Photo’s: St.Antony studio
ಕುಂದಾಪುರದಲ್ಲಿ ಮಕ್ಕಳಿಗೆ ಪರಮ ಪ್ರಸಾದ ದಿವ್ಯ ಸಂಸ್ಕಾರದ ದೀಕ್ಷೆ
ಕುಂದಾಪುರ, ಮೆ.6: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಒಂದು ತಿಂಗಳ ಕಾಲ ಕೈಸ್ತ ಮಕ್ಕಳಿಗೆ ಶಾಸ್ತ್ರ, ಸಂಸ್ಕಾರಗಳ ತಿಳುವಳಿಕೆ, ಭೋದನೆ, ನಿತ್ಯ ಪ್ರಾರ್ಥನೆಗಳ ಬಾಯಿಪಾಠ, ಪರಮ ಪ್ರಸಾದದ ಮಹತ್ವ ತಿಳುವಳಿಕೆಯ ಶಿಕ್ಷಣ ನೀಡಿ ಭಾನುವಾರದಂದು ಆಯ್ದ 9 ಮಕ್ಕಳಿಗೆ ಪರಮ ಪ್ರಸಾದ ದಿವ್ಯ ಸಂಸ್ಕಾರದ ದೀಕ್ಷೆಯನ್ನು ಚರ್ಚಿನ ಪ್ರಧಾನ ಫಾ|ಸ್ಟ್ಯಾನಿ ತಾವ್ರೊ ನೀಡಿದರು. ಈ ಮೂಲಕ ಈ ಮಕ್ಕಳು ಇನ್ನು ಮುಂದೆ ಯೇಸು ಕ್ರಿಸ್ತರ ಹೆಸರಿನಲ್ಲಿ ನೀಡುವ ದಿವ್ಯ ಪ್ರಸಾದವನ್ನು ಸ್ವೀಕರಿಸ ಬಹುದಾಗಿದೆ.
ಈ ಸಂದರ್ಭದಲ್ಲಿ ಕೋಟಾ ಚರ್ಚಿನ ಫಾ|ಆಲ್ಫೊನ್ಸ್ ಡಿಲಿಮಾ ‘ಪರಮ ಪ್ರಸಾದ ನಮಗೆ ಬಹು ಪವಿತ್ರವಾದುದು, ಯೇಸು ಕ್ರಿಸ್ತರು ನವ ಜಗತ್ತಿಗಾಗಿ, ತನ್ನನ್ನೆ ತಾನು ಮುರಿದು ಕೊಂಡಂತೆ, ಮುರಿಯುವ ರೊಟ್ಟಿಯಾದರು. ಅವರ ದೇಹವನ್ನು ಮುರಿದಂತೆ, ಅದೇ ನೆನಪಿನಲ್ಲಿ ರೊಟ್ಟಿಯನ್ನು ಮುರಿದು ಹಂಚಿಕೊಂಡು ತಿನ್ನಿರಿ, ಇದಕ್ಕೆ ಕಾರಣ ಯೇಸುವಿನ ಕಾಲದಲ್ಲಿ ಸಮಾಜ ಒಡೆದು ಚೂರು ಚೂರಾಗಿ ವಿವಿಧ ಪಂಗಡಗಳಾಗಿ ಬಾಳುತಿದ್ದ ಅವರಿಗೆ, ನಾವೆಲ್ಲಾ ಒಂದೇ ದೇವರ ಮಕ್ಕಳು ಎಂದು ಸಂದೇಶ ಸಾರಿದ್ದರು, ಅದರಂತೆ ಈಗ ಪರಮ ಪ್ರಸಾದದ ದೀಕ್ಷೆ ಪಡೆದ ಮಕ್ಕಳು ಮತ್ತು ದೊಡ್ಡವರು, ನಾವು ಪವಿತ್ರ ಪ್ರಸಾದವನ್ನು ಸೇವಿಸಲು ಯೋಗ್ಯರೆಂದು ತಿಳಿದುಕೊಂಡು, ಚರ್ಚಿನ ಒಳಗಡೆ ಮಾತ್ರವಲ್ಲಾ, ಹೊರಗು ನಾವು ಹಾಗೇ ಬಾಳಿ ಪವಿತ್ರ ಪ್ರಸಾದದ ಗೌರವನ್ನು ಉಳಿಸಿಕೊಳ್ಳೊಣ’ ಎಂದು ಪರಮ ಪ್ರಸಾದ ದೀಕ್ಷೆ ಪಡೆದ ಮಕ್ಕಳಿ ಹಾಗೂ ಅವರ ಹೆತ್ತವರು, ಕುಟುಂಬಸ್ತರಿಗೆ ಉದ್ದೇಶಿಸಿ ಸಂದೇಶ ನೀಡಿದರು.
ಈ ಪವಿತ್ರ ಸಂಸ್ಕಾರದ ಬಲಿದಾದಲ್ಲಿ ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಭಾಗಿಯಾದರು. ಫಾ|ರೋಯ್ ಲೋಬೊ ಗಾಯನ ಪಂಗಡದ ಉಸ್ತುವಾರಿಯನ್ನು ವಹಿಸಿದ್ದರು. ಪರಮ ಪ್ರಸಾದದ ದಿವ್ಯ ಸಂಸ್ಕಾರಕ್ಕೆ ಮಕ್ಕಳು ಅಣಿಯಾಗಲು ಸಿಸ್ಟರ್ ವೀಣಾ ಅವರನ್ನು ತರಬೇತಿಯನ್ನು ನೀಡಿದ್ದರು. ಫಾ|ಸ್ಟ್ಯಾನಿ ತಾವ್ರೊ ಪರಮ ಪ್ರಸಾದದ ದೀಕ್ಷೆಯನ್ನು ಪಡೆದ ಮಕ್ಕಳಿಗೆ ಅಭಿನಂದಿಸಿದರು.