ಕುಂದಾಪುರ ಐ.ಸಿವೈ.ಎಮ್ ವಲಯ ಮಟ್ಟದ ವಾಲಿಬಾಲ್, ತ್ರೊಬಾಲ್ ಪಂದ್ಯಾಟ: ಪಡುಕೋಣೆ, ಗಂಗೊಳ್ಳಿಗೆ ಪ್ರಶಸ್ತಿ

JANANUDI.COM NETWORK

 

ಕುಂದಾಪುರ ಐ.ಸಿವೈ.ಎಮ್ ವಲಯ ಮಟ್ಟದ ವಾಲಿಬಾಲ್, ತ್ರೊಬಾಲ್ ಪಂದ್ಯಾಟ: ಪಡುಕೋಣೆ, ಗಂಗೊಳ್ಳಿಗೆ ಪ್ರಶಸ್ತಿ

ಕುಂದಾಪುರ, ಸೆ.30: ಕುಂದಾಪುರ ಭಾರತೀಯ ಕಥೊಲಿಕ್ ಯುವ ಸಂಘಟನೇಯಿಂದ ವಲಯ ಮಟ್ಟದಲ್ಲಿ ಪುರುಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ತ್ರೊಬಾಲ್ ಪಂದ್ಯಾವಳಿಯನ್ನು ಆಯೋಜಿಸಿತ್ತು. ಸೆ.19 ರಂದು ಸಂತ ಮೇರಿಸ್ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ಕುಂದಾಪುರ ಚರ್ಚಿನ ಪ್ರಧಾನ ಮತ್ತು ವಲಂiÀi ಪ್ರಧಾನರಾದ ಅ|ವಂ|ಫಾ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿ ಶುಭ ಕೋರಿದರು.
ಪುರುಷರ ವಾಲಿಬಾಲ್ ಪಂದ್ಯದಲ್ಲಿ ಪಡುಕೋಣೆ ತಂಡ ಪ್ರಥಮ, ಬಸ್ರೂರು ತಂಡಗಳು ದ್ವೀತಿಯ ಸ್ಥಾನ ಪಡೆದವು. ಮಹಿಳೆಯರ ತ್ರೊಬಾಲ್ ಪಂದ್ಯಟಾದಲ್ಲಿ ಗಂಗೊಳ್ಳಿ ಪ್ರಥಮ, ತಲ್ಲೂರು ದ್ವೀತಿಯ ಸ್ಥಾನ ಪಡೆದವು. ವಾಲಿವಾಲ್ ಪಂದ್ಯದಲ್ಲಿ ಉತ್ತಮ ಪಟುವಾಗಿ ಪಡುಕೋಣೆಯ ಗ್ಲೆವನ್ ಡಿಸೋಜಾ, ತ್ರೊಬಾಲ್ ಪಂದ್ಯಾಟದಲ್ಲಿ ಪ್ರೀತಿ ಉತ್ತಮ ಪಟು ಪ್ರಶಸ್ತಿ ಪಡೆದರು. ಈ ಸಂದರ್ಭದಲ್ಲಿ ಸಂತ ಮೇರಿಸ್ ಕಾಲೇಜಿನ ಪ್ರಾಂಶುಪಾಲ ವಂ|ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್, ಪಾ.ಮಂ. ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕುಂದಾಪುರ ಐ.ಸಿವೈ.ಎಮ್ ಸಂಚಾಲಕಿ ರೇಶ್ಮಾ ಫೆರ್ನಾಂಡಿಸ್, ಅಧ್ಯಕ್ಷ ಆ್ಯಲನ್ ತಾವ್ರೊ, ಕಾರ್ಯದರ್ಶಿ ನಿತಿನ್ ಬಾರೆಟ್ಟೊ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶೈನಾ ಡಿಸೋಜಾ ಮತ್ತು ಸ್ಯಾಮುವೇಲ್ ಲುವಿಸ್ ನಡೆಸಿಕೊಟ್ಟರು. ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ತೀರ್ಪುದಾರರಾಗಿ ಕರ್ತವ್ಯ ನಿರ್ವಹಿಸಿದರು