ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವವಾದುದು- ಪ್ರತಾಪ್‍ರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವವಾದುದು- ಪ್ರತಾಪ್‍ರೆಡ್ಡಿ
ಕೋಲಾರ, ಜೂನ್ 18 ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಕೆಲಸವು ಅತ್ಯಂತ ಮಹತ್ವದ್ದಾಗಿದ್ದು ದಾಖಲಾಗುವ ದೂರಗಳ ಬಗ್ಗೆ ಸೂಕ್ತವಾಗಿ ತನಿಖೆ ನಡೆಸಿ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ಅವರು ತಿಳಿಸಿದರು. 
ನಗರ ಹೊರವಲಯದಲ್ಲಿನ ಡಿ.ದೇವರಾಜ ಅರಸು ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎಂಪೋರಿಂಗ್ ಪೊಲೀಸ್ ಪೋರ್ಸ್ ಕ್ರೈಂ ಸಿನ್ ಅಂಡ್ ಸ್ಟ್ರೆಸ್ ಮ್ಯಾನೇಜ್‍ಮೆಂಟ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆಯನ್ನು ಮಾಡುವಾಗ ಸ್ಥಳ ಪರಿಶೀಲನೆಯನ್ನೂ ಸೂಕ್ತವಾಗಿ ಮಾಡಬೇಕು. ಸಣ್ಣ ಸಣ್ಣ ಪ್ರಕರಣಗಳೆಂದು ನಿರ್ಲಕ್ಷ್ಯ ವಹಿಸುವುದು ಬೇಡ. ಪ್ರಕರಣವು ಚಿಕ್ಕದಾಗಲಿ ಅಥವಾ ದೊಡ್ಡದಾಗಲಿ ಅದನ್ನು ಪ್ರಾಮಾಣಿಕವಾಗಿ ಮಾಡಬೇಕು. ಅಪರಾಧಿಗಳಿಗೆ ಶಿಕ್ಷೆಯನ್ನು ಕೊಡಿಸಬೇಕಾದರೆ ಪ್ರತಿಯೊಂದು ಹಂತದಲ್ಲೂ ಜಾಗರೂಕತೆಯಿಂದ ಸಾಕ್ಷಾಧಾರಗಳನ್ನು ಕ್ರೂಢೀಕರಿಸಬೇಕೆಂದು ತಿಳಿಸಿದರು. 
ಪೊಲೀಸ್ ಇಲಾಖೆಯು ತನಿಖೆ ನಡೆಸಿದ ನಂತರ ಕೆಲವು ಪ್ರಕರಣಗಳು ಸಿ.ಬಿ.ಐ ಗೆ ಹೋಗುತ್ತವೆ. 3 ಅಥವಾ 4 ವರ್ಷಗಳ ನಂತರ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಿಬಿಐ ನವರು ಘಟನೆ ನಡೆದ ಸ್ಥಳದಲ್ಲಿ ಕೆಲವು ದಾಖಲೆಗಳನ್ನು ಕ್ರೂಡೀಕರಿಸುತ್ತಾರೆ. ಆದರೆ ಇಂತಹ ದಾಖಲೆಗಳು ನಮಗೆ ದೊರೆತಿಲ್ಲವೆಂದರೆ ಏನೆಂದು ಅರ್ಥೈಸಿಕೊಳ್ಳಬೇಕು? ಹಾಗಾಗಿ ಯಾವುದೇ ಪ್ರಕರಣಗಳನ್ನು ತನಿಖೆ ಮಾಡುವಾಗ ಜಾಗರೂಕತೆಯಿಂದ ದಾಖಲೆಗಳನ್ನು ಸಂಪಾದಿಸಬೇಕು ಎಂದರು. 
ಅಪರಾಧ ಪ್ರಕರಣಗಳಿಗೆ 100 ಮಂದಿಯಿಂದ ಸಾಕ್ಷಿ ಹೇಳಿಸುವುದಕ್ಕಿಂತ 1 ವೈದ್ಯಕೀಯ ಸಾಕ್ಷಿಯನ್ನು ಕಲ್ಪಿಸಿದರೆ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತದೆ. ಹಾಗಾಗಿ ಕ್ರೈಂ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಾಗ ವೈದ್ಯಕೀಯ ಇಲಾಖೆಯ ಸಹಕಾರವನ್ನು ಪಡೆದುಕೊಳ್ಳುವುದು ಸೂಕ್ತ. ಅಷ್ಟೇ ಅಲ್ಲದೆ ಮೃತ ದೇಹವನ್ನು ನುರಿತ ತಜ್ಞ ವೈದ್ಯರಿಂದ ಪೋಸ್ಟ್‍ಮಾಟಮ್ ಮಾಡಿಸುವ ಮೂಲಕ ಸೂಕ್ತ ಮಾಹಿತಿಯನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೇಳಿದರು. 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಕಾರ್ತೀಕ್‍ರೆಡ್ಡಿ ಅವರು ಮಾತನಾಡಿ, ಕ್ರೈಂನಲ್ಲಿ ಸರಿಯಾದ ರೀತಿ ತನಿಖೆ ಮಾಡಬೇಕು. ಮನುಷ್ಯನ ದೇಹಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಷಯಗಳು ಪೊಲೀಸರಿಗೆ ತಿಳಿದಿರುವುದಿಲ್ಲ. ಹಾಗಾಗಿ ಸಾಕಷ್ಟು ದೂರಗಳು ಕೋರ್ಟ್‍ನಲ್ಲಿ ಯಶಸ್ವಿಯಾಗುತ್ತಿಲ್ಲ. ಹಾಗಾಗಿ ಕ್ರೈಂ ನಡೆದ ಸ್ಥಳದಲ್ಲಿ ಯಾವ ರೀತಿಯಾಗಿ ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಕ್ರೂಢೀಕರಿಸಬೇಕು ಎಂಬ ಕುರಿತು ಈ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. 
ಯಾವುದೇ ಪ್ರಕಣಗಳನ್ನು ತನಿಖೆ ಮಾಡಲು ಪೊಲೀಸರ ವೈಯಕ್ತಿಕ ಸಾಮಥ್ರ್ಯವೂ ಮುಖ್ಯವಾಗಿರುತ್ತದೆ. ಹಾಗಾಗಿ ಯಾವ ರೀತಿ ವೈಯಕ್ತಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಕುರಿತು ಕಾರ್ಯಾಗಾರದಲ್ಲಿ ತಿಳಿಸಲಾಗುವುದು. ಈ ಸಂಬಂದ ಎಲ್ಲರೂ ಸಹ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. 
ಈ ಸಂದರ್ಭದಲ್ಲಿ ಡಾ.ಜಿ. ಪ್ರದೀಪ್ ಕುಮಾರ್, ಜಿ.ಹೆಚ್.ನಾಗರಾಜ್, ಜೆ.ರಾಜೇಂದ್ರ, ಡಾ.ಶ್ರೀರಾಮುಲು, ಡಾ.ಎಸ್.ಕುಮಾರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿ ವರ್ಗದವರು ಮತ್ತು ದೇವರಾಜ ಅರಸು ವೈದ್ಯಕೀಯ ಕಾಲೇಜಿನವರು ಉಪಸ್ಥಿತರಿದ್ದರು.