ಕುಂದಾಪುರದ ಆರ್.‌ ಎನ್. ಶೆಟ್ಟಿ ಪದವಿ‌ ಪೂರ್ವ ಕಾಲೇಜಿನಲ್ಲಿ ಉಚಿತ ಮಧುಮೇಹ ಪರೀಕ್ಷಾ ಶಿಬಿರ

JANANUDI.COM NETWORK

ಲಯನ್ಸ್ ಕ್ಲಬ್, ಕುಂದಾಪುರ, ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ವಿನಾಯಕ ಕ್ಲಿನಿಕ್, ಕುಂದಾಪುರ ಇವರ ಸಹಯೋಗದಲ್ಲಿ ಉಚಿತ ಮಧುಮೇಹ ಪರೀಕ್ಷಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಲಯನ್ಸ್ ಕ್ಲಬ್, ಕುಂದಾಪುರ ಇದರ ಅಧ್ಯಕ್ಷರಾದ ಲಯನ್  ಶ್ರೀ ಚಂದ್ರಶೇಖರ ಕಲ್ಪತರು, ಘಟಕದ ಕಾರ್ಯದರ್ಶಿಯವರಾದ ಪ್ರೊ. ರಾಜೇಂದ್ರ, ಲಯನ್ಸ್ ಕ್ಲಬ್ ನ ಡಿಸ್ಟ್ರಿಕ್ಟ್ ಕ್ಯಾಬಿನೇಟ್ ಮೆಂಬರ್ ಲಯನ್ ರಾಜೀವ ಕೋಟ್ಯಾನ್,  ರೀಜನಲ್ ಸೆಕ್ರೆಟರಿ ಲಯನ್  ಶ್ರೀ ವೇಣುಗೋಪಾಲ್ ಶೆಟ್ಟಿ, ಉದ್ಯಮಿ ಶ್ರೀ ರಾಧಾಕೃಷ್ಣ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ್ ಶೆಟ್ಟಿ ಮತ್ತು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ವಿನಾಯಕ ಕ್ಲಿನಿಕಲ್ ಲ್ಯಾಬ್ ನ ಸಿಬ್ಬಂದಿ ಶ್ರೀಮತಿ ಬೇಬಿ ಮಧುಮೇಹ  ಪರೀಕ್ಷೆಯನ್ನು ನಡೆಸಿದರು.