ಕುಂದಾಪುರ ಉಪ ವಿಭಾಗದಲ್ಲಿ 80 ಸ್ಥಳಗಳಲ್ಲಿ ಸೀಲ್ ಡೌನ್ : ಗಂಗೊಳ್ಳಿ ಬೈಂದೂರಿನಲ್ಲಿ  ಅತೀ ಹೆಚ್ಚು ಪ್ರಕರಣ

 

JANANUDI.COM NETWORK

 

 

ಕುಂದಾಪುರ ಉಪ ವಿಭಾಗದಲ್ಲಿ 80 ಸ್ಥಳಗಳಲ್ಲಿ ಸೀಲ್ ಡೌನ್ : ಗಂಗೊಳ್ಳಿ ಬೈಂದೂರಿನಲ್ಲಿ  ಅತೀ ಹೆಚ್ಚು ಪ್ರಕರಣ

 

 

 

 

ಕುಂದಾಪುರ, ಜೂ.೫: ಕೊವೀಡ್ 19 ಸೊಂಕು ತಗುಲಿದ ಹಿನ್ನೆಲೆಯಲ್ಲಿ ನಿನ್ನೆ ಕುಂದಾಪುರ ಉಪ ವಿಭಾಗದಲ್ಲಿ ಒಟ್ಟು 80 ಕಡೆ ಪೊಲೀಸರು ಸೀಲ್ ಡೌನ್ ಮಾಡಿದರು.

  ಎ.ಎಸ್.ಪಿ ಹರಿರಾಮ್ ಶಂಕರ್ ತಿಳಿಸಿದಂತೆ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ 32  ಬೈಂದೂರು ಠಾಣಾ ವ್ಯಾಪ್ತಿಯಲ್ಲಿ 31 ಕುಂದಾಪುರ 7, ಕುಂದಾಪುರ ಗ್ರಾಮಾಂತರ 7, ಕೊಲ್ಲೂರು 2, ಅಮಾಸೆಬೈಲ್ 1 ಹೀಗೆ ಸೀಲ್ ಡೌನ್ ಮಾಡಲಾಗಿದೆ.

    ಕಂಟೈನ್ಮೆಂಟ್ ಆದ ಪ್ರದೇಶಗಳಲ್ಲಿ ಕೇದುರು, ತೆಕ್ಕೆಟ್ಟೆ, ಬೀಜಾಡಿ, ಬಸ್ರೂರು, ಕೋಣಿ,ಗುಲ್ವಾಡಿ, ಹಳ್ನಾಡ್, ಕರ್ಕುಂಜೆ, ಕೋಡಿ, ವಡೇರ್ ಹೊಬ್ಳಿ ಕುಂದಾಪುರ, ತಲ್ಲ್ರು, ಹೆಮ್ಮಾಡಿ, ಹಕ್ಲಾಡಿ ಮರವಂತೆ, ಹಡುವು, ನಾಡ, ಗಂಗೊಳ್ಳಿ, ನೆಂಪು, ಕಂಬದಕೋಣೆ, ಗುಜ್ಜಾಡಿ,ಕೊಲ್ಲೂರು,ಜಡ್ಕಲ್, ಗೋಳಿಹೊಳೆ, ಯಡ್ತರೆ, ಬೈಂದೂರು ಶಿರೂರು ಪ್ರದೇಶಗಳು ಸೇರಿವೆ.

   ಪಾಸಿಟೀವ್ ಬಂದ ವ್ಯಕ್ತಿಯ ಮನೆಯ ಸುತ್ತ ಮುತ್ತ ೨೦೦ ಮಿಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತದೆ.