ಕುಂದಾಪುರದಲ್ಲಿ ಆ.25,26ರಂದು ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ಫೆಂಡ್ಸ್ ಟ್ರೋಫಿ 2019

JANANUDI.COM NETWORK

ಕುಂದಾಪುರದಲ್ಲಿ ಆ.25,26ರಂದು ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ಫೆಂಡ್ಸ್ ಟ್ರೋಫಿ 2019

ಕುಂದಾಪುರ :  ಫ್ರೆಂಡ್ಸ್ ಗ್ರೂಪ್ ಖಾರ್ವಿಕೇರಿ ಕುಂದಾಪುರ ಇದರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಅಖಿಲ ಕೊಂಕಣ ಖಾರ್ವಿ ಸಮಾಜ ಬಾಂಧವರಿಗಾಗಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟವು ಅಕ್ಟೋಬರ್ 25 ಮತ್ತು 26ರಂದು ಖಾರ್ವಿಕೇರಿಯ ವೇಂಕಟೇಶ್ ಇಂಡಸ್ಟ್ರೀಸ್ ಮೈದಾನದಲ್ಲಿ ನಿರ್ಮಿಸಲಾಗಿರುವ ಪ್ರೊ ಮಾದರಿಯ ಕಬ್ಬಡ್ಡಿ ಕ್ರೀಡಾಂಗಣದಲ್ಲಿ ಜರಗಲಿದೆ. ಆ.25ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರೆ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ತಂಡಗಳು ಆಗಮಿಸುವ ನಿರೀಕ್ಷೆಗಳಿದ್ದು, ಪ್ರಥಮ ವಿಜೇತ ತಂಡ ರೂಪಾಯಿ 60,000 ನಗದು ಹಾಗೂ ಶಾಶ್ವತ ಫಲಕ ಮತ್ತು ದ್ವಿತೀಯ ವಿಜೇತ ತಂಡ ರೂ.40,000 ಹಾಗೂ ಶಾಶ್ವತ ಫಲಕ ಪಡೆಯಲಿದೆ. ಅಲ್ಲದೆ ಉತ್ತಮ ಹಿಡಿತಗಾರ, ದಾಳಿಗಾರ, ಸವ್ಯಸಾಚಿ ಆಟಗಾರ ಸೇರಿದಂತೆ ಶಿಸ್ತ ಬದ್ಧ ತಂಡಕ್ಕೆ ವಿಶೇಷ ನಗದು ಪುರಸ್ಕಾರವನ್ನೂ ಘೋಷಿಸಲಾಗಿದೆ. 26ರಂದು ಸಂಜೆ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿರುವ ಗಣ್ಯರು ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಿದ್ದು, ಜರಗುವ ಸಭಾಕಾರ್ಯ ಕ್ರಮಗಳಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ಕಾರ್ಯ ಕ್ರಮವನ್ನೂ ಹಮ್ಮಿ ಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬ್ಯೆಲ್ ಸಂಖ್ಯೆ 9448328614,8747089828 ಅಥವಾ ಸಂಘಟಕರನ್ನು ಸಂಪರ್ಕಿಸಲು ಕೋರಲಾಗಿದೆ.