ಕುಂದಾಪುರ ಕಥೊಲಿಕ್ ಸಭಾ, ರೊಟಾರ್ಯಾಕ್ಟ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಆಚರಣೆ

JANANUDI.COM NET WORK

ಕುಂದಾಪುರ ಕಥೊಲಿಕ್ ಸಭಾ, ರೊಟಾರ್ಯಾಕ್ಟ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಆಚರಣೆ


ಕುಂದಾಪುರ, ಒ.2: ಕುಂದಾಪುರ ಕಥೊಲಿಕ್ ಸಭಾ ಘಟಕ ಮತ್ತು ರೊಟಾರ್ಯಾಕ್ಟ್ ಕ್ಲಬ್ ದಕ್ಷಿಣ ಇವರು ಸಂಯುಕ್ತವಾಗಿ ಒಕ್ಟೋಬರ್ 2 ರಂದು ಸಂತ ಮೇರಿಸ್ ಪ್ರೌಢ ಶಾಲಾ ಆವರಣದಲ್ಲಿ ಗಾಂಧಿಜಿಯ 150 ನೇ ಜಯಂತಿಯ ಆಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅಥಿತಿ ಪತ್ರಕರ್ತ ಸಾಹಿತಿ ಬರ್ನಾಡ್ ಡಿಕೋಸ್ತಾ ರಾಷ್ಠ್ರ ಪಿತ ಮಹಾತ್ಮ ಗಾಂಧಿಜಿಯ ಭಾವ ಚಿತ್ರಕ್ಕೆ ಮಾಲರ್ಪಣೆ ಮಾಡಿ ‘ಮಹಾತ್ಮ ಗಾಂಧಿಜಿ ಪ್ರಪಂಪಚದ ಶ್ರೇಷ್ಠರಲ್ಲಿ ಒಬ್ಬರು. ಅವರು ನಮಗೆ ಶಾಂತಿ ಮಾರ್ಗದಿಂದಲೇ ಸ್ವಾತಂತ್ರವನ್ನು ಗಳಿಸಿಕೊಟ್ಟವರು, ನಾವು ಅವರ 150 ನೇ ಜಯಂತಿಯನ್ನು ಆಚರಿಸುತಿದ್ದೆವೆ, ಅಂದರೆ ಸುಮಾರು 100 ವರ್ಷಗಳ ಹಿಂದೆ ಸ್ವಚ್ಚತೆಯ ಬಗ್ಗೆ ಅರಿವನ್ನು ಮೂಡಿಸಿದವರು, ತಮ್ಮ ಕಕ್ಕಸನ್ನು ಅವರೆ ಸ್ವಚ್ಚ ಮಾಡಿ ಸ್ವಚ್ಚತೆಯ ಪ್ರಾಮುಖ್ಯತೆಯನ್ನು ತಿಳಿಸಿದವರು, ಆದರೆ 100 ವರ್ಷ ಕಳೆದರೂ ನಾವು ಸ್ವಚ್ಚತೆ ಬಗ್ಗೆ ಹಿಂದೆ ಇದ್ದೆವೆ, ನಾವು ಇವತ್ತು ಪ್ಲಾಸ್ಟಿಕ್ ಯುಗದಲ್ಲಿದ್ದೆವೆ. ಪ್ಲಾಸ್ಟಿಕ್‍ನಿಂದ ಜಾನುವಾರುಗಳಿಗೆ ಕೆಡುಕುಲ್ಲದೆ ಮಾನವನೂ ಅಪಾಯದಲ್ಲಿದ್ದಾನೆ, ಇವತ್ತು ಗಾಂಧಿಜಿ ಜಯಂತಿ ದಿವಸ ಪ್ಲಾಸ್ಟಿಕ್‍ನ್ನು ಹೆಚ್ಚು ಬಳಸದೆ, ಹ್ರದಯ ಪೂರ್ವಕವಾಗಿ ನಾವು ಪರಿಸರವನ್ನು ನಿರ್ಮಲವಾಗಿರಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ಮಾಡಿ ಗಾಂಧಿಜಿಗೆ ಗೌರವಿಸೋಣ’ ಎಂದು ನುಡಿದರು.
ರೊಟಾರ್ಯಾಕ್ಟ್ ಕ್ಲಬಿನ ಅಧ್ಯಕ್ಷ ಆಲ್ಡ್ರಿನ್ ಡಿಸೋಜಾ ಮಾತಾಡಿ ‘ಗಾಂಧಿಜಿ ತಮ್ಮ ಜೀವನದಲ್ಲಿ ಸ್ವಚ್ಚತೆಗೆ ಬಹಳವಾದ ಪ್ರಾಮುಖ್ಯತೆಯನ್ನು ನೀಡಿದ್ದರು. ಮೊದಲು ನಮ್ಮಲ್ಲಿ ಕೆಳ ಜಾತಿಯವರು ಮಲ ಹೊರುವ ಕೆಲಸವನ್ನು ಮಾಡುತಿದ್ದರು, ಗಾಂಧಿಜಿ ಅದನ್ನು ವಿರೋಧಿಸಿ ಸುಧಾರಣೆಯನ್ನು ಮಾಡಿದರು. ಇವತ್ತು ಪ್ರಧಾನ ಮಂತ್ರಿ ಸ್ವಚತೆಗೆ ಆದ್ಯತೆ ನೀಡಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸ್ವಚತಾ ಅಭಿಯಾನ ಮಾಡ ಬೇಕೆಂದು. ಆಗ್ರಹಿಸಿದ್ದಾರೆ, ಜೀವನದಲ್ಲಿ ಪ್ಲಾಸ್ಟಿಕ್ ವಿರೋಧಿಸಿ ಸ್ವಚ್ಚತೆಗೆ ಪ್ರಾಮುಖ್ಯತೆಯನ್ನು ಕೊಡೋಣ’ ಎಂದರು.
ಕಥೊಲಿಕ ಸಭಾ ಅಧ್ಯಕ್ಷ ವಾಲ್ಟರ್ ಡಿಸೋಜಾ ಶುಭ ಕೊರೀದರು. ಉಪಾಧ್ಯಕ್ಷೆ ಜೂಲಿಯೆಟ್ ಪಾಯ್ಸ್, ಕೋಶಾಧಿಕಾರಿ ಪ್ರೇಮಾ ಡಿಕುನ್ಹಾ, ಕಥೊಲಿಕ್ ಸಭಾದ ಇತರ ಪದಾಧಿಕಾರಿಗಳು ರೊಟಾರ್ಯಾಕ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ರೊಟಾರ್ಯಾಕ್ಟನ ಕಾರ್ಯದರ್ಶಿ ವಿನಾಯಕ ಗಾಣಿಗ ವಂದಿಸಿದರು. ಕಥೊಲಿಕ್ ಸಭಾದ ವಿನೋದ್ ಕ್ರಾಸ್ಟೊ ಕಾರ್ಯಕ್ರಮವನ್ನು ನಡೆಸಿಕೊಟ್ಟರು