ಕುಂದಾಪುರದಲ್ಲಿ ಯುವ ಮಿಲನ: ಯವಜನರು ಅದ್ಯಾತ್ಮಿಕ ಪ್ರವತ್ತಿ ಬೆಳೆಸಿಕೊಳ್ಳಬೇಕು : ಫಾ|ಕಿರಣ್ ನಜ್ರೆತ್
ಯುವಜನರು ಪವಿತ್ರ ಸಭೆಯ ಬಲಿಷ್ಟ ಕಂಬಗಳು, ಪವಿತ್ರ ಸಭೆ ಯುವಜನರನ್ನು ಪ್ರೀತಿಸುತ್ತದೆ, ಯುವಜನರಾದ ನೀವು ಪವಿತ ಸಭೆಗೆ, ಅಧ್ಯಾತ್ಮಿಕತೆಯಲ್ಲಿ ಆಸಕ್ತಿ ತೋರಿಸಿದರೆ, ನಿಮ್ಮ ಧರ್ಮ ಕೇಂದ್ರಗಳು ವಲಿಷ್ಟವಾಗುತ್ತವೆ, ಕೆಟ್ಟ ರೀತಿಯ ಮಾಧ್ಯಮ, ಚಟ ಆತ್ಮಕ್ಕೆ ಕೆಟ್ಟ ಆಹಾರಗಳು, ಒಳ್ಳೆಯ ಚಿಂತನೆ, ಒಳ್ಳೆಯ ಕಾರ್ಯಗಳು ಆತ್ಮಕ್ಕೆ ಒಳ್ಳೆಯ ಆಹಾರಗಳು’ ಎಂದು ಶಿರ್ವಾ ವಲಯ ನಿರ್ದೇಶಾಕರಾದ ಧರ್ಮಗುರು ವಂ|ಕಿರಣ್ ನಜ್ರೆತ್ ಯುವಜನರಿಗೆ ಸಂದೇಶ ನೀಡಿದರು. ಅವರು ಕುಂದಾಪುರ ರೋಜರಿ ಚರ್ಚಿನ ಐ.ಸಿ.ವೈ.ಎಮ್. ಮತ್ತು ವೈ..ಸಿ .ಎಸ್. ಸಂಘಟನೆಗಳಿಂದ ಯುವ ಮಿಲನ ಕಾರ್ಯಕ್ರಮದಲ್ಲಿ ಅವರು ಪವಿತ್ರ ಬಲಿದಾನವನ್ನು ಅರ್ಪಿಸಿ ‘ಹೆತ್ತವರು ತಮ್ಮ ಮಕ್ಕಳಿಗಾಗಿ ಸ್ವಲ್ಪ ಸಮಯ ಕೋಡಬೇಕು, ಉತ್ತಮವಾದ ಕೊಡೋಣ, ಮಕ್ಕಳ ಚಟುವಟ್ಕೆ ಬಗ್ಗೆ ನಿಗಾ ಇಡೋಣ, ದೇವರ ಬಗ್ಗೆ ನಂಬಿಕೆಯನ್ನು ಅವರಲ್ಲಿ ಹುಟ್ಟಿಸೋಣ, ಪ್ರಾರ್ಥನೆಯ ರುಚಿ ತೊರಿಸೋಣ, ಪವಿತ್ರ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಸಿಸೋಣ’ ಎಂದು ಯುವಜನರ ಹೆತ್ತವರಿಗೆ ಅವರು ತಿಳಿಸಿದರು.ನಂತರ ನೆಡೆದ ಸಭಾ ಕಾರ್ಯಕ್ರದಲ್ಲಿ ಅವರು ಪ್ರಾತ್ಯಕಿಕ್ಷೆಗಳ ಮೂಲಕ ತಿಳುವಳಿಕೆ, ಗುಂಪು ತರ್ಕ, ಯುವಜನರು ನಮ್ಮ ಸಮಾಜದ ಮುಂದಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ದವಾಗಬೇಕೆಂದು ತಿಳಿಸಿದರು.
ಚರ್ಚಿನ ಪ್ರಧಾನ ಗುರುಗಳಾದ ಅ|ವ|ಸ್ಟ್ಯಾನಿ ತಾವ್ರೊ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯುವಜನರ ಜವಾಬ್ದಾರಿಯನ್ನು ತಿಳಿಸಿದರು, ಪಾಲನ ಮಂಡಳಿ ಉಪಾಧ್ಯಕ್ಷರಾದ ಜೇಕಬ್ ಡಿಸೋಜಾ ಶುಭ ಕೊರೀದರು, ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಚರ್ಚಿನ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ, ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಸಂತ ಜೊಸೇಫ್ ಕಾನ್ವೆಂಟಿನ ಮುಖ್ಯಸ್ತೆ ಸಿಸ್ಟರ್ ವಾಯ್ಲೆಟ್ ತಾವ್ರೊ, ಐ.ಸಿ.ವೈ.ಎಮ್. ಸಚೇತಕಿ ರೇಶ್ಮಾ ಫೆರ್ನಾಂಡಿಸ್, ಚರ್ಚ್ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವೈ..ಸಿ.ಎಸ್. ಅಧ್ಯಕ್ಷೆ ಡಿಯೋರಾ ಕ್ರಾಸ್ತಾ, ಉಪಸ್ಥಿತರಿದ್ದರು. ಐ.ಸಿ.ವೈ.ಎಮ್. ಅಧ್ಯಕ್ಷ ಆ್ಯಲನ್ ತಾವ್ರೊ ಸ್ವಾಗತಿಸಿದರು, ಕಾರ್ಯದರ್ಶಿ ನಿತಿನ್ ಬಾರೆಟ್ಟೊ ಧನ್ಯವಾದಗಳನ್ನು ಅರ್ಪಿಸಿದರು, ಕಾರ್ಯಕ್ರಮವನ್ನು ಸಾಮ್ಯುವೇಲ್ ಲುವಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.