ಕುಂಚ ಕಲಾವಿದರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತ ಪ್ರಯತ್ನ ನಡೆಸಬೇಕು:ಕುಂಚ ಕಲಾವಿದರ ಸಂಘದ ಅಧ್ಯಕ್ಷ ಮುನಿರಾಜು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕುಂಚ ಕಲಾವಿದರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತ ಪ್ರಯತ್ನ ನಡೆಸಬೇಕು. ಕುಂಚ ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ರಾಜ್ಯ ಕುಂಚ ಕಲಾವಿದರ ಸಂಘದ ಅಧ್ಯಕ್ಷ ಮುನಿರಾಜು ಹೇಳಿದರು.  ತಾಲ್ಲೂಕಿನ ಎನಮರೇಪಲ್ಲಿ ಗ್ರಾಮದ ಪಂಚಮುಖಿ ಹನುಮ ದೇವಾಲಯದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲ್ಲೂಕು ಕುಂಚ ಕಲಾವಿದರ ಸಂಘದ ಸಭೆ ಉದ್ಘಾಟಿಸಿ ಮಾತನಾಡಿ, ಕುಂಚ ಕಲಾವಿದರು ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ಜನರ ಗಮನ ಸೆಳೆದು ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ಎಂದು ಹೇಳಿದರು.  ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌ ಮಾತನಾಡಿ, ಕುಂಚ ಕಾವಿದರು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ವೃತ್ತಿಯನ್ನು ರೂಪಸಿಕೊಳ್ಳಬೇಕು ಎಂದು ಹೇಳಿದರು.  ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮುನಿಕೃಷ್ಣ, ಸಂಚಾಲಕರಾದ ವಿ.ಪಿ.ನರಸಿಂಹಯ್ಯ, ವೆಂಕಟೇಶ್‌, ತಾಲ್ಲೂಕು ಘಟಕದ ಗೌರವಾಧ್ಯಕ್ಷ ರವೀಂದ್ರ, ಅಧ್ಯಕ್ಷ ಶಿವಾನಂದ, ಮುಖಂಡರಾದ ಆನಂದ್‌, ಮಂಜುನಾಥ್‌, ಬಾಲು, ವೆಂಕಟರವಣ, ಶ್ರೀರಾಮ್‌, ಅನಿಲ್‌, ಬಿ.ಎಂ.ಗಣೇಶ್‌, ನಾರಾಯಣಸ್ವಾಮಿ, ಚಂಟಿ ಇದ್ದರು.