ವರದಿ: ಶಬ್ಬೀರ್ ಅಹ್ಮದ್ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ದೇಶ ಅಭಿವ್ರದ್ದಿಯಾಗಲ್ಲ: ಬಿಎಸ್‍ಪಿ ಪಕ್ಷ ಆಡಳಿತಕ್ಕೆ ಬರಬೇಕು
ಶ್ರೀನಿವಾಸಪುರ: ಸುಮಾರು 70 ವರ್ಷಗಳ ಯು.ಪಿ.ಎ. ಸರ್ಕಾರ ಮತ್ತು ಸುಮಾರು 15 ವರ್ಷಗಳ ಬಿ.ಜೆ.ಪಿ. ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸಿದರೂ ನಮ್ಮ ದೇಶ ಅಭಿವೃದ್ದಿಯತ್ತ ಸಾಗಿಲ್ಲ, ಈ ಬಾರಿ ಮಾಯಾವತಿಯವರು ಪ್ರಧಾನಮಂತ್ರಿಗಳಾಗುವುದು ಶತಸಿದ್ದವಾಗಿದ್ದು, ಬಿ.ಎಸ್ ಪಿ. ಪಕ್ಷವನ್ನು ಬಲಪಡಿಸಲು ಈ ಕ್ಷೇತ್ರದ ಅಭ್ಯರ್ಥಿ ಎಂ.ಜಿ. ಜಯಪ್ರಸಾದ್‍ರನ್ನು ಮತದಾರರು ಬೆಂಬಲಿಸಬೇಕೆಂದು ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದ್ದಾರೆ.
ಪಟ್ಟಣದಲ್ಲಿ ಬಿ.ಎಸ್.ಪಿ. ಪಕ್ಷದ ವತಿಯಿಂದ ಚುನಾವಣಾ ಪ್ರಚಾರದ ಸಲುವಾಗಿ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಮುನಿಯಪ್ಪ, ನಮ್ಮ ದೇಶವನ್ನು ಸ್ವತಂತ್ರ ಪೂರ್ವದಿಂದಲೂ ಕಾಂಗ್ರೆಸ್ ಆಡಳಿತ ನಡೆಸಿದ್ದು, ಜೊತೆಗೆ ಬಿ.ಜೆ.ಪಿ.ಪಕ್ಷವೂ ಸಹ ಆಡಳಿತ ನಡೆಸಿದೆ, ಆದರೂ ನಮ್ಮ ದೇಶದ, ನಮ್ಮ ರಾಜ್ಯದಲ್ಲಿ ನಿರುಧ್ಯೋಗ, ಬಡತನ, ಮೂಲಭೂತ ಸೌಲಭ್ಯಗಳು ತಾಂಡವಾಡುತ್ತಿವೆ, ರಾಜ್ಯದಲ್ಲಿ ಕೋಲಾರಜಿಲ್ಲೆ ತುಂಬಾ ಹಿಂದುಳಿದÀ ಜಿಲ್ಲೆಯಾಗಿದ್ದು ಈ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪ 7 ಬಾರಿ ಸಂಸದರಾಗಿ 2 ಬಾರಿ ಸಚಿವರಾಗಿ ನಮ್ಮ ಜಿಲ್ಲೆಗೆ ಶಾಸ್ವತವಾದ ಕೊಡುಗೆ ಏನೂ ತಂದಿಲ್ಲ. ನೀರಾವರಿ ಸಮಸ್ಯೆ, ಕೈಗಾರಿಕೆಗಳು, ರೈಲ್ವೆ ಕೋಚ್ ಫ್ಯಾಕ್ಟರಿ, ನಿರುಧ್ಯೋಗ ಸಮಸ್ಯೆ ಇವಾವು ಈಡೇರಲಿಲ್ಲ, ಇದು ಕಾಂಗ್ರೆಸ್ ಪಕ್ಷದ ಆಡಳಿತವಾಗಿದೆ.
ಮೋದಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿದ ಹಾಗೆ ಯಾವುದು ನಡೆದಿಲ್ಲ, ರೈತರ ಖಾತೆಗಳಿಗೆ ಹಣ ಜಮ ಮಾಡಿಲ್ಲ, ನಿರುಧ್ಯೋಗ ಸಮಸ್ಯೆ ಹಾಗೆಯೆ ಇದೆ, ನದಿಗಳ ಜೋಡಣೆಯಾಗಿಲ್ಲ, ಬಡವರಿಗೆ ಜಿ.ಎಸ್.ಟಿ. ಯಿಂದ ತೊಂದರೆಯಾಗಿದೆ, ಶ್ರೀಮಂತರಿಗೆ, ಡಿಮಾನಿಟರೈಸಿಂಗ್ ಅನುಕೂಲವಾಗಿದೆ, ಕೇವಲ 5 ವರ್ಷಗಳಲ್ಲಿ ಸುಳ್ಳು ಬರವಸೆಗಳನ್ನು ಹೇಳುತ್ತಾ ಕಾಲವನ್ನು ಕಳೆದಿದೆ, ಇಂತಹ ಮತದಾರ ಬಂದುಗಳು ಕಡಿವಾಣ ಹಾಕಿ ಬದಲಾವಣೆ ತರಬೇಕಾಗಿದೆ ಎಂದರು.
ಮಾಯಾವತಿ ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದು, ಪೌರಕಾÀರ್ಮಿಕರನ್ನು ಕಾಯಂ ನೌಕರಿಯಾಗಿ ಮಾಡಿದ್ದು, ಬಡವರಿಗೆ ಸರ್ಕಾರದ ಗೋಮಾಳ ಭೂಮಿಯನ್ನು ಗುರ್ತಿಸಿ ನಿವೇಶನಗಳನ್ನು ಹಂಚಿ ಸಾವಿರಾರು ಸಂಖ್ಯೆಯಲ್ಲಿ ವಸತಿ ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಈ ಬಾರಿ ದೇಶದ ಪ್ರಧಾನಿಗಳಾಗುವುದು ಖಚಿತವಾಗಿದ್ದು, ಬಿ.ಎಸ್.ಪಿ. ಪಕ್ಷವನ್ನು ಬಲಪಡಿಸಲು ಎಂಜಿ. ಜಯಪ್ರಸಾದ್ ರನ್ನು ಈ ಕ್ಷೇತ್ರದಿಂದ ಆರಿಸಲು ಮತದಾನ ಬಂದುಗಳು ಆಶೀರ್ವದಿಸಬೇಕೆಂದು ಕೋರಿದರು.
ಬಿ.ಎಸ್.ಪಿ. ಪಕ್ಷದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಜಿ. ಜಯಪ್ರಸಾದ್ ಮಾತನಾಡಿ ನಾನು ಇದೆ ಜಿಲ್ಲೆಯವನಾಗಿದ್ದು, ಒಬ್ಬ ನಿವೃತ್ತಿಯಾಗಿದ್ದು, ಈಭಾಗದ ಸಮಸ್ಯೆಗಳನ್ನು ಅರಿತಿದ್ದು, ಜನತೆಗೆ ಸೇವೆ ಮಾಡಲು ಆಶಾಭಾವನೆಯನ್ನು ಇಟ್ಟುಕೊಂಡಿದ್ದೇನೆ, ಈ ಚುನಾವಣೆಯಲ್ಲಿ ನನಗೊಮ್ಮೆ ಅವಕಾಶ ಮಾಡಿಕೊಡಿ, ನಾನು ಈ ಭಾಗದ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಿ ಈ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳಿ ಶ್ರಮಿಸಿ ಸದಾ ನಿಮ್ಮೊಂದಿಗೆ ಇರಲು ಅವಕಾಶ ಮಾಡಿಕೊಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ರಘುನಾಥ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್. ವಕೀಲ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಚಂದ್ರಶೇಕರ್, ನಗರಘಟಕ ಆಂಜಿ, ಕಾರ್ಯದರ್ಶಿ ಶ್ರೀನಿವಾಸ್, ಯುವಘಟಕದ ಅಧ್ಯಕ್ಷ ನಿರಂಜನ್, ಕಾರ್ಯದರ್ಶಿ ಶ್ರೀನಿವಾಸ್, ನರಸಿಂಹಪ್ಪ ಮತ್ತು ಅನೇಕ ಕಾರ್ಯಕರ್ತರು ಹಾಜರಿದ್ದರು.