ಕುಂದಾಪುರದಲ್ಲಿ ಲೂರ್ದ ಮಾತೆಯ ಆರಾಧನೆ: ಮಾತೆಯ ಭಕ್ತಿ ಹೆಚ್ಚಲಿ, ಮಾತೆ ನಮಗೆಲ್ಲಾ ಉತ್ತಮ ಆರೋಗ್ಯ ಲಭಿಸಲಿ :ಫಾ|ಸ್ಟ್ಯಾನಿ ತಾವ್ರೊ

ಕುಂದಾಪುರದಲ್ಲಿ ಲೂರ್ದ ಮಾತೆಯ ಆರಾಧನೆ: ಮಾತೆಯ ಭಕ್ತಿ ಹೆಚ್ಚಲಿ, ಮಾತೆ ನಮಗೆಲ್ಲಾ ಉತ್ತಮ ಆರೋಗ್ಯ ಲಭಿಸಲಿ: ಫಾ|ಸ್ಟ್ಯಾನಿ ತಾವ್ರೊ

ಕುಂದಾಪುರ, ಫೆ.12: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಭಕ್ತಿಕರು, ಚರ್ಚ್ ಮೈದಾನದಲ್ಲಿದ್ದ ಲೂರ್ದ ಮಾತೆಯ ಗ್ರೊಟ್ರೊ ಎದುರು ಸೇರಿ ಲೂರ್ದ ಮಾತೆಯ ಆರಾಧನೆ ನೆಡೆಸಿತು. ಸಂಜೆ ಆರಕ್ಕೆ ಜಪಮಾಲೆ ಪ್ರಾರ್ಥನ ವಿಧಿ ನೆಡೆಯಿತು. ಲೂರ್ದ ಮಾತೆಯ ಆರಾಧನೆಗೆ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಚಾಲನೆಯನ್ನು ನೀಡಿ ‘ಲೂರ್ದ ಮಾತೆ ಬರ್ನಡೆಟ್ ಮೇರಿ ಎಂಬ ಬಾಲೆಗೆ ಲೂರ್ದ ನಗರದಲ್ಲಿ 18 ಭಾರಿ ಪ್ರತ್ಯಕ್ಷಗೊಂಡು ಅವಳಲ್ಲಿ ಸಂಬಾಷಣೆ ನೆಡೆಸಿದ್ದು ಇತಿಹಾಸ. ಲೂರ್ದ ಮಾತೆ ಆರೋಗ್ಯ ಮಾತೆಯೆಂದು ಪ್ರಸಿದ್ದಿ ಪಡೆದಿದ್ದಾಳೆ, ಹಣವಂತರು ದೂರದ ಲೂರ್ದ ನಗರಕ್ಕೆ ಹೋಗಿ ದರ್ಶನ ಪಡೆದು ಪವಿತ್ರ ಪುಸ್ಕರಿಣಿಯಲ್ಲಿ ಇಳಿದು ಆರೋಗ್ಯವನ್ನು ಗುಣ ಪಡಿಸಿ ಕೊಳ್ಳುತ್ತಾರೆ, ಆದರೆ ಬಡವರಿಗೆ ಇದು ಸಾದ್ಯವಾಗುತ್ತಿಲ್ಲಾ, ಆದರೆ ಲೂರ್ದ ಮಾತೆ ದಯಾಳು, ಕ್ರಪೆಯುಳ್ಳವಳಾಗಿದ್ದಾರೆ, ಇಲ್ಲೆ ಭಕ್ತಿಯಲ್ಲಿ ಪ್ರಾರ್ಥನೆ, ಆರಾಧನೆ ಮಾಡಿ ನಾವು ಉತ್ತಮ ಆರೋಗ್ಯ ಪಡೆದುಕೊಳ್ಳಣ’ ಎಂದು ನುಡಿದರು.
ಜಪಮಾಲೆ ಪ್ರಾಥನೆ ಮುಗಿದ ಬಳಿಕ ಲೂರ್ದ ಮಾತೆಯ ಮೂರ್ತಿಯ ಜೊತೆ ಉರಿಯುವ ಮೇಣದ ಬತ್ತಿಗಳೊಂದಿಗೆ ಭಕ್ತಿ ಗಾಯನದ ಜೊತೆ ಭಕ್ತರ ಮೆರವಣಿಗೆ ನೆಡೆಯಿತು. ನಂತರ ಸಹಾಯಕ ಧರಮಗುರು ವಂ|ರೋಯ್ ಲೋಬೊ ಪರಮ ಪ್ರಸಾದದ ಪ್ರಾರ್ಥನ ವಿಧಿಯನ್ನು ನೆಡೆಸಿಕೊಟ್ಟು ಆಶಿರ್ವಚನವನ್ನು ನೀಡಿದರು. ಬಳಿಕ ಧರ್ಮಗುರುಳಾದ ಅ|ವಂ|ಸ್ಟ್ಯಾನಿ ತಾವ್ರೊ, ವಂ|ರೋಯ್ ಲೋಬೊ ಮತ್ತು ಪ್ರಾಂಶುಪಾಲ ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಭಕ್ತರ ತಲೆಯ ಮೇಲೆ ಕೈಯಿಟ್ಟು ಉತ್ತಮ ಆರೋಗ್ಯಕ್ಕಾಗಿ ವೀಶೆಷ ಪ್ರಾರ್ಥನೆ ಮಾಡಿದರು. ಈ ಪ್ರಾರ್ಥನ ವಿಧಿಯಲ್ಲಿ ಪಾಲನ ಮಂಡಳಿಯವರು, ಧರ್ಮ ಭಗಿನಿಯರು ಮತ್ತು ಹಲವಾರು ಭಕ್ತಾಧಿüಗಳು ಪಾಲ್ಗೊಂಡರು. ಜಪ ಮಾಲಾ ಪ್ರಾರ್ಥನ ವಿಧಿಯನ್ನು ಲೂರ್ದ ವಾಳೆಯವರು ನೆಡೆಸಿಕೊಟ್ಟರು. ಲೂರ್ದ ವಾಳೆಯ ಗುರಿಕಾರ ವಾಲ್ಟರ್ ಡಿಸೋಜಾ ಧನ್ಯವಾದಗಳನ್ನು ಅರ್ಪಿಸಿದರು.