿ ಕುಂದಾಪುರ ಪೊಲೀಸ್ ಠಾಣೆ ಯ ಎಎಸ್ಐ ಗಳಾದ ಆನಂದ ಬಿ, ಮತ್ತು ಸುಧಾಕರ್ ರವರು ಹಾಗೂ ಸಿಬ್ಬಂದಿಯವರಾದ HC ಸಿಗಳಾದ ಮಂಜುನಾಥ್, ಸಂತೋಷ್ ಕುಮಾರ್, ಚಂದ್ರಶೇಖರ ಶೆಟ್ಟಿ, ಅವಿನಾಶ್, ಹರೀಶ್, ರಾಘವೇಂದ್ರ, ವಿಜಯ್,PC ಗಳಾದ ಪ್ರಸನ್ನ, ವೀರಪ್ಪ, ರವಿ, ಗೋಕುಲ, ಶಾಂತಾರಾಮ, ಸಚಿನ್ ಶೆಟ್ಟಿ ರಾಘವೇಂದ್ರ ಮೊಗೇರ, ರಾಮ ಪೂಜಾರಿ ಶಂಕರ್, ಅರುಣ್ ಕುಮಾರ್ ಹಾಗೂ ಜಿಪು ಚಾಲಕ AHC ಸಂತೋಷ್ ಶೆಟ್ಟಿ ಇವರುಗಳು ಭಾಗವಹಿಸಿದ್ದರು.

Goutham (25) uppinkudru.Talluru