ಕುಂದಾಪುರದಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯದಲ್ಲಿ ಉಂಟಾದ ಅತೀವ ಮಳೆಯಿಂದ ಜೀವ ಆಸ್ತಿ ಪಾಸ್ತಿ ನಷ್ಟದ ಸಮೀಕ್ಷೆ
ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪತ್ರಿಕಾ ಪ್ರಕಟಣೆ
ರಾಜ್ಯದಲ್ಲಿ ಇತ್ತೀಚೆಗೆ ಬಂದ ಅತೀವ ಮಳೆಯಿಂದ ಉಂಟಾದ ನೆರೆಯಿಂದಾಗಿ ಆಗಿರುವ ಜೀವಹಾನಿ, ಕೃಷಿ ಮತ್ತು ಆಸ್ತಿಪಾಸ್ತಿಗಳಿಗಾದ ನಷ್ಟದ ಸಮೀಕ್ಷೆಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ *ಮಾಜಿ ಸಚಿವರಾದ ಸನ್ಮಾನ್ಯ ರಮಾನಾಥ್ ರೈ* ಯವರ ಅಧ್ಯಕ್ಷತೆಯಲ್ಲಿ ನಿಯೋಗ ರಚಿಸಿ ಉಡುಪಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆಸಿ ಅಹವಾಲು ಸ್ವೀಕರಿಸಿ ವರದಿ ಸಲ್ಲಿಸುವಂತೆ ಆದೇಶಿಸಿಸಲಾಗಿದೆ.
ಈ ನಿಯೋಗದಲ್ಲಿ *ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಸನ್ಮಾನ್ಯ ಯು. ಟಿ. ಖಾದರ್, ಮಾಜಿ ಸಚಿವರಾದ ಸನ್ಮಾನ್ಯ ವಿನಯ್ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಐವನ್ ಡಿಸೋಜ, ಮಾಜಿ ಶಾಸಕರಾದ ಸನ್ಮಾನ್ಯ ಗೋಪಾಲ್ ಪೂಜಾರಿ, ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶ್ರೀ. ಮಿಥುನ್ ರೈ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ.ಅಶೋಕ್ ಕುಮಾರ್ ಕೊಡವೂರು* ಇವರೆಲ್ಲರೂ ಇರಲಿದ್ದು, *ದಿನಾಂಕ 21-8-2019 ಬುದವಾರ ಮದ್ಯಾಹ್ನ 2 ಘಂಟೆಗೆ ಕುಂದಾಪುರ ಪ್ರವಾಸಿ ಮಂದಿರಕ್ಕೆ ಬೇಟಿ ನೀಡಲಿದ್ದು , ಸಂತ್ರಸ್ತರು ಮತ್ತು ಅತಿವೃಷ್ಟಿಗೊಳಗಾದ ಪ್ರದೇಶದ ಕಾಂಗ್ರೆಸ್ ಮುಖಂಡರು ಈ ಸದಸ್ಯರನ್ನೊಳಗೊಂಡ ನಿಯೋಗಕ್ಕೆ ಅಹವಾಲು ನೀಡಬಹುದು . ಈ ಸಂದರ್ಭದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಪಕ್ಷದ ಪ್ರಮುಖರು ಉಪಸ್ಥಿತರಿರಬೇಕಾಗಿ ವಿನಂತಿ..
ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ
ಕುಂದಾಪುರ ಮತ್ತು ಕೋಟಾ