ವರದಿ: ಚಂದ್ರಶೇಖರ ಶಟ್ಟಿ
ಕುಂದಾಪುರ ಕಾಂಗ್ರೆಸ್ : ಗಾಂಧಿ ಪುಣ್ಯಸ್ಮರಣೆ
ದೇಶ ವಿಭಜನೆಯನ್ನು ಗಾಂಧಿ ವಿರೋಧಿಸಿದ್ದರು – ಡಾ| ಉಮೇಶ್ ಪುತ್ರನ್
1947ರ ಅಗಸ್ಟ್ 15ರಂದು ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಎರಡೂವರೆ ತಿಂಗಳ ಮೊದಲು ಅಂದರೆ 1947ರ ಜೂನ್ 2ರಂದು ನಡೆದ ಸಭೆಯಲ್ಲಿ ಭಾರತ- ಪಾಕಿಸ್ತಾನ ವಿಭಜನೆ ಕುರಿತಾದ ಬ್ರಿಟಿಷ್ ಪಾರ್ಲಿಮೆಂಟಿನ ನಿರ್ಣಯವನ್ನು ಪ್ರಕಟಿಸಲಾಗಿತ್ತು. ಮತ್ತು ಗಾಂಧೀಜಿಯವರು ವಿಭಜನೆಗೆ ವಿರುದ್ಧವಾಗಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಆ ಸಭೆಗೆ ಆಹ್ವಾನಿಸಲಾಗಿಲ್ಲ. ಮತ್ತು ಆ ನಿರ್ಣಯದ ಕುರಿತು ಆನಂತರ ತಿಳಿದುಕೊಂಡ ಗಾಂಧೀಜಿಯವರು ಬಹುವಾಗಿ ನೊಂದುಕೊಂಡಿದ್ದರು ಎಂದು ಲೇಖಕ, ಖ್ಯಾತ ವೈದ್ಯ ಡಾ| ಉಮೇಶ್ ಪುತ್ರನ್ ಹೇಳಿದ್ದಾರೆ.
ಅವರು ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿ ಇಂದಿರಾ ಪ್ರಿಯದರ್ಶಿನಿಯಲ್ಲಿ ನಡೆದ ಮಹಾತ್ಮಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
1857ರಲ್ಲಿ ಸ್ವಾತಂತ್ರ್ಯ ಸಂಗ್ರಾಮ ಆರಂಭಗೊಂಡಿದ್ದರೂ ಕೂಡ ಮಹಾತ್ಮ ಗಾಂಧಿಯವರು ಅಹಿಂಸಾ ತತ್ವದ ಮೂಲಕ ಆರಂಭಿಸಿದ ಸ್ವಾತಂತ್ರ್ಯ ಹೋರಾಟ ಅತೀ ಬೇಗ ದೇಶಾದ್ಯಂತ ಪ್ರಸಿದ್ಧಿ ಪಡೆದು ಜನಬೆಂಬಲ ಗಳಿಸಿತು. ಆದರೆ ಆ ಹೋರಾಟದಲ್ಲಿಯೂ ಅಭಿಪ್ರಾಯ ಭೇದಗಳಿದ್ದುವು. ಅವರ ಅಹಿಂಸಾ ಮಾರ್ಗವನ್ನು ವಿರೋಧಿಸಿದ್ದ ಕೆಲವರು ಗಾಂಧಿಯವರ ವಿರುದ್ಧ ಅಪಪ್ರಚಾರ ನಡೆಸಿದರು. ಆನಂತರ ಗಾಂಧಿಯವರ ಹತೆÀ್ಯಯೂ ನಡೆಯಿತು. ಆದರೆ ಇಂದಿಗೂ ಈ ದೇಶದ ಜನತೆಗೆ ಗಾಂಧಿ ಆದರ್ಶವಾಗಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೆಎಫ್‍ಡಿಸಿ ಮಾಜಿ ಅಧ್ಯಕ್ಷ ಬಿ. ಹೆರಿಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಮಾಜಿ ಪುರಸಭಾ ಅಧ್ಯಕ್ಷ ಹಾರೂನ್ ಸಾಹೇಬ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಪುತ್ರನ್, ಕಾಂಗ್ರೆಸ್ ಐಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಶಿವರಾಮ ಪುತ್ರನ್, ಅಬು ಮಹಮ್ಮದ್, ಕೇಶವ ಭಟ್, ಮುಖಂಡರುಗಳಾದ ವಕ್ವಾಡಿ ರಮೇಶ್ ಶೆಟ್ಟಿ, ಕುಮಾರ ಕೆ., ಚಂದ್ರಕಾಂತ ನಾಯ್ಕ, ಶಿವಾನಂದ ಕೆ., ಶಿವಕುಮಾರ್, ಅಶೋಕ ಸುವರ್ಣ, ಅಬುಬಕ್ಕರ್ ಕೋಡಿ, ದಿನೇಶ್ ಬೆಟ್ಟ, ರಾಜಾ ಖಾರ್ವಿ, ಜಾಕೋಬ್ ಡಿಸೋಜಾ, ಕೋಣಿ ಬಾಬು ಪೂಜಾರಿ, ಸ್ಟ್ಯಾನಿ ಡಿಸೋಜ, ಜ್ಯೂಲಿಯೆಟ್ ಪಾೈಸ್, ಶೋಭಾ ಸಚ್ಛಿದಾನಂದ, ಆಶಾ ಕರ್ವೆಲ್ಲೋ, ಸೀಮಾ ಪೂಜಾರಿ, ಜ್ಯೋತಿ ಮೊಗವೀರ, ಹೇಮಾ ಪೂಜಾರಿ, ಜ್ಯೋತಿ ಡಿ. ನಾಯ್ಕ್, ಸುವರ್ಣ ಡಿ’ಅಲ್ಮೇಡ, ಮುಂತಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಿನೋದ ಕ್ರಾಸ್ಟೋ ಸ್ವಾಗÀತಿಸಿ, ಮತ್ತೋರ್ವ ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್ ವಂದಿಸಿದರು.