ಕುಂದಾಪುರದಲ್ಲಿ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ,ಶಿವಕಮಾರ್ ಪದಗ್ರಹಣ ಜೂಮ್ ನೇರ ವೀಕ್ಷಣೆ ಮತ್ತು ಪ್ರತಿಜ್ಞಾ ಕಾರ್ಯಕ್ರಮ

 

JANANNUDI.COM NET WORK

 

 

ಕುಂದಾಪುರದಲ್ಲಿ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ,ಶಿವಕಮಾರ್ ಪದಗ್ರಹಣ ಜೂಮ್ ನೇರ ವೀಕ್ಷಣೆ ಮತ್ತು ಪ್ರತಿಜ್ಞಾ ಕಾರ್ಯಕ್ರಮ

 

 

ಕುಂದಾಪುರ, ಜು.2: ನೂತನ ಕೆ.ಪಿ.ಸಿ.ಸಿ. ಅಧ್ಯಕ್ಷರ ಮತ್ತು ಮೂವರು ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿ ಹೋಳಿ ಮತ್ತು ಸಲೀಂ ಅಹ್ಮದ್ ಅವರುಗಳ ಪದಗ್ರಹಣದ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯ ಮತ್ತು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಪ್ರತಿಜ್ಞಾ ವಿಧಿ ಕುಂದಾಪುರ ಪುರಸಭಾ ವ್ಯಾಪ್ತಿಯ ಕಾರ್ಯಕ್ರಮ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೆ.ಪಿ.ಸಿ.ಸಿ. ವೀಕ್ಷಕರದಾದ ಮಮತಾ ಗಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ‘ಕಾಂಗ್ರೆಸ್ ಪಕ್ಷದವರು ತಾಯಿ ಸಮಾನವೆಂದು ಸ್ವೀಕರಿಸಬೇಕು, ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿರುವ ಆಡಳಿತ ಮಾಡುವ ಸರಕಾರಗಳು ಸಂಪೂರ್ಣವಾಗಿ ವಿಫಲಗೊಂಡಿವೆ. ಡಿಕೆಶಿ ಯವರು ಒರ್ವ ಅತ್ಯಂತ ಸಮರ್ಥ ನಾಯಕರು ಅವರ ಜೊತೆ ಕೂಡಿ ನಾವು ಪಕ್ಷವನ್ನು ಗಟ್ಟಿಕೊಳಿಸೋಣ, ಅದಕ್ಕಾಗಿ ನಾವು ಇವತ್ತು ಎಲ್ಲರೂ ಪ್ರತಿಜ್ಞೆ ಮಾಡೋಣ’ ಎಂದು ಸಂದೇಶ ನೀಡಿದರು.
ಇವರ ಜೊತೆಗೆ ಬ್ಲಾಕ್ ಕಾಂಗ್ರೆಸ್ ಕುಂದಾಪುರದ ಅಧ್ಯಕ್ಷ ಹರಿ ಪ್ರಸಾದ್ ಶೆಟ್ಟಿ ಸ್ವಾಗತಿಸಿ ದೀಪ ಬೆಳಗಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರಿಗಾರ್, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಮಾಣಿ ಗೋಪಾಲ್. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದೇವಕಿ ಸಣ್ಣಯ್ಯ, ಮುಸ್ತಾಕ್ ಅಹ್ಮದ್, ಐ.ಟಿ ಶೇಲ್ ರಾಜ್ಯ ಕಾರ್ಯದರ್ಶಿ ಚಂದ್ರ ಶೇಖರ ಶೆಟ್ಟಿ, ಐ.ಟಿ ಶೇಲ್ ರಾಜ್ಯ ಉಪಾಧ್ಯಕ್ಷ ಸನ್ನತ್ ಹೆಗ್ಡೆ, ಯುತ್ ಕಾಂಗ್ರೆಸ್ ಡಿಜಿಟಲ್ ಯೂತ್ ಸಂಯೋಜಕ ರೋಶನ್ ಶೆಟ್ಟಿ, ಇಂಟಕ್ ಅಧ್ಯಕ್ಷ ಚಂದ್ರ ಅಮೀನ್, ಐ.ಟಿ ಶೇಲ್ ಅಧ್ಯಕ್ಷ ಶಿವಕುಮಾರ್ ಕೆ, ಅಲ್ಪ ಸಂಖ್ಯಾಕ ಘಟಕ ಹಾರೂನ್ ಸಾಹೇಬ್, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಅಬು ಮಹ್ಮದ್, ಶ್ರೀಧರ್ ಶೇರಿಗಾರ್, ಅಶ್ಪಕ್, ಲಕ್ಷ್ಮಿ ಭಾಯಿ. ಮಾಜಿ ನಾಮ ನಿರ್ದೇಶಿತ ಸದಸ್ಯ ಶಿವರಾಮ್ ಪುತ್ರನ್ ಮತ್ತಿತರರು ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಭಾಗಿಯಾದರು.
ಕಾರ್ಯಕ್ರಮ ಕಾಂಗ್ರೆಸ್ ಸದಸ್ಯೆ ಶೋಭಾ ಸಚಿತಾನಂದ್ ವಂದೇ ಮಾತಾ ಹಾಡುವ ಮೂಲಕ ಆರಂಭಗೊಳಿಸಲಾಯಿತು. ಸಂವಿಧಾನ ಪೀಠಿಕೆಯನ್ನು ಸೇವಾದಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರ ಖಾರ್ವಿ ನೇರವೆರಿಸಿದರು. ಸಾಮುಹಿಕ ಪ್ರತಿಜ್ಞೆಯನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುಸ್ತಾಕ್ ಅಹ್ಮದ್ ನೇರವೇರಿಸಿದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಪ್ರಸ್ತಾವಿಸಿ ಕಾರ್ಯ ನಿರೂಪಣೆ ಗೈದರು. ಮಾಜಿ ನಗರ ಪ್ರಾಧಿಕಾರ ಅಧ್ಯಕ್ಷ ವಿಕಾಸ್ ಹೆಗ್ಡೆ ವಂದಿಸಿದರು.