ಕಾಲಿಗೆ ಕೋಳ ಬಿಗಿದು ಪಂಚ ಗಂಗಾವಳಿಯಲ್ಲಿ ಈಜಿನ ದಾಖಲೇ ಬರೆದ ಸಂಪತ್ ಖಾರ್ವಿ

JANANUDI.COM NETWORK

 

ಕಾಲಿಗೆ ಕೋಳ ಬಿಗಿದು ಪಂಚ ಗಂಗಾವಳಿಯಲ್ಲಿ ಈಜಿನ ದಾಖಲೇ ಬರೆದ ಸಂಪತ್ ಖಾರ್ವಿ

ಕುಂದಾಪುರ , ಸ್ಥಳೀಯ ಖಾರ್ವಿ ಕೇರಿಯ ಈಜು ಪ್ರತಿಭೆ ಕುಂದಾಪುರ ಭಂಡಾರ್ ಕಾರ್ ಕಾಲೇಜಿನ ಪದವಿ ವಿದ್ಯಾರ್ಥಿ ಸಂಪತ್ ಡಿ ಖಾರ್ವಿ ಅವರು ನಿನ್ನೆ ಬಸ್ರುರು ರೈಲು ಸೇತುವೆ ಬಳಿಯಿಂದ ಗಂಗೊಳ್ಳಿ ಕಡವಿನ ತನಕ ಕಾಲುಗಳಿಗೆ ಸರಪಳಿಗಳನ್ನು ಬಿಗಿದು ಈಜುವ ಮೂಲಕ ನೂತನ ವೈಯುಕ್ತಿಕ ದಾಖಲೆ ನಿರ್ಮಿಸಿದ್ದಾರೆ. ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಖಾರ್ವಿಯವರು ಸಂಪತ್ ಅವರ ಕಾಲುಗಳಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಲುಗಳಿಗೆ ಸರಪಳಿಗಳನ್ನು ತೋಡಿಸುವ ಮೂಲಕ ಆರಂಭ ಗೊಂಡ ಸಂಪತ್ ಅವರ ಈಜಿನ ಜೈತ್ರ್ಯ ಯಾತ್ರೆ ಸರಿಸುಮಾರು ನಾಲ್ಕು ಗಂಟೆಗಳ ಅವಿರತವಾಗಿ ನಡೆದುಸಂಜೆ 5ಗಂಟೆ.5ನಿಮಿಷಗಂಟೆ ಗೆ ಗಂಗೊಳ್ಳಿ ಕಡುವಿನ ಸಮೀಪ ಅಂತ್ಯಗೊಂಡಿತು.ಸಂಪತ್ ಅವರಿಗೆ ರಕ್ಷಣಾ ವ್ಯೂಹ ವಾಗಿ ಈಜುಗಾರರಾದ ಸಂಪತ್ ತಂದೆ ದೇವರಾಯ ಖಾರ್ವಿ,ಸುಬ್ರಹ್ಮಣ್ಯ ಖಾರ್ವಿ, ಮಣಿ ಖಾರ್ವಿ,ರಂಜಿತ್ ಖಾರ್ವಿ, ಹರೀಶ ಖಾರ್ವಿ ಮುಂತಾದವರು ಸರಿಸುಮಾರು 25 ಕಿ.ಮೀ. ಯಷ್ಟು ಕ್ರಮಿಸಿ ಸಹಕಾರ ನೀಡಿದರು. ಈ ಸಂಧರ್ಭದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರಾದ ವಿಜಯ ಶಂಕರ್. ದೈಹಿಕ ಶಿಕ್ಷಕ ಆನಂದ ಪೂಜಾರಿ, ತಲ್ಲೂರು ಗ್ರಾ. ಪಂ. ಸದಸ್ಯ ಸುನೀಲ್ ಖಾರ್ವಿ ತಲ್ಲೂರು,ಅಶೋಕ್ ಕೆರೆಕಟ್ಟೆ. ಮಾನಸ ಜ್ಯೋತಿಯ ಮುಖ್ಯಸ್ಥೆ ಶೋಭಾ ಮಧ್ಯಸ್ಥ ಸಹಿತ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದು ಸಂಪತ್ ಅವರಿಗೆ ಶುಭ ಕೋರಿದರು.ಸಂಪತ್ ಅವರು ನದಿಯಲ್ಲಿ ಸಾಗಿದ ಹಾದಿಯುದ್ದಕ್ಕೂ ಇನ್ನಿತರ ದೋ ಣಿಗಳಲ್ಲಿ ಹಿಂಬಾಲಿಸಿದ ಅಭಿಮಾನಿಗಳು ಡೋಲು ಚಂಡೆ ವಾದನಗಳನ್ನು ಬಾರಿಸುವ ಮೂಲಕ ಸಂಪತ್ ಅವರಿಗೆ ಹುರಿದುಂಬಿಸಿದರು.ತೀರದ ಉದ್ದಕ್ಕೂ ಕಾದು ಕುಂತಿದ್ದ ಸಾವಿರಾರು ಸಾರ್ವಜನಿಕರು ಸಂಪತ್ ಅವರ ಸಾಹಸ ಗಾಥೆ ಯನ್ನು ಕಣ್ತುಂಬಿ ಕೊಂಡು ಹರಿಸಿದರು.ಗಂಗೊಳ್ಳಿ ಬಂದರಿನಲ್ಲಿ ಎಸ್ ಐ. ವಾಸಪ್ಪ ನಾಯ್ಕ್ಫ್ ಸಂಪತ ಅವ್ರನ್ನಬರ ಮಾಡಿ ಕೊಂಡು ಆತನ ಸಾಧನೆಯನ್ನು ಶ್ಲಾಘಿಸಿದರು
ಸಂಧರ್ಭ ದಲ್ಲಿ ಅಲ್ಲಿ ಉಪಸ್ಥಿತರಿದ್ದ ಯುವ ಬ್ರಿಗೇಡ್ ಖಾರ್ವಿ ಕೆರಿ ಕುಂದಾಪುರ ಇದರ ಸದಸ್ಯರು ಸಂಪತ್ ಅವರನ್ನು ಸನ್ಮಾನಿಸಿದರು. ಹರ್ಷವರ್ಧನ್ ಖಾರ್ವಿ ಕಾರ್ಯ ಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ರೂವಾರಿ ಪತ್ರಕರ್ತ ಮಝರ್ ಕುಂದಾಪುರ ಉಪಸ್ಥಿತರಿದ್ದು ಕಾರ್ಯ ಕ್ರಮವನ್ನು ಯಶಸ್ವಿ ಗೊಳಿಸಿ ಸಂಪತ್ ಅವರ ದಾಖಲೆಗೆ ಸಾಕ್ಷಿ ಯಾಗಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಗಳನ್ನು ಅರ್ಪಿಸಿದರು.