ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

JANANUDI.COM NETWORK

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

  “ಗಾಂಧೀಜಿಯ ತತ್ವಗಳನ್ನು ಪಾಲಿಸುವುದೆಂದರೆ ನಮ್ಮಲ್ಲಿರುವ  ಮನಸಾಕ್ಷಿಯ ಪಿಸುಮಾತನ್ನು ಆಲಿಸಿದಂತೆ…ಗಾಂಧೀಜಿಯವರ  ಧ್ಯೇಯ ಶತ್ರುವನ್ನು ನಾಶ ಮಾಡುವುದಲ್ಲ, ಬದಲಾಗಿ ಶತ್ರುತ್ವವನ್ನು ಕೊನೆಗಾಣಿಸುವುದಾಗಿತ್ತು. ಅಹಿಂಸೆಯಿಂದಾಗುವ ಪರಿಣಾಮವು ಹಿಂಸೆಯಿಂದಾಗುವ ಸೀಮಿತ ಪರಿಣಾಮಕ್ಕಿಂತ ವ್ಯಾಪಕ ಮತ್ತು ಸರ್ವಸಮ್ಮತವಾದುದು” ಎಂದು ಸಂಪನ್ಮೂಲ ವ್ಯಕ್ತಿ, ಉಡುಪಿಯ ಸರಕಾರಿ ಮಹಿಳಾ ಪ್ರಥಮ‌ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ. ರಾಮದಾಸ ಪ್ರಭು ಇವರು ಕುಂದಾಪುರದ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯ ಅಂಗವಾಗಿ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಕರೆ ನೀಡಿದರು. ಸಮಾರಂಭದ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ್ ಕುಮಾರ್ ಶೆಟ್ಟಿಯವರು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಸರಳತೆ ಮತ್ತು ಧೃಢತೆಯ‌ ಮಹತ್ವವನ್ನು ತಿಳಿಸಿದರು. ಕನ್ನಡ ವಿಭಾಗದ  ಮುಖ್ಯಸ್ಥರಾದ ಶ್ರೀ ಡಿ.ಬಿ ಕೃಷ್ಣಮೂರ್ತಿ ಇವರು ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಕ್ರತ ವಿಭಾಗ ಮುಖ್ಯಸ್ಥರಾದ ಶ್ರಿ ರವಿ ಉಪಾಧ್ಯ ಇವರು ಧನ್ಯವಾದ ಸಲ್ಲಿಸಿದರು. ಹಿಂದಿ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.