ಕಾರ್ಕಳ  ಕ್ರೈಸ್ಟ್ ಕಿಂಗ್  ಚರ್ಚಲ್ಲಿ ಯೇಸು ಸ್ವಾಮಿಯ ಕಷ್ಟ ಕಾರ್ಪಣ್ಯದ ಶಿಲುಭೆಯ ಪಯಣದ ಪ್ರದರ್ಶನ

Photos: jyothi olivia cabral

ಕಾರ್ಕಳ  ಕ್ರೈಸ್ಟ್ ಕಿಂಗ್  ಚರ್ಚಲ್ಲಿ ಯೇಸು ಸ್ವಾಮಿಯ ಕಷ್ಟ ಕಾರ್ಪಣ್ಯದ ಶಿಲುಭೆಯ ಪಯಣದ ಪ್ರದರ್ಶನ

ಕಾರ್ಕಳ, ಎ.೨೦: ಕಾರ್ಕಳ ಟೌನಿನ ಕ್ರೈಸ್ಟ್ ಕಿಂಗ್  ಚರ್ಚಲ್ಲಿ ಯೇಸು ಸ್ವಾಮಿಯ ಕಷ್ಟ ಕಾರ್ಪಣ್ಯದ ಶಿಲುಭೆಯ ಪಯಣ ಇಗರ್ಜಿಯ ಮೈದಾನದಲ್ಲಿ ತೆರೆದ ಪ್ರದರ್ಶನವನ್ನು ಮಾಡಲಾಯಿತು. ಈ ಪರ್ದರ್ಶನ ಚರ್ಚಿನ ಪ್ರಧಾನ ಧರ್ಮಗುರು ವಂ| ಜೊಸ್ವಿನ್ ಫೆರ್ನಾಂಡಿಸ್ ಇವರ ಮಾರ್ಗದರ್ಶನದಲ್ಲಿ ನೆಡೆಯಿತು.

    ಈ ಪ್ರದರ್ಶನವು ಚರ್ಚ್ ಸದಸ್ಯ ರೋನಿ ಸ್ನೇಹ  ಇವರ ಸಂಯೋಜಕತ್ವದಲ್ಲಿ ನೆಡೆಯಿತು. ಯೇಸು ಕ್ರಿಸ್ತರ ಪಾತ್ರವನ್ನು ದೀಪಕ್ ಡಿಮೆಲ್ಲೊ, ಮುಖ್ಯ ಸಿಪಾಯಿಗಳ ಪಾತ್ರವನ್ನು ಹ್ಯಾರಿಸ್ಟನ್, ಮೀಲ್, ಎಲರೋಯ್, ಅರೋನ್, ಆಲ್ಬರ್ಟ್ ಇವರು ನಿರ್ವಹಿಸಿದರೆ, ಮೇರಿ ಮಾತೆಯ ಪಾತ್ರದಲ್ಲಿ ಸರಿತಾ ಸಲ್ಡಾನ್ಹಾ ಇವರು ನಿರ್ವಹಿಸಿದರು. ಆಪ್ತ ಶಿಷ್ಯ ಜುವಾಂವನ ಪಾತ್ರದಲ್ಲಿ ಡೆನಿಸ್ ಕಾರ್ಡೋಜಾ, ಸೀರೆನ್ ಸಿಮಾಂವಾನ ಪಾತ್ರದಲ್ಲಿ ಹ್ಯಾನ್ಸಿ ಕಾಸ್ಟೆಲೀನೊ ಮುಂತಾದವರು ಈ ಪ್ರದರ್ಶನದಲ್ಲಿ  ನಟಿಸಿದರು. ಎಲ್ಲರೂ ನೈಜ್ಯ ಅಭಿನಯ ಮಾಡಿ ಜನರ ಹ್ರದಯ ಮಿಡಿಯುವಂತೆ ಮಾಡಲು ಯಶಸ್ವಿಯಾದರು.  ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ರೋಶನ್ ಹಿರ್ಗಾನ್ ಉಪಸ್ಥಿತರಿದ್ದು , ಈ ಕಾರ್ಯಕ್ರಮವನ್ನು ವೀಕ್ಷಕರು ಅಧಿಕ ಸಂಖ್ಯೆಯಲ್ಲಿ  ಪಾಲುಗೊಂಡಿದ್ದರು.