ಕುಂದಾಪುರ ಕಥೊಲಿಕ್ ಸಭಾ ದಿನಾಚರಣೆ- ಖಾದ್ಯ ಹಬ್ಬ

ಕುಂದಾಪುರ ಕಥೊಲಿಕ್ ಸಭಾ ದಿನಾಚರಣೆ- ಖಾದ್ಯ ಹಬ್ಬ


ಕುಂದಾಪುರ, ಎ. 28: ಕುಂದಾಪುರ ಕಥೊಲಿಕ್ ಸಭಾ ಘಟಕವು ತನ್ನ ವರ್ಷ ದಿನಾಚರಣೆಯನ್ನು ಭಾನುವಾರ 27 ರಂದು ಆಚರಿಸಿತು. ಸಂಜೆ ಎಳು ಗಂಟೆಗೆ ಚರ್ಚಿನ ಪ್ರಧಾನ ಧರ್ಮಗುರು ಅತಿ ವಂ|ಫಾ|ಸ್ಟ್ಯಾನಿ ತಾವ್ರೊ ಇವರ ನೇತ್ರತ್ವದಲ್ಲಿ, ಫಾ|ರೋಯ್ ಲೋಬೊ ಮತ್ತು ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಇವರು ಉಪಕಾರ ಸ್ಮರಣೆಯ ಪವಿತ್ರ ಬಲಿದಾನವನ್ನು ಅರ್ಪಿಸಿದರು.
ನಂತರ ಸಂಘಟನೇಯ ಸದಸ್ಯರೆ ತಯಾರಿಸಿದ ಕೋಳಿ ಖಾದ್ಯ, ಬಿರಿಯಾನಿ, ಪೆÇರ್ಕ್ ಖಾದ್ಯ, ಇಡ್ಲಿ ಮುಂತಾದ ಖಾದ್ಯಗಳನ್ನು ಚರ್ಚಿನ ಜನತೆಗೆ ಅಲ್ಪ ಮೌಲ್ಯದಲ್ಲಿ ಮಾರಾಟ ಮಾಡಲಾಯಿತು. ಇದು ಹಣ ಗಳಿಸುವ ಚಿಂತನೆಯಿಂದ ಮಾಡಿರದೆ ಸಂತೋಷದಿಂದ ಒಟ್ಟು ಸೇರಿ ದಿನಾಚರಣೆಯ ಆಚರಣೆಗಾಗಿ ಮಾಡಿದಾಗಿದ್ದು, ಬೆಳಿಗ್ಗೆ ವಂ|ಫಾ|ಸ್ಟ್ಯಾನಿ ತಾವ್ರೊ ಖಾದ್ಯಗಳನ್ನು ತಯಾರಿಯ ಕಾರ್ಯಕ್ರಮಕ್ಕೆ ಆಶಿರ್ವಾದ ನೀಡಿ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಅಧ್ಯಕ್ಷ ವಾಲ್ಟರ್ ಡಿಸೋಜಾ, ನಿಕಟ ಪೂರ್ವ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ನಿಯೋಜಿತ ಅಧ್ಯಕ್ಷರಾದ ಬರ್ನಾಡ್ ಡಿಕೋಸ್ತಾ, ಉಪಾಧ್ಯಕ್ಷೆ ಜೂಲಿಯೆಟ್ ಪಾಯ್ಸ್, ಸಹ ಕಾರ್ಯದರ್ಶಿ ಲೋನಾ ಲುವಿಸ್, ಖಚಾಂಚಿ ಪ್ರೇಮಾ ಡಿಕುನ್ಹಾ, ಆಮ್ಚೊ ಸಂದೇಶ್ ಪ್ರತಿನಿಧಿ ವಿನ್ಸೆಂಟ್ ಡಿಸೋಜಾ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ|ಸೋನಿ ಡಿಕೋಸ್ತಾ, ವಿನಯಾ ಡಿಕೋಸ್ತಾ, ಜಾಸಿಂತಾ ಡಿಸೋಜಾ, ಸುನೀಲ್ ಡಿಸೋಜಾ, ವಿಲ್ಸನ್ ಒಲಿವೇರಾ, ಫ್ರಾನ್ಸಿಸ್ ಬ್ರಗಾಂಜಾ, ಸಂಗೀತಾ ಪಾಯ್ಸ್, ಶಾಲೆಟ್ ಡಿಸೋಜಾ, ಜೆಸನ್ ಪಾಯ್ಸ್ ವೀನೊದ್ ಬಾರೆಟ್ಟೊ, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದು ಸಹಕಾರ ನೀಡಿದರು. ಜೋನ್ಸನ್ ಡಿಆಲ್ಮೇಡಾ ಕಾರ್ಯಕ್ರಮದ ಸಂಚಾಲಕರಾಗಿದ್ದರು.