ಕುಂದಾಪುರದಲ್ಲಿ ಪಾಸ್ಖ ಹಬ್ಬದ ಸಂಭ್ರಮ – ಕ್ರಿಸ್ತರ ಪುನರುತ್ಥಾನ ಮರಣವನ್ನು ಸೋಲಿಸಿ ಜಯಿಸಿದ ಹಬ್ಬ ಫಾ|ರೋಯ್ ಲೋಬೊ
ಕುಂದಾಪುರ,ಎ.21: ಸುಮಾರು 449 ವರ್ಷಗಳ ಇತಿಹಾಸ ಇರುವ ಉಡುಪಿ ಧರ್ಮ ಪ್ರಾಂತ್ಯದ ಅತೀ ಪುರಾತನ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸು ಕ್ರಿಸ್ತರು ಶುಭ ಶುಕ್ರವಾರದಂದು ಶಿಲುಭೆ ಮರಣ ಹೊಂದಿ ವiೂರನೇ ದಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ, ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಂಜೆಯ ಕತ್ತಲಿನಲ್ಲಿ ಚರ್ಚ್ ಮೈದಾನದಲ್ಲಿ ಪಾಸ್ಖದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ಯೇಸು ಮರಣ ಹೊಂದಿ ಕತ್ತಲೆಯಲ್ಲಿದ್ದ ನಮಗೆ, ಯೇಸು ಪುನರುತ್ಥಾನ ಹೊಂದಿ ಬೆಳಕು ನೀಡಿದ್ದಾನೆ ಎಂಬ ಅರ್ಥದಲ್ಲಿ ಈ ಮಹಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಧಾರ್ಮಿಕ ವಿಧಿ ವಿಧಾನಗಳನ್ನು ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ನಡೆಸಿಕೊಟ್ಟರು..
ಪಾಸ್ಖದ ಮೊಂಬತ್ತಿಯ ಬೆಳಕಿನಿಂದ ವಿಶ್ವಾಸಿಗರು ತಮ್ಮ ಮೊಂಬತ್ತಿಗಳನ್ನು ಬೆಳಗಿಸಿಗೊಂಡು ದೇವಾಲಯದ ಒಳಗೆ ಪ್ರವೇಶಿಸಿದ ತರುವಾಯ, ಎರಡನೆ ಭಾಗವಾಗಿ ದೇವರ ವಾಕ್ಯಗಳ ವಿಧಿ ನಡೆಯಿತು.
‘ಇವತ್ತು ನಮಗೆ ನವ ಜೀವನದ ಸಂಭ್ರಮ, ಕ್ರಿಸ್ತರು ಮರಣದ ಮೇಲೆ ವಿಜಯ ಸಾಧಿಸಿದ ಸಂಭ್ರಮ. ಶುಭ ಶುಕ್ರವಾರದಂದು ಯೇಸುವಿನ ಮೇಲೆ ಜನರ ಅಧಿಕಾರ ನಡೆಯಿತು, ಆದರೆ ಆಲ್ಲೆಲೂಯ ಶನಿವಾರ ದೇವರ ಅಧಿಕಾರ ನಡೆದು ಯೇಸು ಕ್ರಿಸ್ತರು ಪುನರುತ್ಥಾನಗೊಂಡು ದೇವರ ತನ್ನ ಮಹಿಮೆಯನ್ನು ತೋರಿಸುತ್ತಾರೆ. ಯೇಸು ಕ್ರಿಸ್ತರು ಪುನರುತ್ಥಾನಗೊಂಡು ನಿಮಗೆಲ್ಲರಿಗೂ ಶಾಂತಿ ಎಂದು ಶಾಂತಿಯನ್ನು ನೀಡುತ್ತಾನೆ, ಆ ಶಾಂತಿಯನ್ನು ನಾವೆಲ್ಲರೂ ಹಂಚಿಕೊಳ್ಳೋಣ. ಪುನರುತ್ಥಾನ ಅಂದರೆ ಯೇಸು ಕ್ರಿಸ್ತರು ಸಾವನ್ನು ಸೋಲಿಸಿ, ಸಾವನ್ನು ಗೆದ್ದ ಹಬ್ಬ. ನಮಗೂ ಕೂಡ ಮರಣ ಹೊಂದಿದ ಮೇಲೆ ಪುನರ್ಜೀವ ಪಡೆದು ದೇವರ ಸಮ್ಮುಖದಲ್ಲಿ ಹಾಜರಾಗುವ ಭಾಗ್ಯವಿದೆ, ಆದರಿಂದ ನಾವು ಯೇಸು ಕ್ರಿಸ್ತರು ಹೇಳಿಕೊಟ್ಟ ಸನ್ಮಾರ್ಗದಲ್ಲಿ ನಡೆಯೋಣ’ ಎಂದು . ಧರ್ಮಗುರು ವಂ|ರೋಯ್ ಲೋಬೊ ಸಂದೇಶಾ ನೀಡಿದರು.
ಮೂರನೇ ಭಾಗದಲ್ಲಿ ಜಲವನ್ನು ಪವಿತ್ರೀಕರಿಸಿ, ಸ್ನಾನ ದಿಕ್ಷೆಯ ವೇಳೆ ಮಾಡಿದ ಪ್ರತಿಜ್ನೆಗಳನ್ನು
ಸಾರ್ವತ್ರಿಕವಾಗಿ ಮತ್ತೊಮ್ಮೆ ಮಾಡಲಾಯಿತು. ನಾಲ್ಕನೆ ಭಾಗವಾಗಿ ಕ್ರಿಸ್ತ ಪ್ರಸಾದದ ಪವಿತ್ರ ಬಲಿ ಪೂಜೆಯನ್ನು ಸಮರ್ಪಿಸಲಾಯಿತು, ಈ ಬಣ್ ಅಮ್ರತ್ ಮಾರ್ಟಿಸ್ ಬಲಿದಾದಲ್ಲಿ ಭಾಗವಹಿಸಿದ್ದರು. ಈ ಪಾಸ್ಖ ಹಬ್ಬದ ಮಹಾ ಹಬ್ಬದ ಭಕ್ತಿ ಸಂಭ್ರಮದಲ್ಲಿ ಅನೇಕ ಧರ್ಮಭಗಿನಿಯರು, ಪಾಲನ ಮಂಡಳಿ ಸದಸ್ಯರು, ಗುರಿಕಾರರು ಹಾಗೂ ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡರು.