ಕಾರ್ಟೂನ್ ಕ್ಷೇತ್ರಕ್ಕೆ ನಮ್ಮೂರಿನ ಕೊಡುಗೆ ತುಂಬ ಉಂಟ್.  ಹೇಳುಕ್ ನಂಗಂತೂ ಹೆಮ್ಮೆ:ನಟ ನಿದೇರ್ಶಕ ರಿಷಬ್ ಶೆಟ್ಟಿ

JANANUDI.COM NETWORK 

 

ಕಾರ್ಟೂನ್ ಕ್ಷೇತ್ರಕ್ಕೆ ನಮ್ಮೂರಿನ ಕೊಡುಗೆ ತುಂಬ ಉಂಟ್.  ಹೇಳುಕ್ ನಂಗಂತೂ ಹೆಮ್ಮೆ:ನಟ ನಿದೇರ್ಶಕ ರಿಷಬ್ ಶೆಟ್ಟಿ

 

 

 

ಕುಂದಾಪುರ: 24: ನಾವು ಸ್ವಲ್ಪ ಹಡಿ ಪಳ್ದಿ ಮಾಡುದು. ಯಾರ್‍ಯಾರ್ದೊ  ಕಾಲೆಳುದ್ ಜಾಸ್ತಿ. ಹಾಂಗೆ ನಮ್ಮೂರಗ್ ಹೆಚ್ಚಿನ್ ಜನ ಕಾರ್ಟೂನಿಸ್ಟ್ ಆಪುಕ್ ಸಾಧ್ಯ ಆಯ್ತ್. ಕಾರ್ಟೂನ್ ಕ್ಷೇತ್ರಕ್ಕೆ ನಮ್ಮೂರಿನ ಕೊಡುಗೆ ತುಂಬ ಉಂಟ್. ಕಾರ್ಟೂನಿಸ್ಟರ ಇಡೀ ಬಳಗವೇ ಕುಂದಾಪುರದಲ್ ಇತ್ತ್ ಅಂದ್ ಹೇಳುಕೆ ನಂಗಂತೂ ಹೆಮ್ಮೆ ಅನ್ಸುತ್.’ ಎಂದು. ಕುಂದಾಪುರ ಕಾರ್ಟೂನ್ ಬಳಗ ಆಶ್ರಯದಲ್ಲಿ ಇಲ್ಲಿನ ಪದವಿಪೂರ್ವ ಕಾಲೇಜು ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಶನಿವಾರ ನಡೆದ ಕಾರ್ಟೂನ್ ಹಬ್ಬ ಉದ್ಘಾಟಿಸಿ ಖ್ಯಾತ ನಟ ನಿದೇರ್ಶಕ ರಿಷಬ್ ಶೆಟ್ಟಿ ಕುಂದಾಪುರ ಕನ್ನಡದಲ್ಲೇ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

  ’ ನಾವು ಹೋದಲ್ಲೆಲ್ಲಾ ನಮ್ಮ ಭಾಷಿ ಕೇಳಿ ರೇಗಿಸುವವರೆ ಹೆಚ್ಚು. ನಮ್ಮ ಮಾತಲ್ಲೆ ನಾವು ಎಲ್ಲರನ್ನೂ ನಗ್ಸತೇವೆ. ಹಾಗೇ ಮೊನಚಾದ ರೇಖೆಯ ಮೂಲಕ ನಮ್ಮೂರಿನ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಎಲ್ಲರನ್ನೂ ನಗ್ಸತಾರೆ.. ಸತೀಶ್ ಆಚಾರ್ಯ ಅವರು ರಚಿಸುವ ಕಾರ್ಟೂನುಗಳನ್ನು ಆಗಾಗೆ ನೋಡಿ ನಗ್ತಾ ಇರ್‍ತೆನೆ. ನಾವು ಬ್ರಿಟೀಷ್ ಶಿಕ್ಷಣ ಪದ್ದತಿಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಮಕ್ಕಳು ಜೀವನ ಹೇಗೆ ಎನ್ನುವುದುನ್ನು ಕಲಿಯುತ್ತಿದ್ದರು. ಆದರೆ ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಇಂದು ಇಲ್ಲ. ಈ ವ್ಯವಸ್ಥೆ ಮತ್ತೆ ವಾಪಾಸಾದರೆ ಮಾತ್ರ ನಾವು ನಮ್ಮ ತನವನ್ನು ಉಳ್ಸಕೊಳ್ಳಬಹುದು’ ಎಂದು ಅವರು ನುಡಿದರು..

    . ನಮ್ಮ ಕಲೆ, ಸಂಸ್ಕೃತಿ, ನಾಡು-ನುಡಿ ಇವೆಲ್ಲವನ್ನೂ ಇಟ್ಕೊಂಡ್ ನಾವ್ ಹೇಳೋಕೆ ಹೊದಾಗ ಒಂದೊಳ್ಳೆ ಗಟ್ಟಿಯಾದ ಕತೆ ರೂಪುಗೊಳ್ಳುತ್ತದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾದಲ್ಲೂ ನನ್ನ ಜೀವನದ ಕತೆಗಳನ್ನೇ ಬಳಿಸಿಕೊಂಡು ಸಿನೆಮಾ ಮಾಡಿದ್ದೇನೆ. ಆ ಸಿನೆಮಾದಲ್ಲಿ ಬರುವ ಪ್ರವೀಣನ ಪಾತ್ರ ಅದು ನನ್ನ ಅಣ್ಣನ ಕತೆ. ಸಣ್ಣವನಿದ್ದಾಗ ನಾನು ಮುಮ್ಮುಟ್ಟಿಯಂತೆ ಮುಗ್ದ.. ಇವೆಲ್ಲ ಬಳ್ಸಕೊಂಡ್ ಒಂದೊಳ್ಳೆ ಸಿನೆಮ ಮಾಡುಕ ಸ್ಸಾಧ್ಯ ಆಯ್ತ್.. ನಮ್ಮ ಸುತ್ತಮುತ್ತ ನಡೆಯುವಂತಹ ವಿಚಾರಗಳನ್ನು ನಾವು ಹೆಚ್ಚು ಹೆಚ್ಚು ಗಮನಿಸುತ್ತಾ ಹೋಗಬೇಕ್. ಎಲ್ಲೂ ನಮ್ಮ ತನ ಬಿಟ್ಟುಕೊಡಬಾರದು’  ಎಂದು ರಿಷಬ್ ಶೆಟ್ಟಿ  ಹೇಳಿದರು.

    ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮಾತನಾಡಿ ’ಗಾಂಧಿಜೀ ಅವರ ಆಶಯ ಹೆಣ್ಣುಮಕ್ಕಳು ಸ್ವತಂತ್ರವಾಗಿ ಓಡಾಡಬೇಕು ಎನ್ನುವುದು. ಗಾಂಧೀಜಿ 150 ವರ್ಷದ ನಂತರವೂ ಮಹಿಳೆಯ ಶಕ್ತಿ ಅನಾವರಣ ಕೇವಲ50 % ರಷ್ಟಾಗಿದೆ. ಮೀಸಲಾತಿ, ರಾಜಕೀಯ ಮೀಸಲಾತಿಯಿಂದ ಯಾರನ್ನೂ ಮೇಲೆತ್ತಲು ಸಾಧ್ಯವಿಲ್ಲ. ಮಹಿಳೆಯರ ಬಗ್ಗೆ ಅನುಕಂಪ ಬೇಡ. ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಸಾಕು ನಡುರಾತ್ರಿಯಲ್ಲಿ ಮಹಿಳೆಯರು ನಿರ್ಭಯವಾಗಿ ಓಡಾಡುವ ಗಾಂಧೀಜಿಯವರ ಯೋಚನೆಗೆ ಶಕ್ತಿ ಸಿಕ್ಕಂತಾಗುತ್ತದೆ. ಮಹಿಳಾ ಶಕ್ತಿ ಅನಾವರಣವಾಗಬೇಕು. ಸ್ವಚ್ಛತೆ ಎಲ್ಲರ ಗುರಿಯಾಗಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆಯಿದ್ದು, ಅದನ್ನು ತಿಳಿದುಕೊಂಡು ಸ್ವಪ್ರಯತ್ನದಿಂದ ಯಶಸ್ವಿಯಾಗಬೇಕು.  ಪ್ರಯತ್ನ ಮಾಡಿದರೆ ಮಾತ್ರ ಸಾಧನೆ ಮೆಟ್ಟಿಲೇರಲು ಸಾಧ್ಯ’ ಎಂದು ದಿಕ್ಸೂಚಿ ಭಾಷಣ ಮಾಡಿದರು..

    ಮಣಿಪಾಲ ಗಾಂಧೀಜಿ ಅಧ್ಯಯನ ಕೇಂದ್ರ ನಿರ್ದೇಶಕ ಪ್ರೊ. ವರದೇಶ ಹಿರೇಗಂಗೆ, ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ  ಈ ಸಂದರ್ಭದಲ್ಲಿ ಮಾತನಾಡಿದರು

ಸನ್ಮಾನ
ಕನ್ನಡ ಮಾಧ್ಯಮ ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ವಿದ್ಯಾರ್ಥಿಗಳೇ ವಿಶೇಷವಾಗಿ ಅಭಿನಂದಿಸಿದರು. ಕುಂದಾಪುರದ ಕನ್ನಡ ಮಾಧ್ಯಮ ನಾಲ್ಕು ಶಾಲೆ ಮಕ್ಕಳು ಬೆಳಗ್ಗೆಯೇ ತಮ್ಮ ಶಿಕ್ಷಕರ ಜೊತೆ ಕಾರ್‍ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು. ಕಾರ್ಯಕ್ರಮ ಆರಂಭವಾದ ನಂತರ ರಿಷಬ್ ಶೆಟ್ಟಿ ಅಭಿನಂದನೆ ಅವಕಾಶ ಮಾಡಿಕೊಡಲಾಯಿತು. ನಾಲ್ಕು ಶಾಲೆಗಳಿಂದ ಇಬ್ಬರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಗಮಿಸಿದ್ದು, ಒಬ್ಬ ವಿದ್ಯಾರ್ಥಿ ರಿಷಬ್ ಶೆಟ್ಟಿ ಅವರಿಗೆ ಗುಲಾಬಿ ಕೊಟ್ಟು ಅಭನಂದಿಸಿದರೆ, ಮತ್ತೊಬ್ಬ ವಿದ್ಯಾರ್ಥಿ ಶುಭಾಶಯ ಬರೆಯುವ ಮೂಲಕ ಅಭಿನಂದಿಸಿದರು. ಹಿರಿಯ ವ್ಯಂಗ್ಯ ಚಿತ್ರಗಾರರಾದ ವಿ.ಜಿ. ನರೇಂದ್ರ, ಸುರೇಂದ್ರ, ಪವರ್‌ಲಿಪ್ಟರ್ ವಿಶ್ವನಾಥ ಗಾಣಿಗ ಅವರನ್ನು ಸಮ್ಮಾನಿಸಲಾಯಿತು

     ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ವ್ಯಂಗ್ಯ ಚಿತ್ರ ಕಲಾವಿದರಾದ ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ ಸನ್ಮಾನಕ್ಕೆ ಸಹಕರಿಸಿದರು. ಪತ್ರಕರ್ತ ಅವಿನಾಶ್ ಕಾಮತ್ ಸ್ವಾಗತಿಸಿ, ನಿರೂಪಿಸಿದರು. ಹವ್ಯಾಸಿ ಕಾರ್ಟೂನಿಸ್ಟ್ ರಾಮಕೃಷ್ಣ ಹೇರ್ಳೆ ವಂದಿಸಿದರು.

ಮಾಯಾ ಕಾಮತ್ ಸ್ಮರಣಾರ್ಥ ಸ್ಪರ್ಧೆ ನಡೆಯಿತು
ಮಧ್ಯಾಹ್ನದ ನಂತರದಲ್ಲಿ  ಮಾಯಾ ಕಾಮತ್ ಸ್ಮರಣಾರ್ಥ ಉಡುಪಿ, ದ.ಕ. ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಟೂನು ಸ್ಪರ್ಧೆ ನಡೆಯಿತು. ೫ನೇ ತರಗತಿವರೆಗಿನ ಮಕ್ಕಳಿಗೆ ಗಾಂಧೀಜಿ ಚಿತ್ರ ಬಿಡಿಸುವ ಸ್ಪರ್ಧೆ, ೬ ರಿಂದ ಕಾಲೇಜು ತನಕದ ಮಕ್ಕಳಿಗೆ ಗಾಂಧೀಜಿ ಈಶ್ವರ ಅಲ್ಲಾ ತೇರೋ ನಾಮ್ (ಕೋಮು ಸಾಮರಸ್ಯ) ಕುರಿತು ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು.

ಈ ಸಂದರ್ಭದಲ್ಲಿ ಬಾಳಿಗಾ ಆಸ್ಪತ್ರೆ ಮನೋವೈದ್ಯ ಡಾ. ಪಿ. ವಿ. ಭಂಡಾರಿ, ವಾಗ್ಮಿ ಡಾ. ಜಯಪ್ರಕಾಶ್ ಶೆಟ್ಟಿ ಉಡುಪಿ, ಸಾಧನಾ ಕಲಾ ಸಾಂಸ್ಕೃತಿಕ ಕೇಂದ್ರ ಕುಂದಾಪುರ ನಾರಾಯಣ ಐತಾಳ್ ಇದ್ದರು. ಕ್ರಿಕೆಟ್ ತರಬೇತುದಾರ ವಿಜಯ್ ಆಳ್ವ ಬ್ರಹ್ಮಾವರ ಅವರ ಸಮ್ಮಾನಿಸಲಾಯಿತು.